ರಾಜ್ಯ

ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಗರ್ಲ್ ಫ್ರೆಂಡ್ ಗೆ ಬೆದರಿಕೆ; 2.57 ಕೋಟಿ ರೂ ಸುಲಿಗೆ, ಯುವಕನ ಬಂಧನ

ಶಾಲಾ ದಿನಗಳಲ್ಲಿಯೇ ಇಬ್ಬರಲ್ಲಿ ಪ್ರೇಮಂಕುರವಾಗಿದ್ದು, ರಜಾ ದಿನಗಳಲ್ಲಿ ಯುವತಿಯನ್ನು ಪುಸಲಾಯಿಸಿ ಪ್ರವಾಸಕ್ಕೆ ಕರೆದೊಯ್ದುತ್ತಿದ್ದ ಕುಮಾರ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಗರ್ಲ್ ಫ್ರೆಂಡ್ ಗೆ ಬೆದರಿಕೆ; 2.57 ಕೋಟಿ ರೂ ಸುಲಿಗೆ, ಯುವಕನ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ19 ವರ್ಷದ ಗರ್ಲ್ ಫ್ರೆಂಡ್ ಗೆ ಬ್ಲಾಕ್‌ಮೇಲ್ ಮಾಡಿ ರೂ. 2.57 ಕೋಟಿ ಸುಲಿಗೆ ಮಾಡಿದ್ದ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಚಾಮರಾಜಪೇಟೆಯ ಮೋಹನ್ ಕುಮಾರ್ (19) ಎಂದು ಗುರುತಿಸಲಾಗಿದೆ. ಕುಮಾರ್ ಮತ್ತು ಆತನ ಸ್ನೇಹಿತೆ ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಶಾಲಾ ದಿನಗಳಲ್ಲಿಯೇ ಇಬ್ಬರಲ್ಲಿ ಪ್ರೇಮಂಕುರವಾಗಿದ್ದು, ರಜಾ ದಿನಗಳಲ್ಲಿ ಯುವತಿಯನ್ನು ಪುಸಲಾಯಿಸಿ ಪ್ರವಾಸಕ್ಕೆ ಕರೆದೊಯ್ದುತ್ತಿದ್ದ ಕುಮಾರ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಅಜ್ಜಿಯ ಬ್ಯಾಂಕ್ ಖಾತೆಯಿಂದ ಯುವತಿ ರೂ. 1.25 ಕೋಟಿ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.

ಅವರು ಒಟ್ಟಿಗೆ ಇದ್ದಾಗ ರಹಸ್ಯವಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಫೋಟೋ ತೆಗೆದುಕೊಂಡಿದ್ದ ಕುಮಾರ್ ಗೆ ತನ್ನ ಗೆಳತಿಯ ತಂದೆ ಶ್ರೀಮಂತ ಉದ್ಯಮಿ ಎಂದು ತಿಳಿದ ನಂತರ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದ. ಆಕೆಯಿಂದ ಹಣ ಪೀಕಿಸಲು ಶುರು ಮಾಡಿದ್ದ. ಆಕೆ ನಿರಾಕರಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮತ್ತು ಫೋಟೋ ಹಾಕುವುದಾಗಿ ಅಪ್ ಲೋಡ್ ಮಾಡಿದ್ದ. ಈ ಭಯದಿಂದ ಹೆದರಿ ಯುವತಿ ಆಕೆಯ ಅಜ್ಜಿಯ ಬ್ಯಾಂಕ್ ಖಾತೆಯಿಂದ ಕುಮಾರ್ ಹೇಳಿದ ವಿವಿಧ ಖಾತೆಗಳಿಗೆ ರೂ. 1.25 ಕೋಟಿ ವರ್ಗಾವಣೆ ಮಾಡಿದ್ದ. ಅಲ್ಲದೇ ಆಕೆಯೂ 1.32 ಕೋಟಿ ಹಣ ನೀಡಿದ್ದಳು.

ತನಗೆ ಚಿನ್ನ, ದುಬಾರಿ ವಾಚ್‌ಗಳು ಮತ್ತು ವಾಹನ ನೀಡುವಂತೆ ಕುಮಾರ್ ಯುವತಿ ಮೇಲೆ ಒತ್ತಡ ಹೇರಿದ್ದ ಎಂದು ಮೂಲಗಳು ತಿಳಿಸಿವೆ. ಆತನ ಬೇಡಿಕೆಗಳು ಹೆಚ್ಚಾಗುತ್ತಿದ್ದಂತೆ ಆಕೆಯನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದಾಗ ಯುವತಿ ಸಿಸಿಬಿಗೆ ದೂರು ನೀಡಿದ್ದಾಳೆ.

ಎಫ್‌ಐಆರ್‌ನ ಪ್ರಕಾರ, ಯುವತಿ ಕುಮಾರ್‌ನ ತಂದೆ ಮತ್ತು ಇತರರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾಯಿಸಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಂದ 80 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ವಿಡಿಯೋಗಳನ್ನು ರೆಕಾರ್ಡ್ ಮಾಡುವಾಗ ಯುವತಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.