ಬ್ರಿಟಿಷರ ಕಾಲದ ಬಳಕೆಯಲ್ಲಿಲ್ಲದ ಕಾನೂನುಗಳ ಬಗ್ಗೆ ವಿರೋಧ ಪಕ್ಷಗಳು ಏಕೆ ಮೌನವಾಗಿದ್ದವು: ಪ್ರಧಾನಿ ಮೋದಿ
'ನ್ಯೂಸ್ ಎಕ್ಸ್ ವರ್ಲ್ಡ್' ಚಾನೆಲ್ ನ್ನು ಉದ್ಘಾಟನೆಯ NXT ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದಶಕಗಳಿಂದ ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಆಗಿ ನೋಡುತ್ತಿತ್ತು. ಆದರೆ ದೇಶವು ಈಗ ವಿಶ್ವದ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ನವದೆಹಲಿ: ಭಾರತೀಯ ಸ್ವದೇಶಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿರುವುದರಿಂದ ಮತ್ತು ಪ್ರಪಂಚದಾದ್ಯಂತ ತಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಸ್ಥಳೀಯತೆಗೆ ಆದ್ಯತೆ ಅಭಿಯಾನವು ಫಲ ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
'ನ್ಯೂಸ್ ಎಕ್ಸ್ ವರ್ಲ್ಡ್' ಚಾನೆಲ್ ನ್ನು ಉದ್ಘಾಟನೆಯ NXT ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದಶಕಗಳಿಂದ ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಆಗಿ ನೋಡುತ್ತಿತ್ತು. ಆದರೆ ದೇಶವು ಈಗ ವಿಶ್ವದ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಇಂದು ಭಾರತವು ಕಾರ್ಯಪಡೆಯಾಗಿ ಉಳಿದಿಲ್ಲ, ಬದಲಿಗೆ "ವಿಶ್ವ ಶಕ್ತಿ"ಯಾಗಿದೆ. ದೇಶವು ಸೆಮಿಕಂಡಕ್ಟರ್‌ಗಳು ಮತ್ತು ವಿಮಾನ ವಾಹಕಗಳನ್ನು ತಯಾರಿಸುತ್ತಿದೆ. ಮಖಾನಾ, ರಾಗಿ, ಆಯುಷ್ ಉತ್ಪನ್ನಗಳಂತಹ ಸೂಪರ್ ಫುಡ್ ಗಳನ್ನು ಮತ್ತು ಭಾರತೀಯ ಯೋಗ ಪರಂಪರೆಯನ್ನು ಇಂದು ಪ್ರಪಂಚದಾದ್ಯಂತ ಸ್ವೀಕರಿಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತವು ಪ್ರಮುಖ ಆಟೋಮೊಬೈಲ್ ಉತ್ಪಾದಕವಾಗಿದೆ ಮತ್ತು ಅದರ ರಕ್ಷಣಾ ರಫ್ತು ಹೆಚ್ಚುತ್ತಿದೆ ಎಂದರು. ಭಾರತವನ್ನು ಯಾವುದೇ ಬೇಡಿಕೆಯಿಲ್ಲದೆ ಹಾಗೆಯೇ ಪ್ರಸ್ತುತಪಡಿಸಬೇಕು. ಇದಕ್ಕೆ ಯಾವುದೇ ಲೇಪನದ ಅಗತ್ಯವಿಲ್ಲ, ದೇಶದ ನೈಜ ಕಥೆಗಳು ಜಗತ್ತನ್ನು ತಲುಪಬೇಕು ಎಂದು ಹೇಳಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಮತ್ತೆ ಆಯ್ಕೆಯಾಗಿರುವುದು ಜನರ ನಂಬಿಕೆಯನ್ನು ತೋರಿಸಿದೆ ಮತ್ತು ಭಾರತದ ಹೊಸ ಜಾಗತಿಕ ಸುದ್ದಿ ಚಾನೆಲ್ ದೇಶದ ಸಾಧನೆಗಳನ್ನು ವಿದೇಶಗಳಿಗೆ ಕೊಂಡೊಯ್ಯುತ್ತದೆ ಎಂದರು.
21 ನೇ ಶತಮಾನದಲ್ಲಿ ಜಗತ್ತು ಭಾರತವನ್ನು ನೋಡುತ್ತಿದೆ. ದೇಶವು ನಿರಂತರವಾಗಿ ಸಕಾರಾತ್ಮಕ ಸುದ್ದಿಗಳನ್ನು ಉತ್ಪಾದಿಸುತ್ತಿದೆ. ಭಾರತವು ಈಗ ಅನೇಕ ಜಾಗತಿಕ ಉಪಕ್ರಮಗಳನ್ನು ಮುನ್ನಡೆಸುತ್ತಿದೆ ಎಂದು ಅವರು ಇತ್ತೀಚಿನ ಎಐ ಶೃಂಗಸಭೆ ಮತ್ತು ಭಾರತದ ಜಿ20 ಅಧ್ಯಕ್ಷತೆ ಸಹ-ಆತಿಥ್ಯ ವಹಿಸಿದ್ದನ್ನು ಉಲ್ಲೇಖಿಸಿ ಹೇಳಿದರು.
ಮಹಾ ಕುಂಭವನ್ನು ಉಲ್ಲೇಖಿಸಿದ ಪ್ರಧಾನಿ, ಇದು ಭಾರತದ ಸಂಘಟನಾ ಕೌಶಲ್ಯ ಮತ್ತು ನಾವೀನ್ಯತೆಯನ್ನು ಎತ್ತಿ ತೋರಿಸಿದೆ ಎಂದರು.
ತಮ್ಮ ಸರ್ಕಾರವು ಇಂದು ಅನೇಕ ಬಳಕೆಯಲ್ಲಿಲ್ಲದ ಬ್ರಿಟಿಷರ ಕಾನೂನುಗಳನ್ನು ರದ್ದುಗೊಳಿಸಿದೆ. 10 ಅಥವಾ ಅದಕ್ಕಿಂತ ಜನರು ಸೇರಿ ನೃತ್ಯ ಮಾಡುವುದನ್ನು ಅಪರಾಧೀಕರಿಸುವ ಬ್ರಿಟಿಷರು ಮಾಡಿದ ಕಾಯ್ದೆಯು ಇತ್ತೀಚಿನವರೆಗೂ ಜಾರಿಯಲ್ಲಿದ್ದು, ತಮ್ಮ ಸರ್ಕಾರ ಬಂದ ಮೇಲೆ ರದ್ದುಗೊಳಿಸಲಾಯಿತು ಎಂದರು.
'ಲುಟಿಯೆನ್ಸ್ ಜಮಾತ್' ಮತ್ತು 'ಖಾನ್ ಮಾರ್ಕೆಟ್ ಗ್ಯಾಂಗ್' ವಿರುದ್ಧ ವಾಗ್ದಾಳಿ ನಡೆಸಿದ ಮೋದಿಯವರು, ಮದುವೆಯಲ್ಲಿ 10 ಜನರು ಒಟ್ಟಿಗೆ ನೃತ್ಯ ಮಾಡಿದರೆ ಪೊಲೀಸರು ವರ ಮತ್ತು ಇತರರನ್ನು ಬಂಧಿಸಬಹುದು ಎಂಬ ಕಾನೂನು ಸೇರಿದಂತೆ ಕೆಲವು ಬ್ರಿಟಿಷ್ ಯುಗದ ಕಾನೂನುಗಳ ಬಗ್ಗೆ ವಿರೋಧ ಪಕ್ಷದವರ ಮೌನವನ್ನು ಪ್ರಶ್ನಿಸಿದರು.
ಇಷ್ಟು ವರ್ಷಗಳಿಂದ 'ಲುಟಿಯನ್ಸ್' ಜಮಾತ್ ಮತ್ತು 'ಖಾನ್ ಮಾರ್ಕೆಟ್ ಗ್ಯಾಂಗ್' ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಆಗಾಗ ನ್ಯಾಯಾಲಯಗಳಿಗೆ ಭೇಟಿ ನೀಡುವವರು, ಅಂದು ಅವರ ಸ್ವಾತಂತ್ರ್ಯದ ಬಗ್ಗೆ ಏಕೆ ಚಿಂತಿಸಲಿಲ್ಲ ಎಂದು ನನಗೆ ಅಚ್ಚರಿಯಾಗುತ್ತಿದೆ ಎಂದರು.
ಬ್ರಿಟಿಷರು 150 ವರ್ಷಗಳ ಹಿಂದೆ ಈ ಕಾನೂನನ್ನು ತಂದಿದ್ದರು. ಸ್ವಾತಂತ್ರ್ಯದ ನಂತರ ಅದು 75 ವರ್ಷಗಳ ಕಾಲ ಇತ್ತು. ಮದುವೆಯಲ್ಲಿ ವರನ ಜೊತೆ 10 ಜನ ಸೇರಿ ನೃತ್ಯ ಮಾಡಿದರೆ ಬಂಧನಕ್ಕೆ ಕಾರಣವಾಗಬಹುದಾಗಿದ್ದ ಕಾನೂನನ್ನು ನಮ್ಮ ಸರ್ಕಾರ ರದ್ದುಗೊಳಿಸಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



