ಅಡುಗೆ

ಒಮ್ಮೆ ತಿಂದರೆ ರುಚಿ ಮರೆಯಲ್ಲ: ಮನೆಯಲ್ಲೇ ಮಾಡಿ ಘಮಘಮಿಸುವ ಡ್ರೈ ಚಿಕನ್ ಘೀ ರೋಸ್ಟ್

ಇಂದು ಊಟಕ್ಕೆ ಏನು ಸ್ಪೆಷಲ್ ಮಾಡೋದು ಎಂದು ಯೋಚಿಸುತ್ತಿದ್ದೀರಾ? ಚಿಕನ್ ಪ್ರಿಯರಾಗಿದ್ದರೆ ತುಪ್ಪದ ಘಮದ ಈ ಡ್ರೈ ಚಿಕನ್ ರೋಸ್ಟ್ ಖಂಡಿತ ನಿಮ್ಮ ಮೆನುವಿನಲ್ಲಿರಬೇಕು.

ಒಮ್ಮೆ ತಿಂದರೆ ರುಚಿ ಮರೆಯಲ್ಲ: ಮನೆಯಲ್ಲೇ ಮಾಡಿ ಘಮಘಮಿಸುವ ಡ್ರೈ ಚಿಕನ್ ಘೀ ರೋಸ್ಟ್
ಡ್ರೈ ಚಿಕನ್ ಘೀ ರೋಸ್ಟ್
Published On :

ಇಂದು ಊಟಕ್ಕೆ ಏನು ಸ್ಪೆಷಲ್ ಮಾಡೋದು ಎಂದು ಯೋಚಿಸುತ್ತಿದ್ದೀರಾ? ಚಿಕನ್ ಪ್ರಿಯರಾಗಿದ್ದರೆ ತುಪ್ಪದ ಘಮದ ಈ ಡ್ರೈ ಚಿಕನ್ ರೋಸ್ಟ್ ಖಂಡಿತ ನಿಮ್ಮ ಮೆನುವಿನಲ್ಲಿರಬೇಕು.

ಮಸಾಲೆಯಲ್ಲಿ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ತುಪ್ಪದಲ್ಲಿ ನಿಧಾನವಾಗಿ ಹುರಿದಾಗ ಸಿಗುವ ಅದ್ಭುತ ಸುವಾಸನೆ ಮತ್ತು ರುಚಿಗೆ ಯಾರೂ ಬೇಡ ಎನ್ನಲಾರರು. ಸರಳ ಪದಾರ್ಥಗಳಿಂದ ಮನೆಯಲ್ಲೇ ತಯಾರಿಸಬಹುದಾದ ಈ ಘೀ ರೋಸ್ಟ್ ವಾರಾಂತ್ಯದ ಊಟಕ್ಕೆ ಹೇಳಿ ಮಾಡಿಸಿದ ಖಾದ್ಯ.

ಬೇಕಾಗುವ ಪದಾರ್ಥಗಳು...

ಚಿಕನ್ ಮ್ಯಾರಿನೇಟ್ ಮಾಡಲು:

  • ಚಿಕನ್ – 500 ಗ್ರಾಂ

  • ಮೊಸರು – 2 ಚಮಚ

  • ಅರಿಶಿನ – ¼ ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ನಿಂಬೆ ರಸ – 1 ಚಮಚ

ಘೀ ರೋಸ್ಟ್ ಮಸಾಲೆಗೆ:

  • ಒಣಮೆಣಸಿನಕಾಯಿ – 8–10

  • ಧನಿಯಾ – 1½ ಚಮಚ

  • ಜೀರಿಗೆ – 1 ಚಮಚ

  • ಮೆಂತ್ಯೆ – ¼ ಚಮಚ

  • ಕರಿಮೆಣಸು – ½ ಚಮಚ

  • ಸೋಂಪು – ½ ಚಮಚ

  • ಲವಂಗ – 3

  • ದಾಲ್ಚಿನ್ನಿ – ಸಣ್ಣ ತುಂಡು

  • ಹುಣಸೆಹಣ್ಣು – ಸಣ್ಣ ಉಂಡೆ

  • ಬೆಲ್ಲ – 1 ಚಮಚ

  • ತುಪ್ಪ – 3–4 ಚಮಚ

  • ಕರಿಬೇವು – ಸ್ವಲ್ಪ

ಮಾಡುವ ವಿಧಾನ...

  • ಚಿಕನ್‌ಗೆ ಮೊಸರು, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ. ಕನಿಷ್ಠ 30 ನಿಮಿಷ ಮ್ಯಾರಿನೇಟ್ ಮಾಡಲು ಇಡಿ.

  • ಬಾಣಲೆಗೆ ಒಣಮೆಣಸಿನಕಾಯಿ, ದನಿಯಾ, ಜೀರಿಗೆ, ಮೆಂತ್ಯೆ, ಕರಿಮೆಣಸು, ಸೋಂಪು, ಲವಂಗ ಮತ್ತು ದಾಲ್ಚಿನ್ನಿ ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.

  • ಹುರಿದ ಮಸಾಲೆ ತಣ್ಣಗಾದ ಬಳಿಕ ಸ್ವಲ್ಪ ನೀರು, ಹುಣಸೆಹಣ್ಣು ಮತ್ತು ಬೆಲ್ಲ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

  • ಬಾಣಲೆಗೆ 1 ಚಮಚ ತುಪ್ಪ ಹಾಕಿ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ಚಿಕನ್‌ನಿಂದ ನೀರು ಬಿಟ್ಟುಕೊಂಡು ಅದೇ ನೀರಿನಲ್ಲಿ ಬೇಯುತ್ತದೆ.

  • ಚಿಕನ್ ಬಹುತೇಕ ಬೇಯುವವರೆಗೆ ಮುಚ್ಚಿ ಬೇಯಿಸಿ. ನಂತರ ಮುಚ್ಚಳ ತೆಗೆದು ಹೆಚ್ಚುವರಿ ನೀರು ಆವಿಯಾಗುವಂತೆ ಮಾಡಿ.

  • ಈಗ ರುಬ್ಬಿಕೊಂಡ ಮಸಾಲೆ ಸೇರಿಸಿ ಚೆನ್ನಾಗಿ ಕಲಸಿ. ಉಳಿದ ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಹಾಕುತ್ತಾ ಕಡಿಮೆ ಉರಿಯಲ್ಲಿ ಹುರಿಯಿರಿ.

  • ಮಸಾಲೆ ಚಿಕನ್‌ಗೆ ಚೆನ್ನಾಗಿ ಅಂಟಿಕೊಂಡು ತುಪ್ಪ ಮೇಲಕ್ಕೆ ಬಂದು ಚಿಕನ್ ಡ್ರೈ ರೀತಿ ಕಾಣುವವರೆಗೆ 8–10 ನಿಮಿಷ ಹುರಿಯಿರಿ.

  • ಕೊನೆಯಲ್ಲಿ ಕರಿಬೇವು ಹಾಕಿ 2 ನಿಮಿಷ ಹುರಿದರೆ ಘಮಘಮಿಸುವ ಡ್ರೈ ಚಿಕನ್ ಘೀ ರೋಸ್ಟ್ ಸವಿಯಲು ಸಿದ್ಧ.

ಟಿಪ್ಸ್:

ಘೀ ರೋಸ್ಟ್‌ಗೆ ತುಪ್ಪವನ್ನು ಒಂದೇ ಬಾರಿ ಹಾಕುವ ಬದಲು ಹುರಿಯುವಾಗ ಸ್ವಲ್ಪಸ್ವಲ್ಪವಾಗಿ ಸೇರಿಸಿದರೆ ಮಸಾಲೆ ರುಚಿ ಹೆಚ್ಚುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.