ಆರೆಸ್ಸೆಸ್ ಪತ್ರಿಕೆಯಲ್ಲಿ ಇನ್ ಫೋಸಿಸ್ ವಿರುದ್ಧ ಬರಹ: ವಿವಾದದಿಂದ ಅಂತರ ಕಾಯ್ದುಕೊಂಡ ಕೇಸರಿ ಸಂಘಟನೆ
ಲೇಖನದಲ್ಲಿ ಬೆಂಗಳೂರು ಮೂಲದ ಇನ್ ಫೋಸಿಸ್ ಸಂಸ್ಥೆ ಮತ್ತು ಅದರ ಸ್ಥಾಪಕ ನಾರಾಯಣ ಮೂರ್ತಿ ಅವರ ಗೌರವಕ್ಕೆ ಧಕ್ಕೆ ತರುವಂಥ ರೀತಿಯಲ್ಲಿ ಬರೆಯಲಾಗಿತ್ತು.

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತದ ಸಾಫ್ಟ್ ವೇರ್ ಉದ್ಯಮದ ದಿಗ್ಗಜ ಸಂಸ್ಥೆ ಬೆಂಗಳೂರು ಮೂಲದ ಇನ್ಫೋಸಿಸ್ ವಿರುದ್ಧ ಪಾಂಚಜನ್ಯ ಪತ್ರಿಕೆಯಲ್ಲಿ ಬಂದ ಬರಹಕ್ಕೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದಿದೆ.
ಇದನ್ನೂ ಓದಿ: ಬಿಜೆಪಿಗೂ ತಾಲಿಬಾನಿಗೂ ಬಹಳ ನಂಟು; ಕಂದಾಹಾರ್ ಗೆ ವಿಮಾನ ಕಳುಹಿಸಿ ಉಗ್ರರಿಗೆ ರಾಜಮಾರ್ಯಾದೆ ಬೀಳ್ಕೊಡುಗೆ: ಕಾಂಗ್ರೆಸ್ ಕಿಡಿ
ಕೇಸರಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ 'ಪಾಂಚಜನ್ಯ' ಪತ್ರಿಕೆಯಲ್ಲಿ ಇನ್ ಫೋಸಿಸ್ ವಿರುದ್ಧ ಬರಹವೊಂದು ಪ್ರಕಟಗೊಂಡಿತ್ತು. ಅದರಲ್ಲಿ ಇನ್ಫೋಸಿಸ್ ಸಂಸ್ಥೆ ಮತ್ತು ಅದರ ಸ್ಥಾಪಕ ನಾರಾಯಣ ಮೂರ್ತಿ ಅವರ ಗೌರವಕ್ಕೆ ಧಕ್ಕೆ ತರುವಂಥ ರೀತಿಯಲ್ಲಿ ಬರೆಯಲಾಗಿತ್ತು.
ಇನ್ ಫೋಸಿಸ್ ಸಂಸ್ಥೆ ದೇಶ ವಿದ್ರೋಹಿ ಶಕ್ತಿಗಳೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಲಾಗಿತ್ತು. ಅದರಿಂದಾಗಿಯೇ ಸರ್ಕಾರದ ಆದಾಯ ತೆರಿಗೆ ಪಾವತಿ ಜಾಲತಾಣ ಸಮಸ್ಯೆಗೆ ಸಿಲುಕಿದೆ ಎಂದು ಹೇಳಲಾಗಿತ್ತು. ಸರ್ಕಾರದ ಇನ್ಕಂ ಟ್ಯಾಕ್ಸ್ ವೆಬ್ ಸೈಟನ್ನು ಇನ್ ಫೋಸಿಸ್ ಅಭಿವೃದ್ಧಿ ಪಡಿಸಿತ್ತು. ಅದರ ನಿರ್ವಹಣೆಯೂ ಅದರದ್ದೇ ಹೊಣೆ. ಈ ಹಿಂದೆ ಜಾಲತಾಣದಲ್ಲಿ ಬಳಕೆದಾರರು ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಅದನ್ನು ಉದಾಹರಿಸಿ ಲೇಖನದಲ್ಲಿ ಇನ್ ಫೋಸಿಸ್ ವಿರುದ್ಧ ಕೆಟ್ಟದ್ದಾಗಿ ಬಿಂಬಿಸಲಾಗಿತ್ತು.
ಪಾಂಚಜನ್ಯ ಪತ್ರಿಕೆ ಆರೆಸ್ಸೆಸ್ ಸಂಘಟನೆಯ ಮುಖವಾಣಿಯಲ್ಲ ಎಂದು ಸಂಘಟನೆಯ ಅಖಿಲ ಭಾರತ ಪ್ರಚಾರ್ ಪ್ರಮುಖ್ ಸುನಿಲ್ ಅಂಬೆಕರ್ ಹೇಳಿದ್ದಾರೆ. ಅಲ್ಲದೆ ಲೇಖನದಲ್ಲಿರುವ ಅಭಿಪ್ರಾಯ ಕೇವಲ ಬರಹಗಾರರದ್ದೇ ಹೊರತು ಪತ್ರಿಕೆಯದ್ದಲ್ಲ ಎಂದೂ ಹೇಳಿ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ.
Related Article
ಮೋಹನ್ ಭಾಗವತ್ ರ 'ಡಿಎನ್‌ಎ' ಹೇಳಿಕೆ ಒಪ್ಪುವುದಾದರೆ ಮತಾಂತರ ವಿರೋಧಿ ಕಾನೂನು ಯಾಕೆ ಬೇಕು?: ದಿಗ್ವಿಜಯ್ ಸಿಂಗ್
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಕೊರೋನಾ
ಭಾರತೀಯ ಮುಸ್ಲಿಮರು ಪ್ರಪಂಚದಲ್ಲಿಯೇ ಅತ್ಯಂತ ತೃಪ್ತರು: ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


