15 ಕೋಟಿ ರೂ ಕೊಟ್ರೆ ದುಬೈ ಶೇಖ್ ಜೊತೆ ಮಲಗಬಹುದು! Influencer ಅಪೂರ್ವ ಮುಖಿಜಾ Video ಮತ್ತೆ ವೈರಲ್! ಏನಿದು ಹೊಸ ವಿವಾದ?
'ಚಿಕ್ಕ ಪಾತ್ರಗಳಿಗೆ ರಾಜಿ ಮಾಡಿಕೊಳ್ಳುವುದಿಲ್ಲ.ಆದರೆ ಲಾಭದಾಯಕ ಆಫರ್ ಅನ್ನು ಪರಿಗಣಿಸಬಹುದು ಎಂದು ವೈರಲ್ ವಿಡಿಯೋದಲ್ಲಿ ಅಪೂರ್ವ ಮುಖಿಜಾ ಹೇಳುವುದನ್ನು ಕೇಳಬಹುದು.

ರೆಬೆಲ್ ಕಿಡ್ ಎಂದೇ ಜನಪ್ರಿಯವಾಗಿರುವ ಇನ್ ಪ್ಲೋಯೆನ್ಸರ್ ಅಪೂರ್ವ ಮುಖಿಜಾ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದ್ದು ಪುನ: ವಿವಾದಕ್ಕೆ ಸಿಲುಕಿದ್ದಾರೆ. 15 ಕೋಟಿ ರೂ. ಕೊಟ್ರೆ ದುಬೈ ಶೇಖ್ ಜೊತೆ ಮಲಗಬಹುದು ಎಂದು ಹೇಳಿರುವುದು ವಿಡಿಯೋದಲ್ಲಿದೆ.
370 ರೂ. ಬಿರಿಯಾನಿ ಹೇಳಿಕೆಗೆ ಪ್ರಣಿತ್ ಮೋರ್ ಅವರ ಕ್ಷಮೆಯಾಚನೆ ಮತ್ತು ಮೃತಪಟ್ಟ ಪುರುಷ ಜನನಾಂಗಗಳಗಾತ್ರ ಕುರಿತ ಸೇಜಲ್ ಪವಾರ್ ಅವರ ವಿವಾದಾತ್ಮಕ ಹೇಳಿಕೆ, ಕ್ಷಮೆಯಾಚನೆ ಸೇರಿದಂತೆ ಸೋಶಿಯಲ್ ಮೀಡಿಯಾ ಕ್ರಿಯೇಟರ್ ಗಳ ವಿವಾದದ ನಡುವೆ ಅಪೂರ್ವ ಮುಖಿಜಾ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದು, ಮತ್ತೆ ವಿವಾದ ಹುಟ್ಟುಹಾಕಿದೆ.
'ಚಿಕ್ಕ ಪಾತ್ರಗಳಿಗೆ ರಾಜಿ ಮಾಡಿಕೊಳ್ಳುವುದಿಲ್ಲ.ಆದರೆ ಲಾಭದಾಯಕ ಆಫರ್ ಅನ್ನು ಪರಿಗಣಿಸಬಹುದು ಎಂದು ವೈರಲ್ ವಿಡಿಯೋದಲ್ಲಿ ಅಪೂರ್ವ ಮುಖಿಜಾ ಹೇಳುವುದನ್ನು ಕೇಳಬಹುದು.
ಎರಡು ರೂಪಾಯಿ ಪಾತ್ರಕ್ಕಾಗಿ ಯಾರೊಂದಿಗೂ ಮಲಗಲ್ಲ ಸರ್. ದುಬೈ ಶೇಖ್ ಅಂತಹವರು ನನ್ನ ಮುಖಕ್ಕೆ 10-15 ಕೋಟಿ ರೂ. ಎಸೆದರೆ, ನಾನು ಅದನ್ನು ಪರಿಗಣಿಸಬಹುದು. ಆದರೆ ಒಂದು ಪಾತ್ರಕ್ಕಾಗಿ? ಎಂದು ಅವರು ಹೇಳುತ್ತಾರೆ.
ಇದೇ ವಿಡಿಯೋದಲ್ಲಿ ಕಾಸ್ಟಿಂಗ್ ನಿರ್ದೇಶಕರೊಂದಿಗೆ ಮಾತನಾಡುವಾಗ ಹಿಂಜರಿಯುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಆದರೆ ಅಂತಹ ಅವಕಾಶಗಳನ್ನು ಇನ್ನೂ ಹುಡುಕುತ್ತಿರುವುದಾಗಿ ಅವರು ಹೇಳಿದ್ದಾರೆ. ಅವರ ವ್ಯವಸ್ಥಾಪಕರ ಸಂಪರ್ಕ ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



