ದೇಶ

ಲವರ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಂಡ; ಪ್ರಶ್ನಿಸಿದ್ದಕ್ಕೆ ಕಾರಿನ ಬಾನೆಟ್ ಮೇಲೆ ಪತ್ನಿಯನ್ನೇ ಎಳೆದೊಯ್ದ! Video

ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

ಲವರ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಂಡ; ಪ್ರಶ್ನಿಸಿದ್ದಕ್ಕೆ ಕಾರಿನ ಬಾನೆಟ್ ಮೇಲೆ ಪತ್ನಿಯನ್ನೇ ಎಳೆದೊಯ್ದ! Video
ಪ್ರಿಯತಮೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಂಡ
Published On :

ಮೀರತ್: ಪ್ರಿಯತಮೆಯೊಂದಿಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಪತಿರಾಯ ಪತ್ನಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಆಕೆಯನ್ನೇ ಕಾರಿನ ಬಾನೆಟ್ ಮೇಲೆ ಎಳೆದೊಯ್ದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಮೀರತ್ ನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

ಘಟನೆ ಶನಿವಾರ ಸಂಜೆ ನಡೆದಿದೆ ಎನ್ನಲಾಗಿದ್ದು, ಮಯಾಂಕ್ ಎಂಬಾತ ತನ್ನ ಎನ್ನಲಾದ ಪ್ರಿಯತಮೆ ಮಾಹಿ ಜೊತೆ ಮೊಮೋ ತಿನ್ನುತ್ತಿದ್ದ ವೇಳೆ ಆತನ ಪತ್ನಿ ಸುನೀತಾ ಇಬ್ಬರನ್ನೂ ಒಟ್ಟಿಗೆ ನೋಡಿದ್ದಾರೆ. ಈ ವೇಳೆ ಆಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗಂಡ ಕಾರಿನ ಬಾನೆಟ್ ಮೇಲೆ ಎಳೆದೊಯ್ದಿರುವ ಆರೋಪ ಕೇಳಿಬಂದಿದೆ.

ಪತ್ನಿ ಸುನಿತಾ ಆಕ್ರೋಶ, ತಡೆಯಲು ಹೋದಾಗ ಆತಂಕಕಾರಿ ಘಟನೆ

ಗಂಡ ಮತ್ತೊಬ್ಬ ಮಹಿಳೆಯೊಂದಿಗೆ ಇರುವುದನ್ನು ಕಂಡು ಆಕ್ರೋಶಗೊಂಡ ಸುನೀತಾ ಕಾರಿನ ಬಳಿ ತೆರಳಿ ಕಿಟಕಿಗಳನ್ನು ಬಡಿಯಲು ಆರಂಭಿಸಿದ್ದಾರೆ. ಇದರಿಂದ ಗಾಬರಿಗೊಂಡ ಮಯಾಂಕ್ ಕಾರನ್ನು ಲಾಕ್ ಮಾಡಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಗಂಡ ಕಾರು ಚಲಾಯಿಸಿಕೊಂಡು ಹೋಗುವುದನ್ನು ತಡೆಯಲು ಸುನೀತಾ ಕಾರಿನ ಮುಂಭಾಗಕ್ಕೆ ಬಂದು ನಿಂತಿದ್ದಾರೆ. ಬಳಿಕ ಕಾರಿನ ಬಾನೆಟ್ ಮೇಲೆ ಮಲಗಿದ್ದಾರೆ. ಆದರೆ ಮಯಾಂಕ್ ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಈ ವೇಳೆ ಸುನೀತಾ “ಅಣ್ಣಾ ಕಾಪಾಡಿ... ಅಣ್ಣಾ ಬಚಾವ್” ಎಂದು ಕೂಗುತ್ತಾ ದಾರಿಹೋಕರ ಸಹಾಯಕ್ಕಾಗಿ ಕಿರುಚಿದ್ದಾರೆ. ಆರೋಪದ ಪ್ರಕಾರ, ಮಯಾಂಕ್ ಸುಮಾರು 100 ಮೀಟರ್‌ವರೆಗೆ ಸುನೀತಾಳನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದಿದ್ದಾನೆ. ಸ್ಥಳದಲ್ಲಿ ಜನರು ಸೇರಲು ಆರಂಭಿಸಿದ ಬಳಿಕ ಮಯಾಂಕ್ ಕಾರನ್ನು ನಿಲ್ಲಿಸಿದ್ದಾನೆ ಎನ್ನಲಾಗಿದೆ.

ಗಂಡನ ವಿರುದ್ಧ ಪತ್ನಿಯಿಂದ ದೂರು

ಘಟನೆ ಬಳಿಕ ಸುನೀತಾ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಹಲ್ಲೆ, ವರದಕ್ಷಿಣೆ ಕಿರುಕುಳ ಹಾಗೂ ಅಕ್ರಮ ಸಂಬಂಧದ ಆರೋಪಗಳನ್ನು ಅವರು ಮಾಡಿದ್ದಾರೆ. ಈ ಪ್ರಕರಣದಲ್ಲಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಆರೋಪದಡಿ ಕೊಲೆ ಯತ್ನ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಕೋಟ್ವಾಲಿ ವೃತ್ತಾಧಿಕಾರಿ ಸಂಗ್ರಾಮ್ ಸಿಂಗ್ ತಿಳಿಸಿದ್ದಾರೆ.

“ಮಾತಿನ ಚಕಮಕಿ ಬಳಿಕ ವ್ಯಕ್ತಿ ತನ್ನ ಪತ್ನಿಯನ್ನು ಕೊಲ್ಲುವ ಉದ್ದೇಶದಿಂದ ಕಾರಿನಿಂದ ಗುದ್ದಲು ಯತ್ನಿಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಲೆ ಯತ್ನದಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.

ಗಂಡ-ಪ್ರಿಯತಮೆ ಇಬ್ಬರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಯಾಂಕ್ ಮತ್ತು ಮಾಹಿ ಇಬ್ಬರನ್ನೂ ಬಂಧಿಸಿದ್ದಾರೆ. ಘಟನೆಯಲ್ಲಿ ಬಳಸಲಾಗಿದೆ ಎನ್ನಲಾದ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಂದಿನ ತನಿಖೆ ಮುಂದುವರಿದಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.