ದೇಶ

ಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದ ಸ್ವಿಗ್ಗಿ

ಹೊಸ ವರ್ಷಾಚರಣೆಯಂದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ (Swiggy) ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಮತ್ತು ರಾತ್ರಿ 10.25 ರ ವೇಳೆಗೆ ದೇಶದಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದ ಸ್ವಿಗ್ಗಿ
ಪ್ರಾತಿನಿಧಿಕ ಚಿತ್ರ
Published On :

ಹೈದರಾಬಾದ್: ಹೊಸ ವರ್ಷಾಚರಣೆಯಂದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ (Swiggy) ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಮತ್ತು ರಾತ್ರಿ 10.25 ರ ವೇಳೆಗೆ ದೇಶದಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈದರಾಬಾದಿ ಬಿರಿಯಾನಿಗೆ ಶೇ 75.4 ರಷ್ಟು ಆರ್ಡರ್‌ಗಳು ಬಂದಿವೆ. ನಂತರ ಲಕ್ನೋವಿ-14.2 ಮತ್ತು ಕೋಲ್ಕತ್ತಾ- ಶೇ 10.4 ರಷ್ಟು ಜನರು ಬೇಡಿಕೆಯಿಟ್ಟಿದ್ದಾರೆ.

'3.50 ಲಕ್ಷ ಆರ್ಡರ್‌ಗಳೊಂದಿಗೆ ಸ್ವಿಗ್ಗಿ ಮೂಲಕ ವಿತರಿಸಲಾದ ಅತ್ಯಧಿಕ ಐಟಂ ಬಿರಿಯಾನಿ' ಎಂದು ಸುದ್ದಿಸಂಸ್ಥೆ ಪಿಟಿಐಗೆ ಮೂಲಗಳು ತಿಳಿಸಿವೆ. ಶನಿವಾರ ಸಂಜೆ 7.20ರ ಹೊತ್ತಿಗೆ ಸ್ವಿಗ್ಗಿ 1.65 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸಿದೆ.

ಹೈದರಾಬಾದ್‌ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬವರ್ಚಿ, 2021ರ ಹೊಸ ವರ್ಷದ ಮುನ್ನಾದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿತ್ತು ಮತ್ತು 2022ರ ಡಿಸೆಂಬರ್ 31ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ಸವಿಯಾದ ಬಿರಿಯಾನಿಯನ್ನು ಸಿದ್ಧಪಡಿಸಿದೆ.

'ಡಾಮಿನೋಸ್ ಇಂಡಿಯಾ 61,287 ಪಿಜ್ಜಾಗಳನ್ನು ವಿತರಿಸಿದೆ. ಡೆಲಿವರಿ ಬಾಯ್‌ಗಳೊಂದಿಗೆ ಹೋಗುವ ಪ್ಯಾಕೆಟ್‌ಗಳ ಸಂಖ್ಯೆಯನ್ನು ಮಾತ್ರ ನಾವು ಊಹಿಸಬಹುದು' ಎಂದು ಸ್ವಿಗ್ಗಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.