ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 100ಕ್ಕೆ 100 ಅಂಕ ಪಡೆದ 24 ಅಭ್ಯರ್ಥಿಗಳು
ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ಪ್ರಕಾರ, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್‌ನಲ್ಲಿ ಕನಿಷ್ಠ 24 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ ಮತ್ತು ಅಕ್ರಮ ವಿಧಾನಗಳನ್ನು ಬಳಸಿದ್ದಾರೆಂದು...

ನವದೆಹಲಿ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ(ಎನ್‌ಟಿಎ) ಪ್ರಕಾರ, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್‌ನಲ್ಲಿ ಕನಿಷ್ಠ 24 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ ಮತ್ತು ಅಕ್ರಮ ವಿಧಾನಗಳನ್ನು ಬಳಸಿದ್ದಾರೆಂದು ಐದು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಜೆಇಇ- ಮುಖ್ಯ ಪರೀಕ್ಷೆಯ ಎರಡು ಸೆಷನ್ ಗಳ ಫಲಿತಾಂಶ ಸೋಮವಾರ ಪ್ರಕಟಿಸಲಾಗಿದೆ. ಶೇ. 100 ರಷ್ಟು ಅಂಕ ಗಳಿಸಿದ ಅಭ್ಯರ್ಥಿಗಳಲ್ಲಿ ಆಂಧ್ರ ಪ್ರದೇಶ (5) ಮತ್ತು ತೆಲಂಗಾಣ(5) ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ(4) ನಂತರದ ಸ್ಥಾನದಲ್ಲಿದೆ.
ಹರಿಯಾಣ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ, ಪಂಜಾಬ್, ಕೇರಳ, ಕರ್ನಾಟಕ, ಜಾರ್ಖಂಡ್‌ನಿಂದ ತಲಾ ಒಬ್ಬ ಅಭ್ಯರ್ಥಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಪ್ರಸಕ್ತ ಸಾಲಿನ ಅಂದರೆ, 2022ನೇ ಸಾಲಿನ ಜೆಇಇ ಮೇನ್ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಸಂಸ್ಥೆಯ ಅಧಿಕೃತ ವೆಬ್ಸೈಟ್ jeemain.nta.nic.in ನಲ್ಲಿ ಅಭ್ಯರ್ಥಿಗಳು ಫಲಿತಾಂಶ ನೋಡಬಹುದಾಗಿದೆ. ಕಳೆದ ವಾರ ಆಗಸ್ಟ್ 3 ರಂದು ಜೆಇಇ ಮುಖ್ಯ ಪರೀಕ್ಷೆಯ ಕೀ ಆನ್ಸರ್ ಅನ್ನು ಬಿಡುಗಡೆ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


