ರಾಘವ್ ಚಡ್ಡಾ, ಇತರರು ಎಎಪಿ ಬಿಟ್ಟು ಹೋಗುತ್ತಿರಲಿಲ್ಲ...: ಅಣ್ಣಾ ಹಜಾರೆ ಸ್ಫೋಟಕ ಹೇಳಿಕೆ
"ಇದು ಅವರ(ಎಎಪಿ ನಾಯಕತ್ವದ) ತಪ್ಪು. ಆ ಪಕ್ಷ ಸರಿಯಾದ ಮಾರ್ಗವನ್ನು ಅನುಸರಿಸಿದ್ದರೆ, ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ" ಎಂದು ಹಜಾರೆ ಹೇಳಿದರು.

ಮುಂಬೈ: ಆಮ್ ಆದ್ಮಿ ಪಕ್ಷ(ಎಎಪಿ) "ಸರಿಯಾದ" ಮಾರ್ಗವನ್ನು ಅನುಸರಿಸಿದ್ದರೆ, ರಾಘವ್ ಛಡ್ಡಾ ಮತ್ತು ಇತರ ಆರು ರಾಜ್ಯಸಭಾ ಸದಸ್ಯರು ಪಕ್ಷವನ್ನು ತ್ಯಜಿಸುತ್ತಿರಲಿಲ್ಲ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಶುಕ್ರವಾರ ಹೇಳಿದ್ದಾರೆ.
"ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ಹೊಂದುವ ಹಕ್ಕಿದೆ. ಅವರು(ಚಡ್ಡಾ ಮತ್ತು ಇತರರು) ಕೆಲವು ತೊಂದರೆಗಳನ್ನು ಎದುರಿಸಿರಬೇಕು. ಅದಕ್ಕಾಗಿಯೇ ಅವರು ಎಎಪಿ ತೊರೆದರು" ಎಂದು ಹಜಾರೆ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ತೊರೆದು, ಬಿಜೆಪಿಗೆ ಸೇರುವುದಾಗಿ ಘೋಷಿಸಿದರು.
"ಇದು ಅವರ(ಎಎಪಿ ನಾಯಕತ್ವದ) ತಪ್ಪು. ಆ ಪಕ್ಷ ಸರಿಯಾದ ಮಾರ್ಗವನ್ನು ಅನುಸರಿಸಿದ್ದರೆ, ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ" ಎಂದು ಹಜಾರೆ ಹೇಳಿದರು.
ಚಡ್ಡಾ ಮತ್ತು ಇತರರು ಎಎಪಿಯೊಳಗೆ ಕೆಲವು ತೊಂದರೆಗಳನ್ನು ಎದುರಿಸಿರಬೇಕು ಮತ್ತು ಅದಕ್ಕಾಗಿಯೇ ಅವರು ಹೊರಟುಹೋದರು ಎಂದು ಹಜಾರೆ ಪುನರುಚ್ಚರಿಸಿದರು.
"ಪಕ್ಷ ಸರಿಯಾದ ದಿಕ್ಕಿನಲ್ಲಿ ಹೋಗಿದ್ದರೆ, ಅವರು ಪಕ್ಷ ಬಿಡುತ್ತಿರಲಿಲ್ಲ" ಎಂದು ಹಿರಿಯ ಹೋರಾಟಗಾರ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



