ದೇಶ

ನನಗೆ ತೀವ್ರ ಮುಜುಗರ ಆಗಿದೆ; ನನ್ನ ಜೀವಮಾನದಲ್ಲಿ ಇಂಥ ಅಸಹ್ಯ ಎಲ್ಲೂ ನೋಡಿಲ್ಲ: ವಿವಾದ ಸೃಷ್ಟಿಸಿದ ಕಂಗನಾ ರಣಾವತ್; Video

ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಪ್ರತಿಭಟನಾಕಾರರ ನಡವಳಿಕೆಯನ್ನು ಅಸಹ್ಯ, ಕಸ ಮತ್ತು ವಾಂತಿ ಬರುವಂತಹದ್ದು ಎಂದು ಜರಿದಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ನನಗೆ ತೀವ್ರ ಮುಜುಗರ ಆಗಿದೆ; ನನ್ನ ಜೀವಮಾನದಲ್ಲಿ ಇಂಥ ಅಸಹ್ಯ ಎಲ್ಲೂ ನೋಡಿಲ್ಲ: ವಿವಾದ ಸೃಷ್ಟಿಸಿದ ಕಂಗನಾ ರಣಾವತ್; Video
ಕಂಗನಾ ರಣಾವತ್
Published On :

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ Gen Z ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೋಗಳ ವಿರುದ್ಧ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಪ್ರತಿಭಟನಾಕಾರರ ನಡವಳಿಕೆಯನ್ನು ಅಸಹ್ಯ, ಕಸ ಮತ್ತು ವಾಂತಿ ಬರುವಂತಹದ್ದು ಎಂದು ಜರಿದಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಪ್ರತಿಭಟನೆಯ ವೀಡಿಯೋಗಳನ್ನು ಉದ್ದೇಶಿಸಿ ಬರೆದುಕೊಂಡಿರುವ ಕಂಗನಾ, ನನ್ನ ಜೀವಮಾನದಲ್ಲೇ ಒಂದೇ ಕಡೆ ಇಷ್ಟೊಂದು ಅಸಹ್ಯವನ್ನು ನಾನು ಎಂದೂ ನೋಡಿರಲಿಲ್ಲ. Gen Z ಪ್ರತಿಭಟನೆಯ ಈ ರೀಲ್ಸ್‌ ವಾಂತಿ ಬರಿಸುವಂತಿವೆ. ಅವರು ಮಾತನಾಡುತ್ತಿರುವ ರೀತಿ ಹಾಗೂ ಬಳಸುತ್ತಿರುವ ಭಾಷೆ ತೀರ ಕೆಟ್ಟದಾಗಿದೆ. ಪ್ರತಿ ಫ್ರೇಮ್‌ನಲ್ಲೂ ಇಷ್ಟೊಂದು ಅಸಭ್ಯತೆ ಕಾಣಿಸುತ್ತಿದೆ. ಛೀ, ಇವರನ್ನು ಯಾರು ಹೆತ್ತು, ಹೇಗೆ ಬೆಳೆಸುತ್ತಿದ್ದಾರೋ ಎಂದು ಪ್ರಶ್ನಿಸಿದ್ದಾರೆ.

Story image

ಭಾರತವು ಸಾಂಸ್ಕೃತಿಕ ಕಲ್ಪನೆ ಮತ್ತು ಸೌಂದರ್ಯ ಹೊಂದಿರುವ ದೇಶ ಎಂದಿರುವ ಕಂಗನಾ, ನೀವು ನಿಮ್ಮನ್ನು ಕಾಕ್ರೋಚ್‌ಗಳೆಂದು ಕರೆದುಕೊಳ್ಳುತ್ತೀರಿ ಹಾಗೂ ಅದೇ ರೀತಿ ವರ್ತಿಸುತ್ತಿದ್ದೀರಿ. ಜಗತ್ತಿಗೆ ನಿಮ್ಮ ಅಸಹ್ಯ ಮತ್ತು ಕಸವನ್ನು ತೋರಿಸುತ್ತಿದ್ದೀರಷ್ಟೇ. ಈ ರೀಲ್ಸ್‌ಗಳನ್ನು ನೋಡಿ ನನಗೆ ತೀವ್ರ ಮುಜುಗರವಾಗಿದೆ. ಇದರಿಂದ ಹೊರಬರಲು ನನಗೀಗ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ ಎಂದಿದ್ದಾರೆ.

ನೀಟ್-ಯುಜಿ ಪತ್ರಿಕೆ ಸೋರಿಕೆಯಾದ ನಂತರ ಯುವ ನೇತೃತ್ವದ ವಿಡಂಬನಾತ್ಮಕ ವೇದಿಕೆಯಾದ ಕಾಕ್ರೋಚ್ ಜನತಾ ಪಕ್ಷ ಬೀದಿಗಿಳಿದಿದೆ. ಜೂನ್ 20 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ವಾರಗಟ್ಟಲೆ ಬೀಡುಬಿಟ್ಟಿದ್ದರು. ಪರೀಕ್ಷಾ ಅಕ್ರಮಗಳಿಗೆ ಹೊಣೆಗಾರಿಕೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.