ಸ್ನಾನ ಮಾಡಿಸುವ ವೇಳೆ 2 ತಿಂಗಳ ಹಸುಗೂಸು ಬಕೆಟ್ ಒಳಗೆ ಬಿದ್ದು ದಾರುಣ ಮೃತ್ಯು
ಎರಡು ಮಕ್ಕಳ ತಾಯಿ ಪ್ರೇಮಾ ಬಟ್ಟೆ ಒಗೆಯಲೆಂದು ಮನೆಯಿಂದ ಹೊರಕ್ಕೋಗಿದ್ದರು. ಈ ಸಂದರ್ಭದಲ್ಲಿ ಅವರ ಎರಡೂವರೆ ವರ್ಷದ ಮಗಳು ಮಗುವನ್ನು ಆಟವಾಡಿಸುತ್ತಿದ್ದಳು.

ಕೊಯಮತ್ತೂರು: ಎರಡು ತಿಂಗಳ ಹಸುಗೂಸೊಂದು ಸ್ನಾನ ಮಾಡಿಸುವ ವೇಳೆ ಬಕೆಟೊಳಕ್ಕೆ ಬಿದ್ದು ಮೃತ ಪಟ್ಟಿರುವ ದಾರುಣ ಘಟನೆ ಕೊಯಮತ್ತೂರಿನ ಅಂಬಲ್ ನಗರದಲ್ಲಿ ನಡೆದಿದೆ. ಮಗುವಿನ ಎರಡೂವರೆ ವರ್ಷ ಪ್ರಾಯದ ಸಹೋದರಿ ಸ್ನಾನ ಮಾಡಿಸುವ ಸಂದರ್ಭ ಈ ಘಟನೆ ನಡೆದಿದೆ.
ಎರಡು ಮಕ್ಕಳ ತಾಯಿ ಪ್ರೇಮಾ ಬಟ್ಟೆ ಒಗೆಯಲೆಂದು ಮನೆಯಿಂದ ಹೊರಕ್ಕೋಗಿದ್ದರು. ಈ ಸಂದರ್ಭದಲ್ಲಿ ಅವರ ಎರಡೂವರೆ ವರ್ಷದ ಮಗಳು ಮಗುವನ್ನು ಆಟವಾಡಿಸುತ್ತಿದ್ದಳು. ಆಗ ಅಮ್ಮನಿಗೆ ತಿಳಿಯದಂತೆಯೇ ಹಸುಗೂಸನ್ನು ಎತ್ತಿಕೊಂಡು ಸ್ನಾನ ಮಾಡಿಸಲು ಹೋಗಿದ್ದಳು.
ಪ್ರತಿದಿನ ಮಗುವಿಗೆ ಅಮ್ಮ ಸ್ನಾನ ಮಾಡಿಸುವುದನ್ನು ನೋಡುತ್ತಿದ್ದ ಮಗಳು ತಾನೂ ಮಗುವಿಗೆ ಸ್ನಾನ ಮಾಡಿಸುವುದಾಗಿ ಕೇಳುತ್ತಿತ್ತು. ಆದರೆ ಪ್ರೇಮಾ ನಿರಾಕರಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ಅಮ್ಮ ಇಲ್ಲದ ವೇಳೆ ಮಗುವನ್ನು ಕೈಗೆತ್ತಿಕೊಂಡು ತಾನೇ ಸ್ನಾನ ಮಾಡಿಸಲು ತೆರಳಿದ್ದಳು ಎಂದು ತಾಯಿ ತಿಳಿಸಿದ್ದಾರೆ.
ತಾಯಿ ಪ್ರೇಮಾ ಮನೆಯೊಳಕ್ಕೆ ಬರುವಷ್ಟರಲ್ಲಿ ಮಗಳು ಬಕೆಟ್ ಒಳಗಿಂದ ಮಗುವನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದಳು. ಒಡನೆಯೇ ಧಾವಿಸಿ ಪ್ರೇಮಾ ಮಗುವನ್ನು ಎತ್ತಿಕೊಂಡು ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಿ ಆಸ್ಪತ್ರೆಗೆ ಬಂದಿದ್ದರು. ಆದರೆ ಅಷ್ಟರಲಾಗಲೇ ಮಗು ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


