'ಡ್ರೈ ಕ್ಲೀನರ್' ನಿಂದ ತಿಂಗಳಿಗೆ ಲಕ್ಷಾಂತರ ರೂ ದುಡಿಯುವ ದಂಪತಿ! ನೆಟ್ಟಿಗರು ಹೇಳಿದ್ದೇನು?
ನಳಿನಿ ಉಣಗರ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದು, ಮನೆ ಸಮೀಪದ ಸ್ಥಳೀಯ ಡ್ರೈ ಕ್ಲಿನ್ನರ್ ನಿಂದ ಮಹಿಳೆ ತಿಂಗಳಿಗೆ 2 ಲಕ್ಷ ರೂ. ಆದಾಯ ಗಳಿಸುವುದನ್ನು ಬಹಿರಂಗಪಡಿಸಿದ್ದಾರೆ.

ನವದೆಹಲಿ: ಇಂದು ದೇಶದಲ್ಲಿ ಎಷ್ಟೋ ಜನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರಿಯಾದ ಕೆಲಸ ಸಿಗದೆ ಅಥವಾ ಉನ್ನತ ಸ್ಥಾನಮಾನ, ಸಂಬಳದ ಕೆಲಸಕ್ಕೆ ಕಾಯುತ್ತಾ, ಸಿಕ್ಕ ಅವಕಾಶವನ್ನು ಕಳೆದುಕೊಂಡು ಸಂಕಷ್ಟಪಡುತ್ತಿದ್ದಾರೆ.
ಆದರೆ, ಕೆಲಸ ಯಾವುದಾದರೇನೂ ಮೇಲು- ಕೀಳು ಎನ್ನದೇ ಮನಸ್ಸಿಟ್ಟು, ಶ್ರಮವಹಿಸಿ ದುಡಿದರೆ ಯಶಸ್ವಿಯಾಗಬಹುದು ಎಂಬುದಕ್ಕೆ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುತ್ತದೆ. ಇತ್ತೀಚಿಗೆ ಎಕ್ಸ್ ಬಳಕೆದಾರರೊಬ್ಬರು ಇಂತಹುದೇ ಕಥೆಯೊಂದನ್ನು ಹಂಚಿಕೊಂಡಿದ್ದು, ಡ್ರೆ ಕ್ಲಿನರ್ ನಡೆಸುವ ದಂಪತಿಯ ಮಾಸಿಕ ಆದಾಯ ಕೇಳಿ ನೆಟ್ಟಿಗರು ಬೆಚ್ಚಿ ಬಿದಿದ್ದಾರೆ.
ಹೌದು. ನಳಿನಿ ಉಣಗರ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದು, ಮನೆ ಸಮೀಪದ ಸ್ಥಳೀಯ ಡ್ರೈ ಕ್ಲಿನ್ನರ್ ನಿಂದ ಮಹಿಳೆ ತಿಂಗಳಿಗೆ 2 ಲಕ್ಷ ರೂ. ಆದಾಯ ಗಳಿಸುವುದನ್ನು ಬಹಿರಂಗಪಡಿಸಿದ್ದಾರೆ.
"ನಿನ್ನೆ, ನನ್ನ ಮನೆಯ ಸಮೀಪವಿರುವ ಡ್ರೈ ಕ್ಲೀನಿಂಗ್ ಅಂಗಡಿಯ ಮಾಲೀಕರೊಂದಿಗೆ ಮಾತನಾಡುತ್ತಿದ್ದೆ, ಅಲ್ಲಿಗೆ ನಿಯಮಿತವಾಗಿ ಹೋಗುತ್ತೇನೆ. ಆತ ಹಾಗೂ ಅವನ ಹೆಂಡತಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ. ಅವರು ಇಬ್ಬರು ಕೆಲಸಗಾರರನ್ನು ಇಟ್ಟುಕೊಂಡಿದ್ದಾರೆ. ತಿಂಗಳಿಗೆ ಸುಮಾರು ₹ 2,00,000 ಆದಾಯ ಗಳಿಸುವುದಾಗಿ ಅವರು ಹೇಳಿದಾಗ ನನಗೆ ನಿಜಕ್ಕೂ ಆಘಾತವಾಯಿತು. ಇದು ಭಾರತದಲ್ಲಿ 10+ ವರ್ಷಗಳ ಅನುಭವಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಗಳಿಸುವ ಆದಾಯಕ್ಕೆ ಸಮವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಂಗಡಿ ಮಾಲೀಕರ ಆದಾಯದ ವಿವರವನ್ನೂ ಉಣಗರ್ ಹಂಚಿಕೊಂಡಿದ್ದಾರೆ. ದಿನನಿತ್ಯದ ಆಧಾರದ ಮೇಲೆ ಅವರು ಸುಮಾರು 350 ಬಟ್ಟೆಗಳನ್ನು ತಲಾ 10 ರೂ.ಗೆ ಇಸ್ತ್ರಿ ಮಾಡುವ ಮೂಲಕ ರೂ. 3,500 ಆದಾಯ ಗಳಿಸುತ್ತಾರೆ. ಜೀನ್ಸ್ ನಂತಹ 20 ಬಟ್ಟೆಗಳ ಡ್ರೈ ಕ್ಲೀನ್ನಿಂಗ್ ಗೆ ಒಂದಕ್ಕೆ ರೂ. 350 ರಂತೆ ಪ್ರತಿದಿನ 7,000 ರೂ. ಗಳಿಸುತ್ತಾರೆ. ಹೀಗೆ ದಿನಕ್ಕೆ 10,500 ಗಳಿಸುತ್ತಾರೆ. ತಿಂಗಳಿಗೆ ಮೂರು ದಿನ ಮಾತ್ರ ರಜೆ ಮಾಡುತ್ತಾರೆ. ಇದರೊಂದಿಗೆ ಅವರ ತಿಂಗಳ ಅಂದಾಜಿನ ಆದಾಯ 283,500 ರೂ. ಆಗಿದೆ. ಎಲ್ಲಾ ಖರ್ಚುಗಳನ್ನು ಕಳೆದ ನಂತರ ಅವರಿಗೆ ₹2,37,500 ಲಾಭ ಬಂದಿದೆ. ಇದು ಕಳೆದ ತಿಂಗಳ ಬಂದಿರುವ ಆದಾಯ ಮತ್ತು ಖರ್ಚಿನ ವಿವರವಾಗಿದೆ. ಪ್ರತಿ ತಿಂಗಳು ಅವರು ಸರಾಸರಿ ₹ 2 ಲಕ್ಷಕ್ಕೂ ಅಧಿಕ ಹಣ ಗಳಿಸುತ್ತಾರೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಈ ಟ್ವೀಟ್ ಕುರಿತು ಅನೇಕ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ಅನೇಕ ಬಳಕೆದಾರರು ಡ್ರೈ ಕ್ಲೀನರ್ ಆದಾಯದಿಂದ ಪ್ರಭಾವಿತರಾಗಿದ್ದು, ಇದನ್ನು ಉದ್ಯಮಶೀಲತೆಯ ಯಶಸ್ಸಿಗೆ ಉತ್ತಮ ಉದಾಹರಣೆ ಎಂದು ಕರೆದಿದ್ದಾರೆ.
ನಾವು ಉತ್ತಮ ಸಂಬಳಕ್ಕಾಗಿ ಸಾಮಾನ್ಯವಾಗಿ ವೈಟ್ ಕಾಲರ್ ಉದ್ಯೋಗಗಳನ್ನು ಬೆನ್ನಟ್ಟುತ್ತೇವೆ, ಆದರೆ ಈ ರೀತಿಯ ಮಾಹಿತಿಯು ಆಸಕ್ತಿಯಿಂದ ಕೆಲಸ ಮಾಡಿದರೆ, ಹೆಚ್ಚು ಲಾಭದಾಯಕವಾಗಬಹುದು ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



