ದೇಶ

ಆಗಸ್ಟ್ 1 ರಿಂದ ಸೇನೆಯಲ್ಲಿ ಬ್ರಿಗೇಡಿಯರ್‌ಗಳು, ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಏಕರೂಪ ಸಮವಸ್ತ್ರ

ಬ್ರಿಗೇಡಿಯರ್‌ಗಳು ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಗಳು ಆಗಸ್ಟ್ 1 ರಿಂದ ಏಕರೂಪ ಸಮವಸ್ತ್ರ ಹೊಂದಲು ಸೇನೆಯು ನಿರ್ಧರಿಸಿದೆ ಎಂದು ಸೇನಾ ಮೂಲಗಳು ಮಂಗಳವಾರ ತಿಳಿಸಿವೆ.

ಆಗಸ್ಟ್ 1 ರಿಂದ ಸೇನೆಯಲ್ಲಿ ಬ್ರಿಗೇಡಿಯರ್‌ಗಳು, ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಏಕರೂಪ ಸಮವಸ್ತ್ರ
ಸಾಂದರ್ಭಿಕ ಚಿತ್ರಗಳು
Published On :

ನವದೆಹಲಿ: ಬ್ರಿಗೇಡಿಯರ್‌ಗಳು ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಗಳು ಆಗಸ್ಟ್ 1 ರಿಂದ ಏಕರೂಪ ಸಮವಸ್ತ್ರ ಹೊಂದಲು ಸೇನೆಯು ನಿರ್ಧರಿಸಿದೆ ಎಂದು ಸೇನಾ ಮೂಲಗಳು ಮಂಗಳವಾರ ತಿಳಿಸಿವೆ. ಇತ್ತೀಚೆಗೆ ಮುಕ್ತಾಯಗೊಂಡ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ಮತ್ತು ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆಗಸ್ಟ್ 1 ರಿಂದ ಈ ಬದಲಾವಣೆಯಾಗಲಿದ್ದು, ಹಿರಿಯ ಅಧಿಕಾರಿಗಳ ಶಿರಸ್ತ್ರಾಣ, ಬ್ಯಾಡ್ಜ್‌ಗಳು, ಗಾರ್ಗೆಟ್ ಪ್ಯಾಚ್‌ಗಳು, ಬೆಲ್ಟ್‌ಗಳು ಮತ್ತು ಶೂಗಳ ಗುಣಮಟ್ಟವನ್ನೂ ಹೆಚ್ಚಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ಕರ್ನಲ್‌ಗಳು ಮತ್ತು ಕೆಳಗಿನ ಶ್ರೇಣಿಯ ಅಧಿಕಾರಿಗಳು ಧರಿಸುವ ಸಮವಸ್ತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸಾಮಾನ್ಯವಾಗಿ ಗುರುತಿಸುವಿಕೆಯನ್ನು ಉತ್ತೇಜಿಸಲು ಭಾರತೀಯ ಸೇನೆಯು ಬ್ರಿಗೇಡಿಯರ್ ಮತ್ತು ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಏಕರೂಪ ಸಮವಸ್ತ್ರ ಅಳವಡಿಸಿಕೊಳ್ಳಲು ನಿರ್ಧರಿಸಿದೆ ಎಂದು ಮೂಲವೊಂದು ತಿಳಿಸಿದೆ.

ಭಾರತೀಯ ಸೇನೆಯಲ್ಲಿ, ಬ್ರಿಗೇಡಿಯರ್‌ ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಗಳು, ಈಗಾಗಲೇ ಯೂನಿಟ್‌, ಬೆಟಾಲಿಯನ್‌ಗಳಿಗೆ ಕಮಾಂಡರ್ ಆಗಿರುವವರು ಹೆಚ್ಚಾಗಿ ಪ್ರಧಾನ ಕಛೇರಿ ಅಥವಾ ಸಂಸ್ಥೆಗಳಲ್ಲಿ ನಿಯೋಜಿಸಲ್ಪಡುತ್ತಾರೆ.  
ಎಲ್ಲಾ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಏಕರೂಪ ಸಮವಸ್ತ್ರ ಸಹಜವಾಗಿ ಗುರುತಿಸುವಿಕೆ ಖಾತ್ರಿಪಡಿಸುತ್ತದೆ ಮತ್ತು ಭಾರತೀಯ ಸೇನೆ ನೈತಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.