ಹಸುಗೂಸು

ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದ ಮಹಿಳೆ ಬಂಧನ
ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಭಾವಿಸಿದ ತಾಯಿಯೊಬ್ಬರು ತನ್ನ ಒಂದೂವರೆ ವರ್ಷದ ಮಗುವನ್ನು ನದಿಗೆ ಎಸೆದ ಸಂಬಂಧ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ: ಆಸ್ಪತ್ರೆಯಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ ಹಸುಗೂಸನ್ನು ಎತ್ತೊಯ್ದು ಕೊಂದ ಬೀದಿ ನಾಯಿ
ಜೈಪುರದ ಆಸ್ಪತ್ರೆಯೊಂದರಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ ತಿಂಗಳ ಮಗುವನ್ನು ಬೀದಿನಾಯಿಯೊಂದು ಎತ್ತೊಯ್ದು ಕಚ್ಚಿ ಕೊಂದು ಹಾಕಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿಡ್ನ್ಯಾಪ್ ಆಗಿದ್ದ 5 ದಿನದ ಹಸುಗೂಸು ಮರಳಿ ತಾಯಿ ಮಡಿಲಿಗೆ: ಆಂಧ್ರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
ಹುಟ್ಟಿ 5 ದಿನಗಳಾಗಿದ್ದ ಮಗುವಿನ ಕಿಡ್ನ್ಯಾಪ್ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗುವನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ನಾನ ಮಾಡಿಸುವ ವೇಳೆ 2 ತಿಂಗಳ ಹಸುಗೂಸು ಬಕೆಟ್ ಒಳಗೆ ಬಿದ್ದು ದಾರುಣ ಮೃತ್ಯು
ಎರಡು ಮಕ್ಕಳ ತಾಯಿ ಪ್ರೇಮಾ ಬಟ್ಟೆ ಒಗೆಯಲೆಂದು ಮನೆಯಿಂದ ಹೊರಕ್ಕೋಗಿದ್ದರು. ಈ ಸಂದರ್ಭದಲ್ಲಿ ಅವರ ಎರಡೂವರೆ ವರ್ಷದ ಮಗಳು ಮಗುವನ್ನು ಆಟವಾಡಿಸುತ್ತಿದ್ದಳು.

ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಹಸುಗೂಸು ಅಪಹರಿಸಿ ಮಾರಾಟ: ಇಬ್ಬರ ಬಂಧನ
ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟಿನಿಂದ ಮಗು ಅಪಹರಿಸಿ ಮಾರಾಟ ಮಾಡಿದ್ದ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ನಲ್ಲಿ ಹಸುಗೂಸುಗಳು ಅದಲು ಬದಲು ಆರೋಪ; ಡಿ ಎನ್ ಎ ಪರೀಕ್ಷೆಗೆ ಆದೇಶ
ಹೈದರಾಬಾದ್ ಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡುಮಗುವಿಗಾಗಿ ಎರಡು ಕುಟುಂಬಗಳು ಹಕ್ಕುಸಾಧಿಸಿವೆ. ನಮ್ಮ ಗಂಡು ಮಗುವನ್ನು ಹೆಣ್ಣು ಮಗುವೊಂದರ ಜೊತೆಗೆ ಅದಲು ಬದಲಿ ಮಾಡಿದ್ದಾರೆ

ಉತ್ತರ ಪ್ರದೇಶದಲ್ಲಿ 28 ದಿನದ ಹಸುಗೂಸಿನ ಮೇಲೂ ಅತ್ಯಾಚಾರ
28 ದಿನದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಬುಲಂದ್ಶಹಾರ್ ನ ಅಸಿಫ್ ನಗ್ಲಾ ಹಳ್ಳಿಯಲ್ಲಿ ನಡೆದಿದೆ.

