ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಕಮಿಷನ್; ನವೆಂಬರ್ ಒಳಗೆ ಬಾಕಿ ಬಿಲ್ ಪಾವತಿಸದಿದ್ದರೆ ದಾಖಲೆ ಬಿಡುಗಡೆ: ಮತ್ತೆ ಸಿಡಿದೆದ್ದ ಗುತ್ತಿಗೆದಾರರು; Video
ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಂಜುನಾಥ್ ಅವರು, ಬಾಕಿ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಕಳೆದ ನಾಲ್ಕು ವರ್ಷದಿಂದ ಬಿಲ್ ಪಾವತಿಯಾಗದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. 8 ಇಲಾಖೆಯಲ್ಲಿ ಸುಮಾರು 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಬುಧವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಂಜುನಾಥ್ ಅವರು, ಬಾಕಿ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ ಸರ್ಕಾರಕ್ಕಿಂತಲೂ ಕಮಿಷನ್ ಹೆಚ್ಚಾಗಿದ್ದು, ಅದು ಎಷ್ಟು ಪರ್ಸೆಂಟೇಜ್ ಅಂತ ಕೇಳಬೇಡಿ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶೇ.70 ರಷ್ಟು ಶಾಸಕರಿಂದ ಕಮಿಷನ್ ಕಾಟ
ಇತ್ತೀಚಿಗೆ ಶಾಸಕರು ಸಹ ಗುತ್ತಿಗೆದಾರರ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಟೆಂಡರ್ ಆದ್ರೆ ಶಾಸಕರ ಬಳಿ ಮೊದಲು ಹೋಗಬೇಕು. ಅವರು ಓಕೆ ಅಂದಮೇಲೆ ಕಾಮಗಾರಿ ಶುರು ಆಗುತ್ತೆ. ಈ ವಿಚಾರ ಸಿಎಂಗೂ ಗೊತ್ತಿದೆ ಎಂದರು.
ಹಿಂದೆ ಚುನಾವಣೆ ಬಂದಾಗ ಮಾತ್ರ ದುಡ್ಡು ಕೇಳುತ್ತಿದ್ದರು. ಆದರೆ ಈಗ ಶೇ. 70ರಷ್ಟು ಶಾಸಕರು ಪ್ರತಿಯೊಂದು ಕಾಮಗಾರಿಯಲ್ಲೂ ಮೂಗು ತೂರಿಸುತ್ತಿದ್ದಾರೆ. ಟೆಂಡರ್ ಮಂಜೂರಾದ ತಕ್ಷಣ ಶಾಸಕರ ಬಳಿ ಹೋಗಬೇಕು, ಪೇಮೆಂಟ್ ಆದ ತಕ್ಷಣ ಅವರಿಗೆ ಪಾಲು ತಲುಪಿಸಬೇಕು. ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಮೂಲಕ ಕಮಿಷನ್‌ಗೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರಿಗೂ ಕಮಿಷನ್ ಹೋಗುತ್ತಿದೆ. ಹೊಸ ಸಚಿವರಿಗೆ ಪೇಮೆಂಟ್ ಇನ್ನೂ ತಲುಪಿಲ್ಲ. ಸತೀಶ್ ಜಾರಕಿಹೊಳಿ ಅವರ ಇಲಾಖೆ ಹಾಗೂ ಬಿಬಿಎಂಪಿ ಹೊರತುಪಡಿಸಿದರೆ ಉಳಿದೆಲ್ಲಾ ಇಲಾಖೆಗಳಲ್ಲಿ ಕಮಿಷನ್ ವಹಿವಾಟು ಎಗ್ಗಿಲ್ಲದೆ ಸಾಗಿದೆ ಎಂದು ದೂರಿದರು.
ಸಿಎಂಗೆ ಪತ್ರ
ಸೆಪ್ಟೆಂಬರ್ 30, 2026 ರಂದು ಬರೆದ ಪತ್ರದಲ್ಲಿ, ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಜೆ.ಎಂ. ನಂದಕುಮಾರ್ ಅವರು ರಾಜ್ಯಾದ್ಯಂತ ಸುಮಾರು 1.50 ಲಕ್ಷ ಗುತ್ತಿಗೆದಾರರು ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದು, ಶೀಘ್ರದಲ್ಲೇ ಬಾಕಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಗಡುವಿನೊಳಗೆ ಕೆಲಸಗಳನ್ನು ಪೂರ್ಣಗೊಳಿಸಿದರೂ, 3-4 ವರ್ಷಗಳಿಂದ ಬಿಲ್ ಪಾವತಿಸಿಲ್ಲ ಮತ್ತು ಗುತ್ತಿಗೆದಾರರು ಕಚೇರಿಗಳಲ್ಲಿ ಅಲೆದಾಡುತ್ತಿದ್ದಾರೆ ಎಂದು ಸಂಘ ಆರೋಪಿಸಿದೆ.
ಪತ್ರದ ಪ್ರಕಾರ, ಇಲಾಖಾವಾರು ಬಾಕಿ ಮೊತ್ತ
ಪಿಡಬ್ಲ್ಯೂಡಿಯಲ್ಲಿ 8,370 ಕೋಟಿ ರೂ., ಜಲಸಂಪನ್ಮೂಲ 14,000 ಕೋಟಿ ರೂ., ಆರ್‌ಡಿಪಿಆರ್ 3,000 ಕೋಟಿ ರೂ., ಸಣ್ಣ ನೀರಾವರಿ 3,600 ಕೋಟಿ ರೂ., ನಗರಾಭಿವೃದ್ಧಿ 1,800 ಕೋಟಿ ರೂ., ತೊಳೆಯುವುದು ಮತ್ತು ತ್ಯಾಜ್ಯ 2,600 ಕೋಟಿ ರೂ., ಕಾರ್ಮಿಕ 2,000 ಕೋಟಿ ರೂ. ಮತ್ತು ಬಿಬಿಎಂಪಿ 2,600 ಕೋಟಿ ರೂ. ಬಾಕಿ ಇದೆ. ಇದು ಒಟ್ಟು ಬಾಕಿ ಮೊತ್ತವನ್ನು 37,980.00 ಕೋಟಿ ರೂ.ಗೆ ತಲುಪುತ್ತದೆ.
ಸಾಮಾನ್ಯವಾಗಿ ಸರ್ಕಾರಗಳು ಗೌರಿ-ಗಣೇಶ, ದಸರಾ ಮತ್ತು ದೀಪಾವಳಿ ಸಮಯದಲ್ಲಿ ಬಾಕಿ ಹಣವನ್ನು ಬಿಡುಗಡೆ ಮಾಡುತ್ತವೆ. ಆದರೆ ಈ ಸರ್ಕಾರ ಇಲ್ಲಿಯವರೆಗೆ ಯಾವುದೇ ಹಬ್ಬದ ಮುಂಗಡವನ್ನು ಸಹ ಬಿಡುಗಡೆ ಮಾಡಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



