ದೇಶ

ಯುವತಿಯಿಂದ ಸುಳ್ಳು ಗ್ಯಾಂಗ್ ರೇಪ್ ದೂರು: ಕಮೀಷನರ್ ಸೇರಿದಂತೆ 1000 ಪೊಲೀಸ್ ಸಿಬ್ಬಂದಿ ಹೈರಾಣು

ನಗರ ಪೊಲೀಸ್ ಕಮೀಷನರ್ ಕೂಡಾ ತಮ್ಮ ನಗರದ ಗೌರವಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಬೆದರಿ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಪೊಲೀಸರು 50ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದರು. 250 ಸಿಸಿಟಿವಿ ವಿಡಿಯೊ ಪರಿಶೀಲಿಸಿದ್ದರು.

ಯುವತಿಯಿಂದ ಸುಳ್ಳು ಗ್ಯಾಂಗ್ ರೇಪ್ ದೂರು: ಕಮೀಷನರ್ ಸೇರಿದಂತೆ 1000 ಪೊಲೀಸ್ ಸಿಬ್ಬಂದಿ ಹೈರಾಣು
ಸಾಂದರ್ಭಿಕ ಚಿತ್ರ
Published On :

ನಾಗ್ಪುರ: 19 ವರ್ಷದ ಯುವತಿ ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ದಾಖಲಿಸಿದ್ದ ದೂರು ಸುಳ್ಳು ಎಂದು ಸಾಬೀತಾಗಿದೆ. ತನ್ನ ಬಾಯ್ ಫ್ರೆಂಡನ್ನು ಮದುವೆಯಾಗುವ ಉದ್ದೇಶದಿಂದ ಆಕೆ ಸುಳ್ಳು ದೂರನ್ನು ದಾಖಲಿಸಿದ್ದಾಗಿ ತಿಳಿದುಬಂದಿದೆ. 

ಸೋಮವಾರ ಯುವತಿ ನಾಗ್ಪುರ ಠಾಣೆಗೆ ಬಂದು ಗ್ಯಾಂಗ್ ರೇಪ್ ದೂರು ದಾಖಲಿಸಿದ್ದಳು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಸುಳಿವಿನ ಆಧಾರದಲ್ಲಿ ನಗರವಿಡೀ ಆರೋಪಿಗಳಿಗಾಗಿ ಜಾಲಾಡಿದ್ದರು. 

ನಗರ ಪೊಲೀಸ್ ಕಮೀಷನರ್ ಕೂಡಾ ತಮ್ಮ ನಗರದ ಗೌರವಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಬೆದರಿ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಅದರಂತೆ ಸುಮಾರು 1000 ಪೊಲೀಸ್ ಸಿಬ್ಬಂದಿ ಅರೋಪಿಗಳ ಶೋದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸುಮಾರು 250 ಸಿಸಿ ಟಿವಿ ವಿಡಿಯೋಗಳನ್ನು ತರಿಸಿಕೊಂಡು ಕೂಲಂಕಷ ಪರಿಶೀಲನೆಯನ್ನೂ ಪೊಲೀಸರು ನಡೆಸಿದ್ದರು. ಎಷ್ಟೆಲ್ಲಾ ಕಸರತ್ತು ಮಾಡಿದ ನಂತರವೂ ಆರೋಪಿಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಕ್ಕಿರಲಿಲ್ಲ. ಆಗ ಅನುಮಾನಗೊಂಡ ಪೊಲೀಸರು ದೂರು ನೀಡಿದ ಯುವತಿಯನ್ನು ಕರೆಸಿ ವಿಚಾರನೆ ನಡೆಸಿದಾಗ ಆಕೆ ಸತ್ಯ ಬಾಯಿಬಿಟ್ಟಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.