ಧರ್ಮದ ವಿಚಾರವಾಗಿ 'The Rebel Kid' ಅಪೂರ್ವ ಮುಖಿಜಾ ಆನ್ ಲೈನ್ ನಲ್ಲಿ ವಿವಾದಕ್ಕೆ ಗುರಿ! Video ನೋಡಿ...
ವೈರಲ್ ವಿಡಿಯೋದಲ್ಲಿ ಏನಿದೆ? ಅಂದಹಾಗೆ, ಮುಖಿಜಾ ಸಾಮಾಜಿಕ ಮಾಧ್ಯಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ Get Ready with me ಮತ್ತು Outfit of my dreams ಎಂಬ ವಿಡಿಯೋಗಳು ವಿವಾದಕ್ಕೆ ಕಾರಣವಾಗಿವೆ.

'The Rebel Kid'ಎಂದೇ ಜನಪ್ರಿಯರಾಗಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ((Influencer)ಅಪೂರ್ವ ಮುಖಿಜಾ ಮತ್ತೆ ಆನ್‌ಲೈನ್ ನಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕೋಚೆಲ್ಲಾ ವ್ಯಾಲಿ ಸಂಗೀತ ಮತ್ತು ಕಲಾ ಉತ್ಸವಕ್ಕೆ ಸಿದ್ಧತೆ ಕುರಿತು ಹಂಚಿಕೊಳ್ಳಲಾದ ಇತ್ತೀಚಿನ ವೀಡಿಯೊವೊಂದು ಧರ್ಮದ ಚಿಹ್ನೆ ಮತ್ತು ಡಿಜಿಟಲ್ ವಿಷಯದ ಗಡಿಗಳ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.
ವೈರಲ್ ವಿಡಿಯೋದಲ್ಲಿ ಏನಿದೆ? ಅಂದಹಾಗೆ, ಮುಖಿಜಾ ಸಾಮಾಜಿಕ ಮಾಧ್ಯಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ Get Ready with me ಮತ್ತು Outfit of my dreams ಎಂಬ ವಿಡಿಯೋಗಳು ವಿವಾದಕ್ಕೆ ಕಾರಣವಾಗಿವೆ.
ಈ ವಿಡಿಯೋಗಳಲ್ಲಿ ಕೋಚೆಲ್ಲಾ ಕಾರ್ಯಕ್ರಮಕ್ಕೆ ಮುಖಿಜಾ ಅವರ ಉಡುಗೆ ಮತ್ತಿತರ ಶೃಂಗಾರ ಸಾಧನಗಳು ಮತ್ತು ಪರಿವರ್ತನೆ ವಿಧಾನವನ್ನು ತೋರಿಸಿದ್ದಾರೆ. ಸ್ಟೈಲಿಂಗ್ ಪರಿವರ್ತನೆ ಅಂತಾ ಹೇಳುವಾಗ ಮುಂಗೈಯಲ್ಲಿ ಕಟ್ಟಲಾದ ಕೆಂಪು ದಾರ (ಕಲಾವ) ಕತ್ತರಿಸುವುದು ಕಂಡುಬಂದಿದೆ. ಹಿಂದೂ ಆಚರಣೆಗಳಲ್ಲಿ ಇದಕ್ಕೆ ಪವಿತ್ರ ಸ್ಥಾನವಿದ್ದು, ವಿವಾದ ಹುಟ್ಟುಹಾಕಿದೆ.
ನನ್ನ ಆರ್ಚಕರು ಈ ದಾರವನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ. ಆದರೆ ನನ್ನ ಸೌಂದರ್ಯದ ಕೋಚೆಲ್ಲಾ ಚಿತ್ರಗಳ ನಡುವೆ ಏನಾದರೂ ಬರಲು ಸಾಧ್ಯವಾದರೆ, ಅದು ನಾನು ಮಾತ್ರ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತಗತಿಯಲ್ಲಿ ಹರಡಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ವಿವಾದ ಹುಟ್ಟುಹಾಕಲು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ ಮತ್ತೆ ಕೆಲವರು ಸೌಂದರ್ಯದ ವಿಷಯಕ್ಕಾಗಿ ಧಾರ್ಮಿಕ ಚಿಹ್ನೆಗಳನ್ನು ಸಾಂದರ್ಭಿಕವಾಗಿ ಪರಿಗಣಿಸಬಾರದು ಎಂದು ವಾದಿಸಿದ್ದಾರೆ.
ಸಂಗೀತ ಉತ್ಸವಕ್ಕಾಗಿ "ರೆಬೆಲ್ ಕಿಡ್ ಅಪೂರ್ವ ತನ್ನ ಕಲಾವ (ಕೆಂಪು ದಾರ) ಕತ್ತರಿಸುತ್ತಾರೆ. ಅವಳಂತಹ ಹುಡುಗಿಯರು ತಮಾಷೆಗಾಗಿ ಎಲ್ಲವನ್ನೂ ಮಾಡುತ್ತಾರೆ. ಆಕೆಯನ್ನು ತನ್ನ ತಾಯಿ ಎಂದು ಪರಿಗಣಿಸುವ ಅನೇಕ ನಿರುದ್ಯೋಗಿ ಹುಡುಗಿಯರು ಆಕೆ ಮಾಡುವ ಎಲ್ಲವನ್ನೂ copy ಮಾಡ್ತಾರೆ ಎಂದು ಮತ್ತೋರ್ವ ಬಳಕೆದಾರರೊಬ್ಬರು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


