ದೇಶ

ಉತ್ತರಾಖಂಡದಲ್ಲಿ ಹಠಾತ್ ಪ್ರವಾಹ: ಫ್ಲವರ್ಸ್ ವ್ಯಾಲಿಯಲ್ಲಿ ಸಿಲುಕಿದ 189 ಪ್ರವಾಸಿಗರ ರಕ್ಷಣೆ

ಗುರುವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಫ್ಲವರ್ಸ್ ವ್ಯಾಲಿಯಲ್ಲಿ ಹೊಳೆಯ ಮೇಲಿನ ಕಾಂಕ್ರೀಟ್ ಸೇತುವೆ ಕೊಚ್ಚಿಹೋಯಿತು. ಇದರಿಂದ 189 ಪ್ರವಾಸಿಗರು ಸಿಕ್ಕಿಹಾಕಿಕೊಂಡರು ಎಂದು ಹೇಳಲಾಗಿದೆ.

ಉತ್ತರಾಖಂಡದಲ್ಲಿ ಹಠಾತ್ ಪ್ರವಾಹ: ಫ್ಲವರ್ಸ್ ವ್ಯಾಲಿಯಲ್ಲಿ ಸಿಲುಕಿದ 189 ಪ್ರವಾಸಿಗರ ರಕ್ಷಣೆ
ಪ್ಲವರ್ಸ್ ವ್ಯಾಲಿಯಲ್ಲಿ ಸಿಲುಕಿದ ಪ್ರವಾಸಿಗರು
Published On :

ಡೆಹ್ರಾಡೂನ್: ಗುರುವಾರ ಮಧ್ಯಾಹ್ನ ಹಠಾತ್ ಸುರಿದ ಮಳೆಯಿಂದಾಗಿ ವ್ಯಾಲಿ ಆಫ್ ಫ್ಲವರ್ಸ್ ಚಾರಣ ಮಾರ್ಗದಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದರಿಂದ 89 ಪ್ರವಾಸಿಗರು ಸಿಲುಕಿಕೊಂಡಿದ್ದರು.

ಗುರುವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಫ್ಲವರ್ಸ್ ವ್ಯಾಲಿಯಲ್ಲಿ ಹೊಳೆಯ ಮೇಲಿನ ಕಾಂಕ್ರೀಟ್ ಸೇತುವೆ ಕೊಚ್ಚಿಹೋಯಿತು. ಇದರಿಂದ 189 ಪ್ರವಾಸಿಗರು ಸಿಕ್ಕಿಹಾಕಿಕೊಂಡರು ಎಂದು ಹೇಳಲಾಗಿದೆ. ವ್ಯಾಲಿ ಆಫ್ ಫ್ಲವರ್ಸ್ ರೇಂಜ್‌ನ ಅರಣ್ಯ ಇಲಾಖೆ ಅಧಿಕಾರಿ ಚೇತನಾ ಕಂಡ್‌ಪಾಲ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿ, "ಸೇತುವೆಯ ಕುಸಿತದಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಫ್ಲವರ್ಸ್ ವ್ಯಾಲಿ ಟ್ರೆಕ್ಕಿಂಗ್ ದಾರಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಮಗೆ ಮಧ್ಯಾಹ್ನ ಮಾಹಿತಿ ಬಂದಿತು. ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ತಕ್ಷಣ ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವಿನಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕೆಲವೇ ಗಂಟೆಗಳಲ್ಲಿ 189 ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ನಂದಾದೇವಿ ರಾಷ್ಟ್ರೀಯ ಉದ್ಯಾನವನದ ಆಡಳಿತದ ತಂಡವು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲು ಅವಿರತವಾಗಿ ಶ್ರಮಿಸಿತು, ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿ ಹೊಳೆ ದಾಟಲು ಅನುವು ಮಾಡಿಕೊಟ್ಟಿತು. ಪ್ರವಾಸಿಗರು ಮಹಾರಾಷ್ಟ್ರ, ದೆಹಲಿ, ಚಂಡೀಗಢ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದವರಾಗಿದ್ದರು. ಉತ್ತರಾಖಂಡದ ಸುಂದರವಾದ ಚಮೋಲಿ ಜಿಲ್ಲೆಯಲ್ಲಿ ನೆಲೆಗೊಂಡಿರುವ ಫ್ಲವರ್ಸ್ ವ್ಯಾಲಿ ಟ್ರೆಕ್ಕಿಂಗ್ ಗೆ ಉತ್ತಮ ಸ್ಥಳವಾಗಿದ್ದು, ಪ್ರವಾಸಿಗರನ್ನು ಮೋಡಿ ಮಾಡುವ ತಾಣವಾಗಿದೆ. ಈ ಭಾರತೀಯ ರಾಷ್ಟ್ರೀಯ ಉದ್ಯಾನವನವು ಸಸ್ಯ ಮತ್ತು ಪ್ರಾಣಿಗಳ ಅದ್ಭುತ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಸಮುದ್ರ ಮಟ್ಟದಿಂದ 3,505 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಕಣಿವೆಯು ಪ್ರತಿ ವರ್ಷ ಹಲವಾರು ಚಾರಣಿಗರುಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ, ಇಲ್ಲಿನ ನೈಸರ್ಗಿಕ ಸೌಂದರ್ಯ ನೋಡಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.