ಬಾರ್ಮಾರ್ ನಲ್ಲಿ ಮಿಗ್-21 ಪತನ: ಪೈಲಟ್ ಗಳು ಸುರಕ್ಷಿತ
ಭಾರತೀಯ ವಾಯುಪಡೆಯ ಮಿಗ್-21 ಫೈಟರ್ ಜೆಟ್ ಗಳು ಬಾರ್ಮಾರ್ ನಲ್ಲಿ ಪತನಗೊಂಡಿದ್ದು, ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ.

ಬಾರ್ಮಾರ್: ಭಾರತೀಯ ವಾಯುಪಡೆಯ ಮಿಗ್-21 ಫೈಟರ್ ಜೆಟ್ ಗಳು ಬಾರ್ಮಾರ್ ನಲ್ಲಿ ಪತನಗೊಂಡಿದ್ದು, ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ.
ಪತನಗೊಂಡ ಮಿ-21 ನಲ್ಲಿದ್ದ ಪೈಲಟ್ ಗಳು ಸುರಕ್ಷಿತವಾಗಿ ಹೊರ ಹಾರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರ್ಷದಲ್ಲಿ ವರದಿಯಾಗುತ್ತಿರುವ ನಾಲ್ಕನೇ ಮಿಗ್-21 ಪತನದ ಪ್ರಕರಣ ಇದಾಗಿದ್ದು, ಮಸ್ತರ್ ನ ಗ್ರಾಮದ ಪ್ರದೇಶದಲ್ಲಿನ ನಿರ್ಜನ ಪ್ರದೇಶದಲ್ಲಿ ಸಂಜೆ 5:30 ಕ್ಕೆ ಪತನಗೊಂಡಿದೆ ಈ ಘಟನೆಯ ಬಗ್ಗೆ ಐಎಎಫ್ ತನಿಖೆಗೆ ಆದೇಶಿಸಿದೆ.
ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಬ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಎಂದಿನಂತೆ ಈ ಯುದ್ಧವಿಮಾನ ತರಬೇತಿ ಸೋರ್ಟಿಯಲ್ಲಿತ್ತು, ಪೈಲಟ್ ಗೆ ಸಣ್ಣ-ಪುಟ್ಟ ಗಾಯಗಳುಂಟಾಗಿವೆ ಹಾಗೂ ಸ್ಥಳೀಯರು ಪೈಲಟ್ ಗೆ ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯೂ ಸಂಭವಿಸಿಲ್ಲ ಪತನಗೊಂಡ ವಿಮಾನದ ಅವೇಶಗಳ ಪೈಕಿ ಕೆಲವು ಬೆಂಕಿಗೆ ಆಹುತಿಯಾಗಿದ್ದರೆ, ಇನ್ನೂ ಕೆಲವು ಚದುರಿಹೋಗಿತ್ತು ಎಂದು ಜಿಲ್ಲಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಐಎಎಫ್, 1730 ಗಂಟೆಗಳಿಗೆ ಇಂದು ಮಿಗ್-21 ಬೈಸನ್ ವೆಸ್ಟ್ರನ್ ಸೆಕ್ಟರ್ ನಲ್ಲಿ ತರಬೇತಿಯಲ್ಲಿ ನಿರತವಾಗಿದ್ದ ಯುದ್ಧವಿಮಾನ, ಪತನಗೊಂಡಿದೆ". ಟೇಕ್ ಆಫ್ ಆದ ನಂತರ ಕಾಣಿಸಿಕೊಂಡ ತಾಂತ್ರಿಕ ದೋಷ ಇದಕ್ಕೆ ಕಾರಣ ಎಂದು ತಿಳಿದುಬಂದಿದ್ದು ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


