ಕೇಜ್ರಿವಾಲ್ ಎಎಪಿಯ ತತ್ವಗಳಿಂದ ದೂರ ಸರಿದಿದ್ದಾರೆ: ಪಕ್ಷ ತೊರೆದ ಸ್ವಾತಿ ಮಲಿವಾಲ್
"ಇಂದು ಬಹಳ ದುಃಖದಿಂದ, ನಾವು ಪ್ರಾರಂಭಿಸಿದ ಪ್ರಾಮಾಣಿಕ ರಾಜಕೀಯಕ್ಕಾಗಿ ತತ್ವಗಳು, ಮೌಲ್ಯಗಳು ಮತ್ತು ಸಂಕಲ್ಪವನ್ನು ಅರವಿಂದ್ ಕೇಜ್ರಿವಾಲ್ ಜಿ ಮತ್ತು ಅವರ ಆಜ್ಞೆಯ ಮೇರೆಗೆ ಇಡೀ ಆಮ್ ಆದ್ಮಿ ಪಕ್ಷ ಕೈಬಿಟ್ಟಿದೆ ಎಂದು ಹೇಳುತ್ತಿದ್ದೇನೆ"

ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ತೊರೆಯುವ ನಿರ್ಧಾರ ಪ್ರಕಟಿಸಿದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ ಸ್ಥಾಪಕ ತತ್ವಗಳಿಂದ ದೂರ ಸರಿದಿದೆ ಮತ್ತು ದುಷ್ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ರಕ್ಷಿಸಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ ಮಲಿವಾಲ್, 2006 ರಲ್ಲಿ ದೇಶ ಸೇವೆ ಮತ್ತು ಸಾರ್ವಜನಿಕ ಸೇವೆಯ ಮಾರ್ಗವನ್ನು ಆರಿಸಿಕೊಂಡೆ ಎಂದು ಹೇಳಿದ್ದಾರೆ.
"ಆರ್‌ಟಿಐ ಹೋರಾಟ ಮತ್ತು ಅಣ್ಣಾ ಹಜಾರೆ ಅವರ ಚಳುವಳಿಯಿಂದ ಆಮ್ ಆದ್ಮಿ ಪಕ್ಷದ ರಚನೆ, ದೆಹಲಿ ಮಹಿಳಾ ಆಯೋಗದಲ್ಲಿ ನನ್ನ ಎಂಟು ವರ್ಷಗಳ ಸಮರ್ಪಿತ ಸೇವೆಯವರೆಗೆ, ನಾನು ಪ್ರತಿ ಹಂತದಲ್ಲೂ ಸಂಪೂರ್ಣ ಪ್ರಾಮಾಣಿಕವಾಗಿ ಮತ್ತು ಭಕ್ತಿಯಿಂದ ಕೆಲಸ ಮಾಡಿದ್ದೇನೆ" ಎಂದು ಮಲಿವಾಲ್ ತಿಳಿಸಿದ್ದಾರೆ.
"ಇಂದು ಬಹಳ ದುಃಖದಿಂದ, ನಾವು ಪ್ರಾರಂಭಿಸಿದ ಪ್ರಾಮಾಣಿಕ ರಾಜಕೀಯಕ್ಕಾಗಿ ತತ್ವಗಳು, ಮೌಲ್ಯಗಳು ಮತ್ತು ಸಂಕಲ್ಪವನ್ನು ಅರವಿಂದ್ ಕೇಜ್ರಿವಾಲ್ ಜಿ ಮತ್ತು ಅವರ ಆಜ್ಞೆಯ ಮೇರೆಗೆ ಇಡೀ ಆಮ್ ಆದ್ಮಿ ಪಕ್ಷ ಕೈಬಿಟ್ಟಿದೆ ಎಂದು ಹೇಳುತ್ತಿದ್ದೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಮಲಿವಾಲ್, ಕೇಜ್ರಿವಾಲ್ ಅವರ ಸೂಚನೆಯ ಮೇರೆಗೆ ತನ್ನ ಮೇಲೆ "ತೀವ್ರ ದೈಹಿಕ ಹಲ್ಲೆ ಹಾಗೂ ಘೋರ ದುಷ್ಕೃತ್ಯ" ನಡೆಯಿತು ಮತ್ತು ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



