ದೇಶ

ಯಾವುದೇ ಭಾರತೀಯರು ಎಲ್ಲಿಯಾದರೂ ತೊಂದರೆಯಲ್ಲಿದ್ದರೆ, ದೇಶ ಯಾವಾಗಲೂ ಸಹಾಯಕ್ಕೆ ನಿಲ್ಲುತ್ತದೆ- ಪ್ರಧಾನಿ ಮೋದಿ

ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಭಾರತವು ತನ್ನ ಜನರನ್ನು ಯುದ್ಧ ಪೀಡಿತ ಸನ್ನಿವೇಶವಿರುವ ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಯಾವುದೇ ಭಾರತೀಯರು ಎಲ್ಲಿಯಾದರೂ ತೊಂದರೆಯಲ್ಲಿದ್ದರೆ, ದೇಶ ಯಾವಾಗಲೂ ಸಹಾಯಕ್ಕೆ ನಿಲ್ಲುತ್ತದೆ- ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಭಾರತವು ತನ್ನ ಜನರನ್ನು ಯುದ್ಧ ಪೀಡಿತ ಸನ್ನಿವೇಶವಿರುವ ಅಫ್ಘಾನಿಸ್ತಾನದಿಂದ  ಸ್ಥಳಾಂತರಿಸುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನವೀಕೃತ ಜಲಿಯನ್ ವಾಲಾ ಬಾಗ್ ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಭಾರತವು ತನ್ನ ಪೀಲೆಯನ್ನು ಯುದ್ಧ -ಅಫಘಾನಿಸ್ತಾನದಿಂದ ಸ್ಥಳಾಂತರಿಸುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಅಫ್ಘಾನಿಸ್ತಾನದಿಂದ ನೂರಾರು ಭಾರತೀಯರನ್ನು ದೇವಿ ಶಕ್ತಿ ಕಾರ್ಯಾಚರಣೆಯಡಿ ದೇಶಕ್ಕೆ ಕರೆತರಲಾಗಿದೆ. ಅಪ್ಘಾನಿಸ್ತಾನದಲ್ಲಿ ಹಲವು ಸವಾಲುಗಳಿದ್ದು, ಪರಿಸ್ಥಿತಿ ಕಠಿಣವಾಗಿದೆ ಎಂದರು.

ಜಲಿಯನ್ ವಾಲಾ ಬಾಗ್ ದೇಶದ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ ಸರ್ದಾರ್ ಉದ್ದಮ್ ಸಿಂಗ್, ಭಗತ್ ಸಿಂಗ್ ಅವರಂತಹ ಅನೇಕ ಕ್ರಾಂತಿಗಳಿಗೆ ಧೈರ್ಯ ಕೊಟ್ಟ ಸ್ಥಳವಾಗಿದೆ ಎಂದು ಪ್ರಧಾನಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.