ಮನೆ ನೋಡಲು ಹೋಗಿದ್ದವರ ಮೇಲೆ ಪಿಟ್ ಬುಲ್ ನಾಯಿ ದಾಳಿ: ತಪ್ಪಿಸಿಕೊಳ್ಳಲು ಪರದಾಡಿದ ದಂಪತಿಗೆ ಗಂಭೀರ ಗಾಯ; ವಿಡಿಯೋ ವೈರಲ್
ನಾಯಿ ಆಕೆಯ ತೋಳು, ಕಾಲು ಕಚ್ಚಿ ಗಾಯ ಮಾಡಿದೆ. ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದು, ಆಳವಾದ ಗಾಯಗಳಾಗಿವೆ. ಸದ್ಯ ಶಿಫಾಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಂಜಾಬ್: ಬ್ರೋಕರ್ ಜೊತೆ ಮನೆ ನೋಡಲು ಹೋಗಿದ್ದ ದಂಪತಿಗಳ ಮೇಲೆ ಪಿಟ್‌ಬುಲ್ ನಾಯಿ ಏಕಾಏಕಿ ದಾಳಿ ಮಾಡಿದ್ದರಿಂದ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಂಜಾಬ್‌ನ ಪಟಿಯಾಲದ ಘುಮನ್ ನಗರದಲ್ಲಿ ನಡೆದಿದೆ.
ಮಂಗಳವಾರ ಸಂಜೆ ಅಂಕಿತ್ ಸಭರ್ವಾಲ್ ಹಾಗೂ ಅವರ ಪತ್ನಿ ಶಿಫಾಲಿ ಬಾಡಿಗೆ ಮನೆ ನೋಡಲು ಮನೆ ಬ್ರೋಕರ್ ಜೊತೆ ಘುಮನ್ ನಗರಕ್ಕೆ ತೆರಳಿದ್ದಾರೆ. ಈ ವೇಳೆ ಮನೆಯ ಗೇಟ್ ತೆರೆಯುತ್ತಿದ್ದಂತೆ ಪಿಟ್‌ಬುಲ್ ನಾಯಿ ಏಕಾಏಕಿ ಹೊರಗೆ ಬಂದು ಶಿಫಾಲಿ ಮೇಲೆ ದಾಳಿ ಮಾಡಿದೆ.
ನಾಯಿ ಆಕೆಯ ತೋಳು, ಕಾಲು ಕಚ್ಚಿ ಗಾಯ ಮಾಡಿದೆ. ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದು, ಆಳವಾದ ಗಾಯಗಳಾಗಿವೆ. ಸದ್ಯ ಶಿಫಾಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿಯನ್ನು ರಕ್ಷಿಸಲು ಮುಂದಾದ ಅಂಕಿತ್‌ಗೂ ನಾಯಿ ದಾಳಿ ಮಾಡಿದೆ. ಅವರ ಕಾಲು ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ.
ದಂಪತಿ ನಾಯಿಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾಳಿ ಮುಂದುವರೆಸಿದ್ದ ವೇಳೆ ನಾಲ್ಕು ಜನ ಸ್ಥಳೀಯರು ಕೋಲುಗಳನ್ನು ಹಿಡಿದು ನಾಯಿಯನ್ನು ಹೊಡೆದು ಬೆದರಿಸಿ, ತಡೆಯಲು ಪ್ರಯತ್ನಿಸಿದ್ದಾರೆ. ಕೆಲವು ಸಮಯದ ನಂತರ ಹರಸಾಹಸಪಟ್ಟು ದಂಪತಿಯನ್ನು ರಕ್ಷಿಸಿದ್ದಾರೆ. ದಾಳಿಯ ಭಯಾನಕ CCTV ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



