ದೇಶ

ಸಂಜಯ್ ಸಿಂಗ್ ಸೇರಿ ಮೂವರು ಎಎಪಿ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

ಆಮ್ ಆದ್ಮಿ ಪಕ್ಷ(ಎಎಪಿ)ದ ಅಭ್ಯರ್ಥಿಗಳಾದ ಸಂಜಯ್ ಸಿಂಗ್, ಸ್ವಾತಿ ಮಲಿವಾಲ್ ಮತ್ತು ಎನ್‌ಡಿ ಗುಪ್ತಾ ಅವರು ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಜಯ್ ಸಿಂಗ್ ಸೇರಿ ಮೂವರು ಎಎಪಿ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಎನ್‌ಡಿ ಗುಪ್ತಾ - ಸ್ವಾತಿ ಮಲಿವಾಲ್ - ಸಂಜಯ್ ಸಿಂಗ್
Published On :

ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ದ ಅಭ್ಯರ್ಥಿಗಳಾದ ಸಂಜಯ್ ಸಿಂಗ್, ಸ್ವಾತಿ ಮಲಿವಾಲ್ ಮತ್ತು ಎನ್‌ಡಿ ಗುಪ್ತಾ ಅವರು ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂವರು ಅಭ್ಯರ್ಥಿಗಳು ಜನವರಿ 8 ರಂದು ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯಸಭೆ ಚುನಾವಣೆಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು.

ಆಮ್ ಆದ್ಮಿ ಪಕ್ಷ, ಸಂಜಯ್ ಸಿಂಗ್ ಮತ್ತು ಎನ್‌ಡಿ ಗುಪ್ತಾ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಿದ್ದು, ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯೂ) ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ಮೊದಲ ಬಾರಿಗೆ ರಾಜ್ಯಸಭೆಗೆ ಕಳುಹಿಸಿದೆ.

ಸುಶೀಲ್ ಗುಪ್ತಾ ಬದಲಿಗೆ ಸ್ವಾತಿ ಮಲಿವಾಲ್ ಆಯ್ಕೆಯಾಗಿದ್ದಾರೆ. ಎಎಪಿ ರಾಜ್ಯಸಭಾ ಅಭ್ಯರ್ಥಿಗಳಾದ ಸಂಜಯ್ ಸಿಂಗ್, ಸ್ವಾತಿ ಮಲಿವಾಲ್ ಮತ್ತು ಎನ್‌ಡಿ ಗುಪ್ತಾ ಅವರು ಅವಿರೋಧವಾಗಿ ಆಯ್ಕೆಯಾದ ನಂತರ ಚುನಾವಣಾಧಿಕಾರಿ ಆಶಿಶ್ ಕುಂದ್ರಾ ಅವರಿಂದ ಪ್ರಮಾಣಪತ್ರ ಪಡೆದರು.

ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ ನಂತರ ಮಾತನಾಡಿದ ಸ್ವಾತಿ ಮಲಿವಾಲ್ ಅವರು, ತಮ್ಮ ಕರ್ತವ್ಯವನ್ನು ನಿಜವಾದ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.