ದೇಶ

ಅಫ್ಘಾನಿಸ್ತಾನ ಬಿಕ್ಕಟ್ಟು: ಕಾಬೂಲ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಫೋಟೋಗಳು

ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ಆಫ್ಘಾನಿಸ್ತಾನದ ಕಾಬೂಲ್ ನಿಂದ ತಮ್ಮ ನಾಗರೀಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಏರ್ ಲಿಫ್ಟ್ ಕಾರ್ಯಾಚರಣೆ ಆರಂಭಿಸಿದ್ದು ಈ ಕಾರ್ಯಾಚರಣೆಯ ಇತ್ತೀಚಿನ ಚಿತ್ರಗಳು ಇಲ್ಲಿವೆ.

ಅಫ್ಘಾನಿಸ್ತಾನ ಬಿಕ್ಕಟ್ಟು: ಕಾಬೂಲ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಫೋಟೋಗಳು
ತಾಲಿಬಾನ್‌ನಿಂದ ಘರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ರಾಜಧಾನಿ ಕಾಬೂಲ್‌ನಿಂದ ಪ್ರಜೆಗಳು ಮತ್ತು ಅಫ್ಘಾನ್ ಪಾಲುದಾರರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಭಾಗವಾಗಿ ಭಾರತವು ಭಾನುವಾರ ಇಬ್ಬರು ಅಫ್ಘನ್ ಸಂಸದರು ಸೇರಿದಂತೆ 392 ಜನರನ್ನು ದೇಶಕ್ಕೆ ವಾಪಸ್ ಕರೆತಂದಿದೆ.
Published On :
107 ಭಾರತೀಯರು ಮತ್ತು 23 ಅಫ್ಘನ್ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ ಒಟ್ಟು 168 ಜನರನ್ನು ಕಾಬೂಲ್ ನಿಂದ ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಗೆ ಭಾರತೀಯ ವಾಯುಪಡೆಯ (IAF) C-17 ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನದಲ್ಲಿ ಸ್ಥಳಾಂತರಿಸಲಾಯಿತು.

ಐಎಎಫ್-130 ಜೆ ಸಾರಿಗೆ ವಿಮಾನದಲ್ಲಿ ತಜಕಿಸ್ತಾನದ ರಾಜಧಾನಿಗೆ ಸ್ಥಳಾಂತರಿಸಿದ ಒಂದು ದಿನದ ನಂತರ 87 ಭಾರತೀಯರು ಮತ್ತು ನೇಪಾಳದ ಪ್ರಜೆಗಳಿಬ್ಬರನ್ನು ದೂಶನ್‌ಬೆಯಿಂದ ಏರ್ ಇಂಡಿಯಾ ವಿಮಾನದಲ್ಲಿ ಕರೆತರಲಾಯಿತು.

ಪ್ರತ್ಯೇಕವಾಗಿ, ಈ ಹಿಂದೆ ಅಮೆರಿಕ ಮತ್ತು ನ್ಯಾಟೋ ವಿಮಾನದ ಮೂಲಕ ಕಳೆದ ಕೆಲವು ದಿನಗಳಲ್ಲಿ ಕಾಬೂಲ್‌ನಿಂದ ದೋಹಾಕ್ಕೆ ಸ್ಥಳಾಂತರಿಸಲ್ಪಟ್ಟ 135 ಭಾರತೀಯರನ್ನು ಕತಾರ್ ನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಹಿಂತಿರುಗಿಸಲಾಯಿತು.

ಭಾನುವಾರದ ಏರ್ ಲಿಫ್ಟ್ ನೊಂದಿಗೆ, ಆಗಸ್ಟ್ 16 ರಿಂದ ಕಾಬೂಲ್‌ನಿಂದ ಭಾರತಕ್ಕೆ ಸ್ಥಳಾಂತರಿಸಲ್ಪಟ್ಟ ಜನರ ಸಂಖ್ಯೆ 590 ಕ್ಕೆ ತಲುಪಿದೆ.

ಅಫ್ಘಾನ್ ರಾಜಧಾನಿಯಿಂದ ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಹಿಂದಿರುಗುವುದನ್ನು ಖಚಿತಪಡಿಸಿಕೊಳ್ಳಲು ಈಗ ಗಮನ ಹರಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಎಲ್ಲಾ ಭಾರತೀಯ ಪ್ರಜೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುವುದು ಸರ್ಕಾ

ಆಗಸ್ಟ್ 16 ರಂದು ಸ್ಥಾಪಿಸಲಾದ ವಿಶೇಷ ಅಫ್ಘಾನಿಸ್ತಾನ ವಿಭಾಗ ಮತ್ತು, ಸೆಲ್ 2,000 ಕ್ಕೂ ಹೆಚ್ಚು ಫೋನ್ ಕರೆಗಳನ್ನು ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿವೆ ಮತ್ತು ಕಾರ್ಯಾಚರಣೆಯ ಮೊದಲ ಐದು ದಿನಗಳಲ್ಲಿ 6,000 ಕ್ಕೂ ಹೆಚ್ಚು ವಾಟ್ಸಾಪ್ ಪ್ರಶ್ನೆಗಳಿಗೆ ಇಲಾಖೆ ಉತ್ತರಿಸಿದೆ.

ಅಮರಿಕ ಸರ್ಕಾರ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲೇ ಆಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನಿಗಳು ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳ ಮೇಲೆ ಹಿಡಿತ ಸಾಧಿಸಿದ್ದಾರೆ.

ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಜನರು ಐಎಎಫ್‌ನ ವಿಶೇಷ ವಾಪಸಾತಿ ವಿಮಾನದ ಮೂಲಕ ಹಿಜಾನ್ ಏರ್ ಫೋರ್ಸ್ ಸ್ಟೇಷನ್, ಗಾಜಿಯಾಬಾದ್, ಭಾನುವಾರ, ಆಗಸ್ಟ್ 22, 2021 ರಂದು ಆಗಮಿಸುತ್ತಿದ್ದಂತೆ ಒಬ್ಬ ವ್ಯಕ್ತಿ ತಮ್ಮ ಮಗುವನ್ನು ಹೊತ್ತೊಯ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.