ನೋಯ್ಡಾ: ಮದುವೆಯಾಗಲು ನಿರಾಕರಿಸಿದ ಗರ್ಲ್ಫ್ರೆಂಡ್ ಗೆ ಗುಂಡಿಕ್ಕಿ ಕೊಂದ ಯುವಕ!
ಶುಕ್ರವಾರ ಸಂಜೆ ಫೇಸ್ 2 ಪ್ರದೇಶದಲ್ಲಿ ಕೃಷ್ಣ(26) ಎಂಬ ಯುವಕ ತನ್ನ ಗೆಳತಿ ಸೋನು(25) ಅವರು ತಂಗಿದ್ದ ಪೇಯಿಂಗ್ ಗೆಸ್ಟ್ ಗೆ ತೆರಳಿ, ಅಲ್ಲಿ ಅಕೆಯೊಂದಿಗೆ ಜಗಳ ಮಾಡಿದ ನಂತರ ಗುಂಡು ಹಾರಿಸಿದ್ದಾನೆ.

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಯುವಕನೊಬ್ಬ ತನ್ನನ್ನು ಮದುವೆಯಾಗಲು ನಿರಾಕರಿಸಿದ ಗರ್ಲ್ಫ್ರೆಂಡ್ ಗೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರ ಸಂಜೆ ಫೇಸ್ 2 ಪ್ರದೇಶದಲ್ಲಿ ಕೃಷ್ಣ(26) ಎಂಬ ಯುವಕ ತನ್ನ ಗೆಳತಿ ಸೋನು(25) ಅವರು ತಂಗಿದ್ದ ಪೇಯಿಂಗ್ ಗೆಸ್ಟ್ ಗೆ ತೆರಳಿ, ಅಲ್ಲಿ ಅಕೆಯೊಂದಿಗೆ ಜಗಳ ಮಾಡಿದ ನಂತರ ಗುಂಡು ಹಾರಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ(ಸೆಂಟ್ರಲ್ ನೋಯ್ಡಾ) ಶಕ್ತಿ ಮೋಹನ್ ಅವಸ್ಥಿ ಅವರು ತಿಳಿಸಿದ್ದಾರೆ.
ಪಿಜಿಯಲ್ಲಿ ಯುವತಿ ಮೇಲೆ ಗುಂಡು ಹಾರಿಸಿದ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.
ವಿಧಿವಿಜ್ಞಾನ ತಂಡ ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿದೆ ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದರು.
"ಆರಂಭಿಕ ತನಿಖೆಯಲ್ಲಿ ಕೃಷ್ಣ ಯುವತಿಯ ಕೋಣೆಗೆ ಹೋಗಿದ್ದು, ಇಬ್ಬರ ನಡುವೆ ಜಗಳದ ಬಳಿಕ ಗುಂಡು ಹಾರಿಸಿದ್ದಾನೆ" ಎಂದು ಡಿಸಿಪಿ ತಿಳಿಸಿದರು.
ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಗುಂಡು ಹಾರಿಸಿ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡ ನಿಯೋಜಿಸಲಾಗಿದೆ. ಇತರ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮ್ರೋಹಾ ಮೂಲದ ಮಹಿಳೆ ಮತ್ತು ಬಿಹಾರ ಮೂಲದ ಕೃಷ್ಣ, ಈ ಹಿಂದೆ ಕಾರ್ಖಾನೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಅಂದಿನಿಂದ ಸಂಬಂಧದಲ್ಲಿದ್ದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



