ಮದುವೆಗೆ ಕೆಲ ನಿಮಿಷ ಇರುವಾಗಲೇ ವಿಷ ಸೇವಿಸಿದ ವಧು - ವರ: ಮದುಮಗ ಸಾವು, ಯುವತಿ ಗಂಭೀರ!
ವಿವಾಹ ಸಮಾರಂಭದಲ್ಲಿ ವಧು – ವರ ವಿಷ ಸೇವಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ. ಖುಷಿ ಖುಷಿಯಾಗಿರಬೇಕಿದ್ದ ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಇಂಧೋರ್: ವಿವಾಹ ಸಮಾರಂಭದಲ್ಲಿ ವಧು – ವರ ವಿಷ ಸೇವಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ. ಖುಷಿ ಖುಷಿಯಾಗಿರಬೇಕಿದ್ದ ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಖುಷಿ ಖುಷಿಯಾಗಿರಬೇಕಿದ್ದ ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ವರ ಸಾವನ್ನಪ್ಪಿದ್ದು, ವಧುವಿನ ಪರಿಸ್ಥಿತಿ ಚಿಂತಾಜನಕವಾಗಿದೆ. ವಿವಾಹದ ಸಂದರ್ಭದಲ್ಲಿ ವಾಗ್ವಾದ ನಡೆದಿತ್ತು.
ನಂತರ ಇಬ್ಬರೂ ವಿಷ ಸೇವಿಸಿದ್ದರು, ಬಳಿಕ 21 ವರ್ಷದ ವರ ವಿಷ ಸೇವಿಸಿ ಮೃತಪಟ್ಟಿದ್ದಾರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ವರ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ವಧು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ಮದುವೆಯಾಗಲು ಒತ್ತಡ ಹೇರುತ್ತಿದ್ದಳು. ನಮ್ಮ ಹುಡುಗನಿಗೆ ಇನ್ನು ಚಿಕ್ಕ ವಯಸ್ಸು ಆತ ಸ್ವಲ್ಪ ಕೆರಿಯರ್ ಬಿಲ್ಡ್ ಮಾಡಿಕೊಳ್ಳಬೇಕೆಂದು ಹೇಳಿ, ಎರಡು ವರ್ಷದ ಸಮಯ ಕೇಳಿದ್ದ. ಆದರೆ ಇದಕ್ಕೆ ಆಕೆ ಒಪ್ಪದೆ ಹುಡುಗನ ವಿರುದ್ಧ ದೂರು ನೀಡಿದ್ದಳು. ಇದೇ ಕಾರಣದಿಂದ ಮದುವೆ ಬೇಗ ಮಾಡಲು ತೀರ್ಮಾನ ಮಾಡಿದ್ದೆವು ಎಂದು ವರನ ಕುಟುಂಬ ಸದಸ್ಯರು ಹೇಳಿದ್ದಾರೆ.
ಇನ್ನೇನು ಹಾರ ಬದಲಾಯಿಸಿ ತಾಳಿ ಕಟ್ಟಬೇಕು ಎನ್ನುವಾಗಲೇ ವರ ಮದುವೆ ವೇದಿಕೆಯ ಬದಿಗೆ ಹೋಗಿದ್ದಾನೆ. ಆ ಬಳಿಕ ಮದುವೆ ವೇದಿಕೆಯಲ್ಲಿ ತಾನು ವಿಷ ಸೇವಿಸಿ ಬಂದಿದ್ದೇನೆ ಎಂದು ವರ ದೀಪಕ್ ಅಹಿರ್ವಾರ್ ವಧು ನಿಶಾಳಿಗೆ ಹೇಳಿದ್ದಾನೆ. ವರನ ಮಾತನ್ನು ಕೇಳಿ ವಧು ಕೂಡ ವಿಷ ಸೇವಿಸಿದ್ದಾಳೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


