ದೇಶ

ಚಾಕಲೇಟು ಬಿಸ್ಕತ್ತು ಡಬ್ಬದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನ: ಆಂಧ್ರದಲ್ಲಿ ಸೌದಿ ವಿಮಾನ ಪ್ರಯಾಣಿಕ ಸೆರೆ

ಆರೋಪಿ ವಿಮಾನದಿಂದ ಇಳಿದು ಲಗೇಜನ್ನು ಪಡೆದು ಹೊರ ಹೋಗುವುದರಲ್ಲಿದ್ದ. ಅಷ್ಟರಲ್ಲಿ ಆರೋಪಿ ಚಿನ್ನ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಕಸ್ಟಮ್ಸ್ ಅಧಿಕಾರಿಗಳಿಗೆ ಲಭ್ಯವಾಗಿತ್ತು.

ಚಾಕಲೇಟು ಬಿಸ್ಕತ್ತು ಡಬ್ಬದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನ: ಆಂಧ್ರದಲ್ಲಿ ಸೌದಿ ವಿಮಾನ ಪ್ರಯಾಣಿಕ ಸೆರೆ
ವಶಪಡಿಸಿಕೊಳ್ಳಲಾದ ಚಿನ್ನ
Published On :

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಿಸ್ಕತ್ತು, ಚಾಕಲೇಟು ಡಬ್ಬಗಳಲ್ಲಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಿದ್ದಾರೆ. 

ಬಂಧಿತ ವ್ಯಕ್ತಿ ಸೌದಿಯ ರಿಯಾದ್ ನಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ. ಒಟ್ಟು 768.66 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು ಅದರ ಒಟ್ಟು ಮೌಲ್ಯ 34.24 ಲಕ್ಷ ರೂ. 

ಆರೋಪಿ ವಿಮಾನದಿಂದ ಇಳಿದು ಲಗೇಜನ್ನು ಪಡೆದು ಹೊರ ಹೋಗುವುದರಲ್ಲಿದ್ದ. ಅಷ್ಟರಲ್ಲಿ ಆರೋಪಿ ಚಿನ್ನ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಕಸ್ಟಮ್ಸ್ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಒಡನೆಯೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರೋಪಿಗಾಗಿ ಹುಡುಕಾಟ ಶುರುಮಾಡಿದ್ದರು. ಆತನನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಿದಾಗ ಆತನ ಲಗೇಜಿನಲ್ಲಿ ಚಿನ್ನ ಇರುವುದು ಪತ್ತೆಯಾಗಿದ್ದರಿಂದ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

Related Article

ಚಿನ್ನ ಕಳ್ಳಸಾಗಣೆ ಮಾಡುವವರಿಗೆ ಸಹಕಾರ: ವಿಮಾನ ನಿಲ್ದಾಣ ಸಿಬ್ಬಂದಿ ಬಂಧನ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ, ಸ್ಪೀಕರ್ ಪಾತ್ರ: ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಹೇಳಿದ್ದೇನು?

ಮಾನವ ಕಳ್ಳಸಾಗಣೆ: ಯಲಹಂಕ ರೈಲ್ವೇ ನಿಲ್ದಾಣದಲ್ಲಿ 3 ಮಹಿಳೆಯರ ರಕ್ಷಣೆ

ಜಮ್ಮು-ಕಾಶ್ಮೀರ: ಬಿಎಸ್ಎಫ್ ಗುಂಡೇಟಿಗೆ ಮಾದಕ ವಸ್ತು ಕಳ್ಳಸಾಗಣೆದಾರ ಬಲಿ; 135 ಕೋಟಿ ರೂ. ಬೆಲೆಯ ಹೆರಾಯಿನ್ ವಶ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.