Gen Z vs Millennials: 'ಇದುವರೆಗಿನ ಅತ್ಯಂತ ಬುದ್ಧಿವಂತ ಪೀಳಿಗೆ' ಯಾವುದೆಂದು ಹೇಳಿದ ಕಂಗನಾ ರಣಾವತ್!
ಕಳೆದ ತಿಂಗಳು, ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ 'ಜೆನ್ ಝಡ್' ಕುರಿತು ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಸ್ಪಷ್ಟನೆ ನೀಡಿದ್ದರು.

ಮುಂಬೈ: ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಸಾಮಾಜಿಕ ಮಾಧ್ಯಮ, ತಂತ್ರಜ್ಞಾನ ಮತ್ತು ರಾಜಕೀಯ ಮತ್ತು ಡಿಜಿಟಲ್ ಅನುಭವಗಳಿರುವ ಯುವ ಪೀಳಿಗೆಯ ಪ್ರಭಾವದ ಕುರಿತು ಚರ್ಚೆಯನ್ನು ಒಳಗೊಂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸಾಮಾಜಿಕ ಮನಶ್ಶಾಸ್ತ್ರಜ್ಞ ಜೊನಾಥನ್ ಹೈಡ್ಟ್ ಮತ್ತು ಓಲಿ ಡಗ್ಮೋರ್ 'ದಿ ಎಕ್ಸ್ಚೇಂಜ್'ನ ಇತ್ತೀಚಿನ ಸಂಚಿಕೆಯಲ್ಲಿ ಸಾಮಾಜಿಕ ಮಾಧ್ಯಮ ನಿಷೇಧದ ಬಗ್ಗೆ ಚರ್ಚಿಸುತ್ತಿದ್ದಾರೆ.
ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, 'ಸದ್ಯ 'ಜೆನ್ ಝೆಡ್' (Gen Z) ಹೆಚ್ಚು ಚರ್ಚೆಯಲ್ಲಿರುವ ಪೀಳಿಗೆಯಾಗಿದ್ದರೂ, ಸಮೀಕ್ಷೆಗಳ ಪ್ರಕಾರ, 'ಮಿಲೇನಿಯಲ್ಸ್' (millennials) ಇದುವರೆಗಿನ ಅತ್ಯಂತ ಬುದ್ಧಿವಂತ ಪೀಳಿಗೆಯಾಗಿದೆ' ಎಂದಿದ್ದಾರೆ.
ಈ ಪೋಸ್ಟ್ ಮೂಲಕ, 'ಕ್ವೀನ್' ಖ್ಯಾತಿಯ ನಟಿ ಮಿಲೇನಿಯಲ್ಸ್ ಕುರಿತಾದ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದರ ಜೊತೆಗೆ, ಈ ಎರಡು ತಲೆಮಾರುಗಳ ನಡುವಿನ ವ್ಯತ್ಯಾಸವನ್ನು ತಮಾಷೆಯ ಧಾಟಿಯಲ್ಲಿ ಹೇಳಿ ಗಮನ ಸೆಳೆದರು.
ಸಂಭಾಷಣೆಯ ಸಂದರ್ಭದಲ್ಲಿ, ವ್ಯಕ್ತಿಯೊಬ್ಬರ ವ್ಯಕ್ತಿತ್ವ ರೂಪುಗೊಳ್ಳುವ ವರ್ಷಗಳಲ್ಲಿನ ರಾಜಕೀಯ ಅನುಭವಗಳು ಅವರ ಜೀವನದ ದೃಷ್ಟಿಕೋನದ ಮೇಲೆ ಹೇಗೆ ಪ್ರಭಾವ ಬೀರಬಲ್ಲವು ಎಂಬುದರ ಕುರಿತು ಹೈಡ್ ಮಾತನಾಡಿದರು.
'ಸುಮಾರು 16 ರಿಂದ 24ರ ವಯಸ್ಸಿನ ಅವಧಿಯಲ್ಲಿ ರಾಜಕೀಯ ಜಗತ್ತು ನಿಮಗೆ ಹೇಗೆ ಕಂಡಿತೋ, ಅದು ಜೀವನಪೂರ್ತಿ ನಿಮ್ಮೊಂದಿಗೆ ಉಳಿದುಕೊಳ್ಳುತ್ತದೆ' ಎಂದರು. ನಂತರ ಅವರು 'ಮಿಲೇನಿಯಲ್ಸ್' (millennials) ಬಗ್ಗೆ ಮಾತನಾಡುತ್ತಾ, ಅವರನ್ನು ಒಂದು ಆಸಕ್ತಿದಾಯಕ ಪೀಳಿಗೆ. ಅಲ್ಲದೆ, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ವ್ಯಾಪಕ ಪ್ರಭಾವವು ಯುವಜನರ ಅನುಭವಗಳನ್ನು ಬದಲಾಯಿಸುವ ಮುನ್ನವಿದ್ದ ಕೊನೆಯ ಪೀಳಿಗೆ ಇವರೇ' ಎಂದು ಹೈಡ್ ಉಲ್ಲೇಖಿಸಿದರು.
ಬುದ್ಧಿವಂತಿಕೆಯ ಮಟ್ಟವು ಕ್ರಮೇಣ ಹೆಚ್ಚುತ್ತಿದ್ದ ಅವಧಿಯ ಭಾಗವಾಗಿದ್ದವರು 'ಮಿಲೇನಿಯಲ್ಸ್'. ನಿಮ್ಮ ಪೀಳಿಗೆಯು ಇತಿಹಾಸದಲ್ಲೇ ಅತ್ಯಂತ ಬುದ್ಧಿವಂತ ಪೀಳಿಗೆಯಾಗಿದೆ. ಮಿಲೇನಿಯಲ್ಸ್ ಪೀಳಿಗೆಯವರೆಗೆ ಬುದ್ಧಿವಂತಿಕೆಯ ಮಟ್ಟ ಏರುತ್ತಲೇ ಇತ್ತು ಎಂದು ತಿಳಿಸಿದರು.
ಕಳೆದ ತಿಂಗಳು, ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ 'ಜೆನ್ ಝಡ್' ಕುರಿತು ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಸ್ಪಷ್ಟನೆ ನೀಡಿದ್ದರು. ಕಾಂಗ್ರೆಸ್ ನಾಯಕರೊಬ್ಬರು ಇರುವ ವಿಡಿಯೋವನ್ನು ಹಂಚಿಕೊಂಡ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.
'ದೇಶದ ಯುವಜನತೆಯನ್ನು ನಾನು 'ಗಟರ್ ಛಾಪ್ಸ್' ಎಂದು ಕರೆದಿದ್ದೇನೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ದೇಶದ ಯುವಜನತೆಯ ವಿಷಯಕ್ಕೆ ಬಂದರೆ - ಕೇವಲ 'ಝೆನ್ ಝಡ್' ಬಗ್ಗೆಯೇ ಮಾತನಾಡುವುದಾದರೆ, ಅವರ ಜನಸಂಖ್ಯೆ ಸುಮಾರು 30-35 ಕೋಟಿಯಷ್ಟಿದೆ; ಆದರೆ ಜಂತರ್ ಮಂತರ್ನಲ್ಲಿ ಸೇರಿದವರ ಸಂಖ್ಯೆ ಕೇವಲ 10,000ದಷ್ಟಿತ್ತು. ಅದರಲ್ಲಿಯೂ ಅರ್ಧಕ್ಕಿಂತ ಹೆಚ್ಚು ಮಂದಿ ಶಬಾನಾ ಆಜ್ಮಿ ಅವರಂತಹವರೇ ಆಗಿದ್ದರು; ಅಲ್ಲಿ ಎಲ್ಲ ವಯೋಮಾನದವರೂ ಇರುವುದನ್ನು ನೀವು ನೋಡಿದ್ದೀರಿ' ಎಂದು ಕಂಗನಾ ಹೇಳಿದ್ದರು.
'ನಾವು ಯುವಜನತೆಯ ಬಗ್ಗೆ ಮಾತನಾಡುವಾಗ, ನಿರ್ದಿಷ್ಟವಾಗಿ 'ಜೆನ್ ಝೆಡ್' ಬಗ್ಗೆ ಮಾತನಾಡುತ್ತೇವೆ. ಅಲ್ಲಿ ಸುಮಾರು 2,000 ಮಂದಿ 'ಜೆನ್ ಝೆಡ್' ಯುವಕರಿದ್ದರು; ಹಾಗಿದ್ದಾಗ, ಇಡೀ ದೇಶದ 'ಜೆನ್ ಝೆಡ್' ಯುವಕರೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಗೆ ಬಿಂಬಿಸಲಾಗುತ್ತಿದೆ? ನಾನು ಅಲ್ಲಿ ಸೇರಿದ್ದ ಆ ನಿರ್ದಿಷ್ಟ ಗುಂಪಿನ ಬಗ್ಗೆ ಮಾತ್ರ ಮಾತನಾಡಿದ್ದೆ. ನಾನು ಇಡೀ ತಲೆಮಾರನ್ನೇ ಉಲ್ಲೇಖಿಸಿರುವ ನನ್ನ ಯಾವುದೇ ನಿರ್ದಿಷ್ಟ ಹೇಳಿಕೆಯನ್ನು ತೋರಿಸುವಂತೆ ನಾನು ನಿಮಗೆ ಮುಕ್ತ ಸವಾಲು ಹಾಕುತ್ತಿದ್ದೇನೆ. ನನ್ನ ವಿರುದ್ಧ ಇಂತಹ ವ್ಯರ್ಥ ಅಜೆಂಡಾವನ್ನು ನಡೆಸಬೇಡಿ. ನಾನು ಯುವಜನತೆಯ ವಿರೋಧಿಯಾಗಲು ಸಾಧ್ಯವಿಲ್ಲ, ಏಕೆಂದರೆ ನಾನೇ ಸ್ವತಃ ಒಬ್ಬ ಯುವತಿ; ರಾಹುಲ್ ಗಾಂಧಿಯವರಂತೆ 55-60 ವರ್ಷದ 'ಯುವಕ'ಳಲ್ಲ' ಎಂದು ಕಂಗನಾ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



