ಅಫ್ಘಾನಿಸ್ತಾನ ಬಿಕ್ಕಟ್ಟು

ಅಫ್ಘಾನ್ ನೆಲ ಉಗ್ರವಾದಕ್ಕೆ ಬಳಕೆಯಾಗದಂತೆ ತಡೆಯಲು ಭಾರತದ ನೇತೃತ್ವದ ಭದ್ರತಾ ಸಂವಾದಲ್ಲಿ ನಿರ್ಧಾರ
ಅಫ್ಘಾನಿಸ್ತಾನ ಜಾಗತಿಕ ಭಯೋತ್ಪಾದನೆಗೆ ಸ್ವರ್ಗದಂತಾಗಲು ಅವಕಾಶ ನೀಡದಂತೆ ಕೆಲಸ ಮಾಡುವುದಕ್ಕೆ ಭಾರತ, ರಷ್ಯಾ, ಇರಾನ್ ಹಾಗೂ ಮಧ್ಯಪ್ರಾಚ್ಯದ ಐದು ರಾಷ್ಟ್ರಗಳು ದೆಹಲಿಯಲ್ಲಿ ನಡೆದ ಸಂವಾದದಲ್ಲಿ ನಿರ್ಧರಿಸಿವೆ.

ಯಾವುದೇ ಭಾರತೀಯರು ಎಲ್ಲಿಯಾದರೂ ತೊಂದರೆಯಲ್ಲಿದ್ದರೆ, ದೇಶ ಯಾವಾಗಲೂ ಸಹಾಯಕ್ಕೆ ನಿಲ್ಲುತ್ತದೆ- ಪ್ರಧಾನಿ ಮೋದಿ
ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಭಾರತವು ತನ್ನ ಜನರನ್ನು ಯುದ್ಧ ಪೀಡಿತ ಸನ್ನಿವೇಶವಿರುವ ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಫ್ಘಾನಿಸ್ತಾನ ಬಿಕ್ಕಟ್ಟು: ಕಾಬೂಲ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಫೋಟೋಗಳು
ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ಆಫ್ಘಾನಿಸ್ತಾನದ ಕಾಬೂಲ್ ನಿಂದ ತಮ್ಮ ನಾಗರೀಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಏರ್ ಲಿಫ್ಟ್ ಕಾರ್ಯಾಚರಣೆ ಆರಂಭಿಸಿದ್ದು ಈ ಕಾರ್ಯಾಚರಣೆಯ ಇತ್ತೀಚಿನ ಚಿತ್ರಗಳು ಇಲ್ಲಿವೆ.

ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿ ಉಟ್ಟ ಬಟ್ಟೆಯಲ್ಲಿಯೇ ದೇಶ ಬಿಟ್ಟು ಹೋಗಿದ್ದರು: ಮಾಜಿ ಹಿರಿಯ ಅಧಿಕಾರಿ
ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿಯವರು ತಾಲಿಬಾನಿಗಳು ರಾಜಧಾನಿ ಸೇರಿದಂತೆ ದೇಶವನ್ನು ವಶಪಡಿಸಿಕೊಳ್ಳುವಾಗ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ, ಉಟ್ಟ ಬಟ್ಟೆಯಲ್ಲಿಯೇ ಕಳೆದ ಭಾನುವಾರ ದೇಶ ಬಿಟ್ಟು ಹೋಗಿದ್ದರು ಎಂದು ಪದಚ್ಯುತ ಸರ್ಕಾರದ ಮಾಜಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಫ್ಘಾನ್ ಬಿಕ್ಕಟ್ಟು: ದೋವಲ್, ವಿದೇಶಾಂಗ ಕಾರ್ಯದರ್ಶಿ ಶೃಂಗ್ಲಾ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ನಡೆಸಿದರು.

