Gen-Z ಗಳಿಗೆ ʻಜನರೇಷನ್ ಗಟರ್ʼಎಂದ ಕಂಗನಾ ರಣಾವತ್; ಅವರನ್ನು ಬಿಜೆಪಿಯೇ ಗಂಭೀರವಾಗಿ ಪರಿಗಣಿಸಿಲ್ಲ, ಸಿಜೆಪಿ ತಿರುಗೇಟು! Video
ಜೆನ್ ಝಡ್' (Gen Z), 'ಜೆನ್ ಆಲ್ಫಾ' (Gen Alpha) ಅಥವಾ ಇತರ ಯುವ ಪೀಳಿಗೆಯವರನ್ನು ಬಿಡಿ, ಸ್ವತಃ ಅವರ ಪಕ್ಷದ ಸದಸ್ಯರೇ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸೌರವ್ ದಾಸ್ ಹೇಳಿದರು.

ನವದೆಹಲಿ: Gen-Z ಗಳಿಗೆ ʻಜನರೇಷನ್ ಗಟರ್ʼಎಂಬ ಹೇಳಿಕೆ ನೀಡುವ ಮೂಲಕ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿರುವಂತೆಯೇ ಸಿಜೆಪಿ ಕೂಡಾ ತಿರುಗೇಟು ನೀಡಿದೆ.
ಪ್ರತಿಭಟನೆಯ ವೀಡಿಯೋಗಳನ್ನು ಉದ್ದೇಶಿಸಿ ಇನ್ಸಾಟಾದಲ್ಲಿ ಬರೆದುಕೊಂಡಿರುವ ಕಂಗನಾ, ನನ್ನ ಜೀವಮಾನದಲ್ಲೇ ಒಂದೇ ಕಡೆ ಇಷ್ಟೊಂದು ಅಸಹ್ಯವನ್ನು ನಾನು ಎಂದೂ ನೋಡಿರಲಿಲ್ಲ. Gen Z ಪ್ರತಿಭಟನೆಯ ಈ ರೀಲ್ಸ್ ವಾಂತಿ ಬರಿಸುವಂತಿವೆ. ಅವರು ಮಾತನಾಡುತ್ತಿರುವ ರೀತಿ ಹಾಗೂ ಬಳಸುತ್ತಿರುವ ಭಾಷೆ ತೀರ ಕೆಟ್ಟದಾಗಿದೆ. ಪ್ರತಿ ಫ್ರೇಮ್‌ನಲ್ಲೂ ಇಷ್ಟೊಂದು ಅಸಭ್ಯತೆ ಕಾಣಿಸುತ್ತಿದೆ. ಛೀ, ಇವರನ್ನು ಯಾರು ಹೆತ್ತು, ಹೇಗೆ ಬೆಳೆಸುತ್ತಿದ್ದಾರೋ ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಯುವತಿಯರನ್ನುದ್ದೇಶಿಸಿ ಕಂಗನಾ ನೀಡಿದ "ಜನರೇಷನ್ ಗಟರ್" ಹೇಳಿಕೆ ಮತ್ತು ನಂತರ ಅದನ್ನು ಸಮರ್ಥಿಸಿಕೊಳ್ಳಲು ಅವರು ನಡೆಸಿದ ಪ್ರಯತ್ನದ ಕುರಿತು ಪ್ರತಿಕ್ರಿಯಿಸಿರುವ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಜೆನ್ ಝಡ್' (Gen Z), 'ಜೆನ್ ಆಲ್ಫಾ' (Gen Alpha) ಅಥವಾ ಇತರ ಯುವ ಪೀಳಿಗೆಯವರನ್ನು ಬಿಡಿ, ಸ್ವತಃ ಅವರ ಪಕ್ಷದ ಸದಸ್ಯರೇ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಅಥವಾ ಅವರ ಮಾತಿಗೆ ಹೆಚ್ಚಿನ ಗಮನ ಕೊಡಬೇಕಾಗಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೌರವ್ ದಾಸ್, ಸ್ವತಃ ಅವರ ಪಕ್ಷದವರೇ ಅವರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸದಿದ್ದಾಗ, ಇತರರು ಯಾಕೆ ಪರಿಗಣಿಸಬೇಕು ಎಂದು ಪ್ರಶ್ನಿಸಿದರು. ಹಿಮಾಚಲ ಪ್ರದೇಶದ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಕಂಗನಾ ಸ್ವತಃ ನೀಡಿದ ಹೇಳಿಕೆಗಳ ವರದಿಗಳನ್ನು ಅವರು ಉಲ್ಲೇಖಿಸಿದರು.
ಅವರು ಈಗ ರಾಜಕಾರಣಿ. ಹಿಮಾಚಲ ಪ್ರದೇಶದ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅವರ ವಿಡಿಯೋಗಳು ಬಂದಿದ್ದವು; ಸಂಸದೆಯಾಗಿ ಕೆಲಸ ಮಾಡುವುದು ಅಪಾರ ಶ್ರಮವನ್ನು ಬೇಡುವ ಕೆಲಸ ಎಂದು ಅರಿವಾಗುವ ಮೊದಲು, ಈ ಕೆಲಸಕ್ಕೆ ಬಹಳ ಕಡಿಮೆ ಶ್ರಮ ಸಾಕು ಎಂದು ತಾವು ಭಾವಿಸಿದ್ದಾಗಿ ಅವರು ಅದರಲ್ಲಿ ಹೇಳಿದ್ದರು. ಇದು ಅವರ ಗಂಭೀರತೆಯ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದು ದಾಸ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



