ದೇಶ

ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ ಸಹಚರರಿಂದ ಹಣ, ಆಸ್ತಿ ದಾಖಲೆ ಪತ್ರಗಳು ಇಡಿ ಜಪ್ತಿ

ಹತ್ಯೆಗೀಡಾದ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್‌ ಅವರೊಂದಿಗೆ ನಂಟು ಹೊಂದಿದ್ದ ಕೆಲವು ಪ್ರಸಿದ್ಧ ಬಿಲ್ಡರ್‌ಗಳು, ಸಿಎಗಳು ಮತ್ತು ಇತರರ ವಿರುದ್ಧ ಇದೇ ವಾರ ದಾಳಿ ನಡೆಸಿದ ನಂತರ ಆಸ್ತಿಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ದಾಖಲೆಗಳು, 17.80 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ ಸಹಚರರಿಂದ ಹಣ, ಆಸ್ತಿ ದಾಖಲೆ ಪತ್ರಗಳು ಇಡಿ ಜಪ್ತಿ
ಹತ್ಯೆಗೀಡಾದ ಅತಿಕ್ ಅಹ್ಮದ್
Published On :

ನವದೆಹಲಿ: ಹತ್ಯೆಗೀಡಾದ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್‌ ಅವರೊಂದಿಗೆ ನಂಟು ಹೊಂದಿದ್ದ ಕೆಲವು  ಪ್ರಸಿದ್ಧ ಬಿಲ್ಡರ್‌ಗಳು, ಸಿಎಗಳು ಮತ್ತು ಇತರರ ವಿರುದ್ಧ ಇದೇ ವಾರ ದಾಳಿ ನಡೆಸಿದ ನಂತರ  ಆಸ್ತಿಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ದಾಖಲೆಗಳು, 17.80 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.

ಜೂನ್ 14-15 ರಂದು ಪ್ರಯಾಗರಾಜ್, ಲಕ್ನೋ ಮತ್ತು ದೆಹಲಿಯ 10 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು  ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಅತಿಕ್ ಅಹ್ಮದ್ ಜೊತೆ ನಂಟು ಹೊಂದಿದ್ದವರ ಮೇಲೆ ನಡೆಸಲಾದ ದಾಳಿ ವೇಳೆಯಲ್ಲಿ 17.80 ಲಕ್ಷ ನಗದು, ಆಸ್ತಿ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ದಾಖಲೆ ಪತ್ರಗಳು, ಕಂಪನಿಗಳ ಹಣಕಾಸು ಪತ್ರಗಳು, ಬ್ಯಾಂಕ್ ಖಾತೆ ವಿವರಗಳು, ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇವುಗಳ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವಿಶ್ಲೇಷಣೆ ನಡೆಯುತ್ತಿದೆ ಎಂದು ಇಡಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.