ಬಾಲಿವುಡ್

ಆಪ್ತ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ವಿವಾಹ: ನೆಟ್ಟಿಗರ ಮನಗೆದ್ದ ಬಾಲಿವುಡ್ ಬೆಡಗಿ ಆಲಿಯಾ ಭಟ್! Video

ಸಾಮಾಜಿಕ ಜಾಲತಾಣ ಎಕ್ಸ್ ನ ಫ್ಯಾನ್ ಫೇಜ್ ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಮಹತ್ವದ ವಿವಾಹ ಪೂರ್ವ ಆಚರಣೆಯೊಂದಕ್ಕೆ ರೆಡ್ಡಿಯಾಗಿರುವ ಆಕಾಂಶಾ ರಂಜನ್ ಪಕ್ಕದಲ್ಲಿ ಆಲಿಯಾ ಕುಳಿತಿದ್ದಾರೆ.

ಆಪ್ತ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ವಿವಾಹ: ನೆಟ್ಟಿಗರ ಮನಗೆದ್ದ ಬಾಲಿವುಡ್ ಬೆಡಗಿ ಆಲಿಯಾ ಭಟ್! Video
ಆಕಾಂಶಾ ರಂಜನ್ ಕಪೂರ್ ವಿವಾಹ ಮಹೋತ್ಸವದಲ್ಲಿ ಆಲಿಯಾ ಭಟ್
Published On :

ಆಪ್ತ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ಅವರ ವಿವಾಹ ಮಹೋತ್ಸವದ ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಬಾಲಿವುಡ್ ನಟಿ ಆಲಿಯಾ ಭಟ್ ನೆಟ್ಟಿಗರ ಹೃದಯ ಗೆದಿದ್ದಾರೆ.

ಚೂಡಾ ಸಮಾರಂಭದ ಸಮಯದಲ್ಲಿ ಆಲಿಯಾ ಭಟ್ ನೂತನ ವಧುವಿಗೆ ಆಕೆಯ ಕಲೀರ ಕಟ್ಟಲು ಸಹಾಯ ಮಾಡುತ್ತಿರುವುದನ್ನು ಈ ಕ್ಲಿಪ್ ತೋರಿಸುತ್ತದೆ. ಅಭಿಮಾನಿಗಳು ಆ ಸಿಹಿ ಕ್ಷಣದ ಬಗ್ಗೆ ಮಾತನಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನ ಫ್ಯಾನ್ ಫೇಜ್ ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಮಹತ್ವದ ವಿವಾಹ ಪೂರ್ವ ಆಚರಣೆಯೊಂದಕ್ಕೆ ರೆಡ್ಡಿಯಾಗಿರುವ ಆಕಾಂಶಾ ರಂಜನ್ ಪಕ್ಕದಲ್ಲಿ ಆಲಿಯಾ ಕುಳಿತಿದ್ದಾರೆ.

ಗೋಲ್ಡನ್ ಬಾರ್ಡರ್ ನೊಂದಿಗೆ ಬೂದು ಬಣ್ಣದ ಸೀರೆಯನ್ನು ಧರಿಸಿರುವ ಆಲಿಯಾ, ಸಾಂಪ್ರದಾಯಿಕ ಕಲೀರಗಳನ್ನು ಆಕಾಂಶಾ ಅವರಿಗೆ ಎಚ್ಚರಿಕೆಯಿಂದ ಕಟ್ಟುವುದನ್ನು ಕಾಣಬಹುದು. ಸೀರೆಗೆ ತಕ್ಕಂತ ತೋಳಿಲ್ಲದ ಕುಪ್ಪಸ, ಚಿನ್ನದ ಕಿವಿಯೋಲೆಗಳು, ಮಾಂಗ್ ಟಿಕ್ಕಾ, ಸನ್ ಗ್ಲಾಸ್ ನೊಂದಿಗೆ ಆಲಿಯಾ ಮಿಂಚುತ್ತಿದ್ದಾರೆ.

ಹೊಳೆಯುವ ಕೆಂಪು ಸೀರೆಯೊಂದಿಗೆ ಆಕಾಂಶಾ ಸುಂದರವಾಗಿ ಕಾಣುತ್ತಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರಿಂದ ಸುತ್ತುವರೆದಿದ್ದ ಸಮಾರಂಭದಾದ್ಯಂತ ಆಲಿಯಾಭಟ್ ನಗುನಗುತ್ತಿರುವುದು ವಿಡಿಯೋದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.