ರಾಜಸ್ಥಾನದಲ್ಲಿ Heatwave: ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡಿದ BSF ಯೋಧ!: ವಿಡಿಯೋ ವೈರಲ್
ಉತ್ತರ ಭಾರತದಲ್ಲಿ Heat wave ತೀವ್ರಗೊಂಡಿದ್ದು, ರಾಜಸ್ಥಾನದಲ್ಲಿ ವರದಿಯಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಬಿಕಾನೆರ್: ಉತ್ತರ ಭಾರತದಲ್ಲಿ Heat wave ತೀವ್ರಗೊಂಡಿದ್ದು, ರಾಜಸ್ಥಾನದಲ್ಲಿ ವರದಿಯಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ರಾಜಸ್ಥಾನದ ಬಿಕಾನೆರ್ ನಲ್ಲಿ ಬಿಎಸ್ ಎಫ್ ಯೋಧರೊಬ್ಬರು ಸುಡು ಬಿಸಿಲಿನಲ್ಲಿ ಮರಳ ಮೇಲೆ papad roast (ಹಪ್ಪಳ ಹುರಿದಿರುವುದು) ಮಾಡಿದ್ದಾರೆ.
ಖಾಜುವಾಲದ ಬಳಿ ಇರುವ ಭಾರತ-ಪಾಕ್ ಗಡಿಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಪ್ರದೇಶದಲ್ಲಿ Heat wave ನ ತೀವ್ರತೆಯನ್ನು ತೋರುತ್ತಿದೆ.
ಈ ಪ್ರಮಾಣದ ಬಿಸಿಲಿನಲ್ಲಿಯೂ ಬದ್ಧತೆಯಿಂದ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ.
ದೇಶದಾದ್ಯಂತ ಜನರು ಸುಡುವ ಶಾಖದಿಂದ ಬಳಲುತ್ತಿದ್ದಾರೆ. ಬಿಸಿಲಿನಿಂದ ತಪ್ಪಿಸಿಕೊಳ್ಳುವುದಕ್ಕೆ ಪರಿಹಾರಕ್ಕಾಗಿ ಹವಾನಿಯಂತ್ರಣ ಮತ್ತು ಕೂಲರ್‌ಗಳಂತಹ ಆಧುನಿಕ ಸೌಕರ್ಯಗಳನ್ನು ಆಶ್ರಯಿಸುತ್ತಿದ್ದಾರೆ. ಆದರೆ ಈ ಸೈನಿಕರು ಪಟ್ಟುಬಿಡದೇ ನಮ್ಮ ತಾಯ್ನಾಡಿನ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ಬಿಕಾನೆರ್ ನಲ್ಲಿ 47 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


