ಪ್ರಜಾಪ್ರಭುತ್ವದಲ್ಲಿ ಹಿಂಸೆ, ದ್ವೇಷಕ್ಕೆ ಆಸ್ಪದವಿಲ್ಲ: ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸಹಕರಿಸಲು ಜನತೆಗೆ RSS ಕರೆ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಜ್ಯದಲಿ ಶಾಂತಿಯ ಮರುಸ್ಥಾಪನೆಗಾಗಿ ಸಹಕರಿಸುವಂತೆ ಜನತೆ, ಆಡಳಿತಕ್ಕೆ ಕರೆ ನೀಡಿದೆ.

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಜ್ಯದಲಿ ಶಾಂತಿಯ ಮರುಸ್ಥಾಪನೆಗಾಗಿ ಸಹಕರಿಸುವಂತೆ ಜನತೆ, ಆಡಳಿತಕ್ಕೆ ಕರೆ ನೀಡಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕೆಂದು ವಿಪಕ್ಷಗಳು ಹಾಗೂ ಮಣಿಪುರದ ಜನತೆಯ ಪೈಕಿ ಒಂದು ವರ್ಗ ಆಗ್ರಹಿಸುತ್ತಿರುವುದರ ನಡುವೆ ಆರ್ ಎಸ್ಎಸ್ ನ ಮನವಿ ಬಂದಿದೆ.
ಮಣಿಪುರದಲ್ಲಿ ಕಳೆದ 45 ದಿನಗಳಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಲಾಯ್ ಹರೋಬಾ ಹಬ್ಬದ ಸಂದರ್ಭದಲ್ಲಿ ಮೇ.03 ರಂದು ಚುರಚಂದ್ಪುರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ಉಂಟಾದ ಹಿಂಸಾಚಾರ ಹಾಗೂ ಅನಿಶ್ಚಿತತೆ ಖಂಡನೀಯವಾಗಿದೆ ಎಂದು ಆರ್ ಎಸ್ಎಸ್ ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಟ್ವಿಟರ್ ನಲ್ಲಿ ಮೂಲಕ ನೀಡಿದ್ದಾರೆ.
ಶತಮಾನಗಳಿಂದ ಪರಸ್ಪರ ಸೌಹಾರ್ದತೆ ಹಾಗೂ ಸಹಕಾರದಿಂದ ಬದುಕುತ್ತಿರುವವರ ನಡುವೆ ಅಶಾಂತಿ ಮತ್ತು ಹಿಂಸೆಯ ಅಲೆ ಎದ್ದಿರುವುದು, ಇನ್ನೂ ತಹಬದಿಗೆ ಬಾರದೇ ಇರುವುದು ದುರದೃಷ್ಟಕರ ಎಂದು ಆರ್ ಎಸ್ಎಸ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


