Pahalgam Terrorist Attack: ಬೆಚ್ಚಿ ಬೀಳಿಸಿದ ಮತ್ತೊಂದು Video; ಪ್ರವಾಸಿಗನ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆ!
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಿಡಿಯೋ ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದೇ ರೆಕಾರ್ಡ್ ಆಗಿದೆ.

ನವದೆಹಲಿ: 26 ಮಂದಿಯ ಭೀಕರ ಸಾವಿಗೆ ಕಾರಣವಾಗಿದ್ದ ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್(Pahalgam)ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಿಡಿಯೋ ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದೇ ರೆಕಾರ್ಡ್ ಆಗಿದೆ.
ಮೂಲಗಳ ಪ್ರಕಾರ ಗುಜರಾತ್ ನ ಅಹ್ಮದಾಬಾದ್ ನಿವಾಸಿಯೊಬ್ಬರು ಅಂದು ಪಹಲ್ಗಾಮ್ ಗೆ ಆಗಮಿಸಿದ್ದರು. ಈ ವೇಳೆ ರೋಪ್ ಕ್ರಾಸಿಂಗ್ ಮಾಡುವ ವೇಳೆ ಅವರು ಸೆಲ್ಫಿ ಕ್ಯಾಮೆರಾದಲ್ಲಿ ರೋಚಕ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆದರೆ ಅದೇ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದಂತೆ ಉಗ್ರರ ಪೈಶಾಚಿಕ ಕೃತ್ಯಕೂಡ ಸೇರಿಯಾಗಿದೆ.
ಮೇಲೆ ರೋಪ್ ಕ್ರಾಸಿಂಗ್ ವೇಳೆ ವ್ಯಕ್ತಿ ಕ್ಯಾಮೆರಾ ಆನ್ ಮಾಡಿ ಹೋಗುತ್ತಿದ್ದಾಗ ಕೆಳಗೆ ಉಗ್ರರು ದಾಳಿ ಆರಂಭಿಸಿದ್ದಾರೆ. ಈ ವೇಳೆ ಗುಂಡಿನ ಸದ್ದು ಮೊಳಗಿದರೂ ರೋಪ್ ಕ್ರಾಸಿಂಗ್ ವೇಳೆ ಕಿರುಚುತ್ತಿದ್ದ ಪ್ರವಾಸಿಗನಿಗೆ ಅದು ಕೇಳಿಸಿಲ್ಲ. ಅದೇ ಸಂರ್ಭದಲ್ಲಿ ಕೆಳಗೆ ಗುಂಡಿನ ಶಬ್ಧಮೊಳಗುತ್ತವೇ ಓರ್ವ ಪ್ರವಾಸಿಗ ಓಡುತ್ತಿರುತ್ತಾನೆ. ಈ ವೇಳೆ ಆತನನ್ನು ಬೆನ್ನಟ್ಟಿದ ಉಗ್ರ ಆತನ ತಲೆಗೆ ಗುಂಡು ಹಾರಿಸುತ್ತಾನೆ. ಕೂಡಲೇ ಆ ಪ್ರವಾಸಿಗ ಕುಸಿಯುತ್ತಾನೆ.
ಆದರೆ ಇದಾವುದರ ಪರಿವೇ ಇಲ್ಲದೇ ಮೇಲೆ ಈ ವ್ಯಕ್ತಿ ರೋಪ್ ಕ್ರಾಸಿಂಗ್ ಮಾಡುತ್ತಾ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದುದು ಕಂಡುಬಂದಿದೆ. ರೋಪ್ ಕ್ರಾಸಿಂಗ್ ನ ಮುಕ್ತಾಯದ ಸಂದರ್ಭದಲ್ಲಿ ಏನೋ ಆಗುತ್ತಿದೆ ಎಂದು ಭಾವಿಸಿದ ಪ್ರವಾಸಿಗ ಆಗ ಕ್ಯಾಮೆರಾ ಆಫ್ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಅಂದಹಾಗೆ ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್(Pahalgam)ನಲ್ಲಿ ಪ್ರವಾಸಿಗರ ಮೇಲೆ ಭೀಕರ ಉಗ್ರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಹಿಂದೂ ಪ್ರವಾಸಿಗರನ್ನುಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಉಗ್ರರು ಪ್ರವಾಸಿಗರ ಪ್ಯಾಂಟ್ ಬಿಚ್ಚಿಸಿ, ಕಲ್ಮಾ ಓದುವಂತೆ ಹೇಳಿ ಅವರು ಮುಸ್ಲಿಮರಲ್ಲ ಎಂದು ಖಚಿತ ಪಡಿಸಿಕೊಂಡು ಗುಂಡು ಹಾರಿಸುತ್ತಿದ್ದರು. ಈ ವೇಳೆ ಉಗ್ರರನ್ನು ತಡೆಯಲು ಬಂದ ಓರ್ವ ಸ್ಥಳೀಯ ಕಾಶ್ಮೀರಿ ನಿವಾಸಿ ಕೂಡ ಉಗ್ರ ಗುಂಡೇಟಿಗೆ ಬಲಿಯಾಗಿದ್ದ. ಅಂದು ಒಟ್ಟಾರೆ 26 ಮಂದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



