ಮೆಟ್ರೋದಲ್ಲಿ ಅಶ್ಲೀಲ ಕೃತ್ಯ, ಕಿಸ್ಸಿಂಗ್ ಆಯ್ತು, ಇದೀಗ ಇಬ್ಬರು ಯುವಕರಿಂದ ಅಪಾಯಕಾರಿ ಬಾಕ್ಸಿಂಗ್, ವಿಡಿಯೋ ವೈರಲ್!
ದೆಹಲಿ ಮೆಟ್ರೋದಲ್ಲಿ ಅಪಾಯಕಾರಿ ಬಾಕ್ಸಿಂಗ್ ನಡೆದಿದೆ. ರೈಲಿನಲ್ಲಿ ಪ್ರಯಾಣಿಕರು ಭಯಭೀತರಾಗುವ ರೀತಿಯಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿದೆ.

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಅಪಾಯಕಾರಿ ಬಾಕ್ಸಿಂಗ್ ನಡೆದಿದೆ. ರೈಲಿನಲ್ಲಿ ಪ್ರಯಾಣಿಕರು ಭಯಭೀತರಾಗುವ ರೀತಿಯಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದು ಈ ವಿಡಿಯೋ ವೈರಲ್ ಆಗಿದೆ.
ದೆಹಲಿ ಮೆಟ್ರೋ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ವೈರಲ್ ಮಾಡಲು ಜನರಿಗೆ ನೆಚ್ಚಿನ ಸ್ಥಳವಾಗಿದೆ. ದೆಹಲಿ ಮೆಟ್ರೋದ ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಹೊಸ ವೀಡಿಯೋವೊಂದು ವೈರಲ್ ಆಗಿದ್ದು, ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ.
ದೆಹಲಿ ಮೆಟ್ರೋದಲ್ಲಿ ಜಗಳಗಳ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದ್ದರೂ, ಈ ಘಟನೆಯು ವಿಶೇಷವಾದದ್ದು. ಇದರಲ್ಲಿ ಇಬ್ಬರು ಪ್ರಯಾಣಿಕರು ನುರಿತ ಬಾಕ್ಸರ್ ಗಳಂತೆ ಪರಸ್ಪರ ಗುದ್ದಾಡುತ್ತಿದ್ದಾರೆ. ಇವರಿಬ್ಬರೂ ಎಲ್ಲೋ ಬಾಕ್ಸಿಂಗ್ ತರಬೇತಿ ಪಡೆದಿದ್ದಾರಂತೆ.
ರೈಲು ಮುಂದೆ ಸಾಗುತ್ತಿದ್ದಂತೆ ಬಡಿದಾಟ ನಡೆಸಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ರೈಲಿನಲ್ಲಿರುವ ಇಬ್ಬರು ಯುವಕರು ವೇಗವಾಗಿ ಪರಸ್ಪರ ಗುದ್ದಾಡಲು ಪ್ರಾರಂಭಿಸುತ್ತಾರೆ. ಈ ಅವ್ಯವಸ್ಥೆಯ ಪರಿಸ್ಥಿತಿಯನ್ನು ಇತರ ಪ್ರಯಾಣಿಕರು ಆಘಾತದಿಂದ ನೋಡುತ್ತಿದ್ದಾರೆ. ಕೆಲವರು ಧೈರ್ಯ ಮಾಡಿ ಇದನ್ನು ತಡೆಯಲು ಮುಂದಾಗುತ್ತಾರೆ. ಆದರೆ ಇವರ ಕೋಪವನ್ನು ನೋಡಿ, ಅವರು ಸುಮ್ಮನಾಗುತ್ತಾರೆ ವೀಡಿಯೊ ಮುಗಿಯುವವರೆಗೂ ಯಾರೂ ಮಧ್ಯಪ್ರವೇಶಿಸುವುದಿಲ್ಲ.
ಇದನ್ನೂ ಓದಿ: ಅಶ್ಲೀಲ ಕೃತ್ಯ, ಅರೆನಗ್ನ ಉಡುಪು ಆಯ್ತು; ಇದೀಗ ಮೆಟ್ರೋದಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು, ವೀಡಿಯೊ ವೈರಲ್!
ದೆಹಲಿ ಮೆಟ್ರೋದಲ್ಲಿ ನಡೆದ ಹೊಡೆದಾಟ ಇದೇ ಮೊದಲಲ್ಲ. ದೆಹಲಿ ಮೆಟ್ರೋ ವಾಗ್ವಾದಗಳಿಂದ ಹಿಡಿದು ಜಗಳಗಳವರೆಗೆ ಅನೇಕ ಘಟನೆಗಳನ್ನು ಕಂಡಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮೆಟ್ರೋ ಸುರಕ್ಷತೆಯ ಬಗ್ಗೆ ಜನ ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


