ದೇಶ

6 ತಿಂಗಳ ಅಂತರದಲ್ಲೂ ಕೋವಿಶೀಲ್ಡ್ 2ನೇ ಡೋಸ್ ಡೋಸ್ ಪರಿಣಾಮಕಾರಿ, ಚಿಂತೆ ಬೇಡ: ತಜ್ಞರು

ನಾಲ್ಕರಿಂದ ಆರು ವಾರಗಳು, ಆರರಿಂದ ಎಂಟು ಅಥವಾ ಎಂಟರಿಂದ 12? ಹೀಗೆ ಭಾರತದಲ್ಲಿ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಆದರೆ ಹಲವಾರು ತಜ್ಞರು ಅಂತರದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ ಎಂದಿದ್ದಾರೆ.

6 ತಿಂಗಳ ಅಂತರದಲ್ಲೂ ಕೋವಿಶೀಲ್ಡ್ 2ನೇ ಡೋಸ್ ಡೋಸ್ ಪರಿಣಾಮಕಾರಿ, ಚಿಂತೆ ಬೇಡ: ತಜ್ಞರು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ನಾಲ್ಕರಿಂದ ಆರು ವಾರಗಳು, ಆರರಿಂದ ಎಂಟು ಅಥವಾ ಎಂಟರಿಂದ 12? ಹೀಗೆ ಭಾರತದಲ್ಲಿ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಆದರೆ ಹಲವಾರು ತಜ್ಞರು ಅಂತರದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಲಸಿಕೆ 6 ತಿಂಗಳವರೆಗೆ ಪರಿಣಾಮಕಾರಿಯಾಗಿದ್ದು, ಆರು ತಿಂಗಳಮೊದಲು ಯಾವುದೇ ಸಮಯದಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳಬಹುದು ಎಂದಿದ್ದಾರೆ.

ಕಳೆದ ವಾರ ಕೇಂದ್ರ ಸರ್ಕಾರ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ (ಎನ್‌ಟಿಎಜಿಐ) ಶಿಫಾರಸ್ಸಿನ ಮೇರೆಗೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಿದೆ. ಈ ಮುಂಚೆ ಗರಿಷ್ಠ ಎಂಟು ವಾರ ಇತ್ತು.

ಈ ಮಧ್ಯೆ ಬ್ರಿಟನ್, ಭಾರತದ ಬಿ .1.617 ರೂಪಾಂತರದ ಹರಡುವಿಕೆಯ ತಡೆಯುವ ದೃಷ್ಟಿಯಿಂದ ಲಸಿಕೆಯ ಅಂತರವನ್ನು 12 ವಾರಗಳಿಂದ ಎಂಟು ವಾರಗಳಿಗೆ ಕಡಿತಗೊಳಿಸಿತು.

ಇನ್ನು ಲಸಿಕೆಗಳು ಕೊರತೆಯಿರುವುದರಿಂದ ಮತ್ತು ಅನೇಕ ರಾಜ್ಯಗಳಲ್ಲಿ ಸರಬರಾಜಿನಲ್ಲಿ ತೀವ್ರ ಕೊರತೆಯಿರುವ ಕಾರಣ ಭಾರತವು ಅಂತರವನ್ನು ಹೆಚ್ಚಿಸಿದೆ ಎಂಬ ಆತಂಕಗಳಿಗೆ ಪ್ರತಿಕ್ರಿಯಿಸಿದ ರೋಗ ನಿರೋಧಕ ತಜ್ಞ ರಾತ್, ಲಸಿಕೆ ಡೋಸಿಂಗ್ "ಸಾಕಷ್ಟು ಹೊಂದಿಕೊಳ್ಳುವ ಮತ್ತು ಕ್ಷಮಿಸುವ" ಆಗಿದೆ ಎಂದು ಹೇಳಿದ್ದಾರೆ.

ನಾಲ್ಕು ವಾರಗಳು ಕಳೆದ ನಂತರ, ಮುಂದಿನ ಡೋಸ್ ಅನ್ನು ಆರು ತಿಂಗಳವರೆಗೆ ಯಾವಾಗಬೇಕಾದರೂ ತೆಗೆದುಕೊಳ್ಳಬಹುದು.

ವಿಜ್ಞಾನಿಗಳ ಪ್ರಕಾರ, ಲಸಿಕೆ ಡೋಸ್ ತೆಗೆದುಕೊಂಡಾಗ ಅವುಗಳು ಸುರಕ್ಷಿತವಾಗಿರುತ್ತವೆ. ಆದರೆ ಹಿಂದಿನ ಡೋಸ್‌ನ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನೀಡಿದರೆ ಯಾವುದೇ ದೊಡ್ಡ "ವರ್ಧಕವನ್ನು" ಒದಗಿಸುವುದಿಲ್ಲ ಎಂದಿದ್ದಾರೆ.

"ಆದ್ದರಿಂದ ಮೊದಲ ಡೋಸ್‌ ಲಸಿಕೆ ಪಡೆದ ಕನಿಷ್ಠ ನಾಲ್ಕು ವಾರಗಳು ಕಳೆದ ನಂತರ ಆರು ತಿಂಗಳವರೆಗೆ ಎರಡನೇ ಡೋಸ್ ಅನ್ನು ತೆಗೆದುಕೊಳ್ಳಬಹುದು" ಎಂದು ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ (ಎನ್‌ಐಐ) ಯ ರಾತ್ ಅವರು ಪಿಟಿಐಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.