ದಿಢೀರ್ ನಿರ್ಬಂಧ: ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಂದ ಭಾರತಕ್ಕೆ ಲ್ಯಾಪ್ ಟಾಪ್ ಆಮದು ಸ್ಥಗಿತ!
ಪರವಾನಗಿ ಇಲ್ಲದೇ ಒಳಬರುವ ಸಾಗಣೆಗಳ ಮೇಲೆ ದಿಢೀರ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ ಹಾಗೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಹೆಚ್ ಪಿ ಸಂಸ್ಥೆಗಳು ಲ್ಯಾಪ್ ಟಾಪ್ ಗಳ ಹೊಸ ಆಮದನ್ನು ಸ್ಥಗಿತಗೊಳಿಸಿವೆ.

ನವದೆಹಲಿ: ಪರವಾನಗಿ ಇಲ್ಲದೇ ಒಳಬರುವ ಸಾಗಣೆಗಳ ಮೇಲೆ ದಿಢೀರ್ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ ಹಾಗೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಹೆಚ್ ಪಿ ಸಂಸ್ಥೆಗಳು ಲ್ಯಾಪ್ ಟಾಪ್ ಗಳ ಹೊಸ ಆಮದನ್ನು ಸ್ಥಗಿತಗೊಳಿಸಿವೆ.
ನಿಯಂತ್ರಕರು ಗುರುವಾರ ಸಣ್ಣ ಟ್ಯಾಬ್ ನಿಂದ ಹಿಡಿದು ಎಲ್ಲವನ್ನೂ ಒಳಗೊಂಡಿರುವ ಪಿಸಿ ಗಳ ಆಮದು ಮಾಡಿಕೊಳ್ಳುವುದಕ್ಕೆ ಪರವಾನಗಿಯನ್ನು ಕಡ್ಡಾಯಗೊಳಿಸಿದ್ದರು. ಪರಿಣಾಮ ಲ್ಯಾಪ್ ಟಾಪ್ ತಯಾರಕರು ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದೆ.
ಆಮದು ಕಡಿಮೆ ಮಾಡಿಕೊಂಡು ಸ್ಥಳೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಮದು ಪರವಾನಗಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಹಾಗೂ ಶಾಲಾ ಕಾಲೇಜುಗಳು ಪುನಾರಂಭಗೊಂಡಿರುವ ಈಗಿನ ಸಂದರ್ಭದಲ್ಲಿ
ಟೆಕ್ ಸಂಸ್ಥೆಗಳು ಈಗ ಪರವಾನಗಿ ಪಡೆಯುವುದಕ್ಕೆ ತ್ವರಿತ ಪ್ರಯತ್ನ ನಡೆಸುತ್ತಿವೆ. ಆದರೆ ಪರವಾನಗಿ ಪಡೆಯುದಕ್ಕೆ ಎಷ್ಟು ಸಮಯವಾಗುತ್ತದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಈಗ ಏಕಾ ಏಕಿ ಆಮದು ಸ್ಥಗಿತಗೊಂಡಿದ್ದರಿಂದ ನಿರ್ಣಾಯಕ ಸಮಯದಲ್ಲಿ ವಿದೇಶಿ PC ಗಳಲ್ಲಿ ಬಹು-ಶತಕೋಟಿ ಡಾಲರ್ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


