ದೇಶ

ರೀಲ್ ಗಂಡ ಈಗ ರಿಯಲ್ ಹಸ್ಬೆಂಡ್! ಒಬ್ಬನನ್ನೇ ವಿವಾಹವಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ ಮೂವರು ಸಹೋದರಿಯರು! Video

ಮೂವರು ಸಹೋದರಿಯರು ಒಂದೇ ವ್ಯಕ್ತಿಯನ್ನು ವಿವಾಹವಾಗಿದ್ದು. ಇದು ದೇವಾಲಯದ ನಿಯಮಗಳು ಮತ್ತು ಸಂಪ್ರದಾಯಗಳ ಉಲ್ಲಂಘನೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರೀಲ್ ಗಂಡ ಈಗ ರಿಯಲ್ ಹಸ್ಬೆಂಡ್! ಒಬ್ಬನನ್ನೇ ವಿವಾಹವಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ ಮೂವರು ಸಹೋದರಿಯರು! Video
ಒಬ್ಬ ಯುವಕನನ್ನ ವಿವಾಹವಾದ ಮೂವರು ಸಹೋದರಿಯರು
Published On :

ಉತ್ತರ ಪ್ರದೇಶ: ಮೂವರು ಯುವತಿಯರು ಒಬ್ಬನೇ ಯುವಕನನ್ನು ವಿವಾಹವಾಗಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಾ ಚಾಮುಂಡಾ ದೇವಾಲಯದಲ್ಲಿ ಮೂವರು ಸಹೋದರಿಯರು ಒಂದೇ ವ್ಯಕ್ತಿಯನ್ನು ವಿವಾಹವಾಗಿದ್ದು. ಇದು ದೇವಾಲಯದ ನಿಯಮಗಳು ಮತ್ತು ಸಂಪ್ರದಾಯಗಳ ಉಲ್ಲಂಘನೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ದೌರಿಯಾ ಗ್ರಾಮದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋದರಿಯರಾದ ಸರೋಜಾ (20), ಸಾವಿತ್ರಿ (19) ಹಾಗೂ ಸಂತೋಷ (18) ಈ ವಿಭಿನ್ನ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದ ಕ್ಯಾಮೆರಾಮನ್ ವಿಕಾಸ್ (20) ಎಂಬಾತನನ್ನೇ ಈ ಸಹೋದರಿಯರು ವರಿಸಿದ್ದಾರೆ. ಕೆಲ ವಿಡಿಯೋಗಳಲ್ಲಿ ಈ ಯುವತಿಯರ ಪತಿಯ ಪಾತ್ರದಲ್ಲೂ ವಿಕಾಸ್ ಅಭಿನಯಿಸುತ್ತಿದ್ದು, ಈಗ ನಿಜ ಜೀವನದಲ್ಲೂ ಮೂವರಿಗೂ ಪತಿಯಾಗಿದ್ದಾನೆ.

ಚಿಕ್ಕಂದಿನಿಂದಲೂ ಜತೆಯಾಗಿಯೇ ಬೆಳೆದ ನಮಗೆ ಮದುವೆಯ ನಂತರ ಪರಸ್ಪರ ಅಗಲಬೇಕಾಗುತ್ತದೆ ಎಂಬ ಭಯ ಕಾಡತೊಡಗಿತ್ತು. ಒಂದು ಹಂತದಲ್ಲಿ ಈ ಭಯಕ್ಕೆ ಜೀವ ಕಳೆದುಕೊಳ್ಳುವ ಆಲೋಚನೆಯೂ ಬಂದಿತ್ತು ಎಂದು ಹಿರಿಯ ಸಹೋದರಿ ಸರೋಜಾ ಹೇಳಿಕೊಂಡಿದ್ದಾಳೆ.

ಅಂತಿಮವಾಗಿ ಪ್ರತ್ಯೇಕವಾಗುವುದಕ್ಕಿಂತ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗುವುದು ಸೂಕ್ತ ಎಂದು ನಿರ್ಧರಿಸಿ, ತಮಗೆ ಸೂಕ್ತ ಎನಿಸಿದ ಹಾಗೂ ತಮ್ಮ ಬಾಂಧವ್ಯವನ್ನು ಅರ್ಥಮಾಡಿಕೊಂಡ ವಿಕಾಸ್‌ನನ್ನು ವರಿಸಲು ನಿರ್ಧರಿಸಿದ್ದಾಗಿ ಆಕೆ ತಿಳಿಸಿದ್ದಾಳೆ.

ಸ್ಥಳೀಯ ಚಾಮುಂಡಾ ಮಾತಾ ದೇವಾಲಯದಲ್ಲಿ ಸರಳವಾಗಿ ಈ ಮದುವೆ ನಡೆದಿದ್ದು, ಪ್ರಸ್ತುತ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ, ಈ ವಿವಾಹ ಮಹೋತ್ಸವದಲ್ಲಿ ಯುವಕನಾಗಲಿ ಅಥವಾ ಯುವತಿಯರ ಕುಟುಂಬಸ್ಥರಾಗಲಿ ಮತ್ತು ಸಂಬಂಧಿಕರಾಗಲಿ ಭಾಗವಹಿಸಿರಲಿಲ್ಲ.

ನಾವು ವಯಸ್ಕರಾಗಿದ್ದು ನಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ನಮಗಿದೆ ಎಂದು ಯುವತಿಯರು ಪ್ರತಿಪಾದಿಸಿದ್ದಾರೆ. ಸಹೋದರಿಯರ ಅಪಾರ ಪ್ರೀತಿ ಮತ್ತು ಅನುಬಂಧವನ್ನು ಹತ್ತಿರದಿಂದ ಕಂಡಿದ್ದರಿಂದಲೇ ತಾನು ಈ ಮದುವೆಗೆ ಒಪ್ಪಿಗೆ ನೀಡಿದೆ ಎಂದು ವಿಕಾಸ್ ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.