ರಾಮಲಲ್ಲಾ ಪ್ರತಿಷ್ಠಾಪನೆ ದಿನ ಹುಟ್ಟಿದ್ದ ಹಲವು ಮಕ್ಕಳಿಗೆ 'ರಾಮ, ಸೀತಾ' ಹೆಸರು ನಾಮಕರಣ!
ಅಯೋಧ್ಯೆಯ ರಾಮಮಂದಿರದ ಐತಿಹಾಸಿಕ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಸೋಮವಾರ ಒಡಿಶಾದ ಕೇಂದ್ರಪಾರದಲ್ಲಿ ಜನಿಸಿದ ಹಲವಾರು ಶಿಶುಗಳಿಗೆ ಅವರ ಪೋಷಕರು ‘ರಾಮ’ ಮತ್ತು ‘ಸೀತಾ’ ಎಂದು ನಾಮಕರಣ ಮಾಡಿದ್ದಾರೆ.

ಕೇಂದ್ರಪಾರ: ಅಯೋಧ್ಯೆಯ ರಾಮಮಂದಿರದ ಐತಿಹಾಸಿಕ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಸೋಮವಾರ ಒಡಿಶಾದ ಕೇಂದ್ರಪಾರದಲ್ಲಿ ಜನಿಸಿದ ಹಲವಾರು ಶಿಶುಗಳಿಗೆ ಅವರ ಪೋಷಕರು ‘ರಾಮ’ ಮತ್ತು ‘ಸೀತಾ’ ಎಂದು ನಾಮಕರಣ ಮಾಡಿದ್ದಾರೆ. ರಾಜಕಾಣಿಕಾ ನಗರದ ಪ್ರಿಯಾಂಕಾ ಮಲ್ಲಿಕ್, ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿದ ಕೆಲವೇ ನಿಮಿಷಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ ಪೋಷಕರು ಆ ಮಗುವಿಗೆ ಸೀತಾ ಎಂದು ನಾಮಕರಣ ಮಾಡಿದ್ದಾರೆ.
ನಮ್ಮ ಇತಿಹಾಸದಲ್ಲಿ ಮಂಗಳಕರ ಮತ್ತು ಮಹತ್ವದ ದಿನದಂದು ಜನಿಸಿದ ಬಾಲಕಿಗೆ ಸೀತಾ ಎಂದು ಹೆಸರಿಸಲು ನಾವು ನಿರ್ಧರಿಸಿದ್ದೇವೆ" ಎಂದು ಪ್ರಿಯಾಂಕಾ ಅವರ ಪತಿ ನಾರಾಯಣ್ ಹೇಳಿದರು. ಅದೇ ರೀತಿ, ಮಹಾಕಲಪದ ಅಡೋಯಿ ಗ್ರಾಮದ ರೇಣುಬಾಲಾ ರೌತ್ (24) ಕೇಂದ್ರಪಾರ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ರಾಮ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ಅಲ್ಲದೆ, ಶೀಘ್ರದಲ್ಲೇ ಅಯೋಧ್ಯೆಗೆ ಭೇಟಿ ನೀಡಲು ಯೋಜಿಸುತ್ತಿದ್ದೇವೆ ಎಂದು ರೇಣುಬಾಲಾ ಅವರ ಪತಿ ಅಜಯ್ ಹೇಳಿದ್ದಾರೆ. ಅದೇ ರೀತಿ ಬಡಪಳ ಗ್ರಾಮದ ಭಾರತಿ ಸಾಹೂ (25) ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರು ಕೂಡಾ "ತಮ್ಮ ಮಗನಿಗೆ ರಾಮ ಎಂದು ಹೆಸರಿಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು. ಭಗಬತ್‌ಪುರ ಗ್ರಾಮದ ಬಂದನಾ ಜೆನಾ (28) ಕೇಂದ್ರಪಾರ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ಸೀತಾ ಎಂದು ಹೆಸರಿಟ್ಟಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


