ದೇಶ

ಭಾರತಕ್ಕಾಗಿ ಮತ್ತೆ ರಫೇಲ್ ಒಪ್ಪಂದಕ್ಕೆ ಸಿದ್ದ: ಡಸ್ಸಾಲ್ಟ್ ಏವಿಯೇಷನ್

ಭಾರತಕ್ಕಾಗಿ ಮತ್ತೊಮ್ಮೆ ರಫೇಲ್ ಒಪ್ಪಂದ ಮಾಡಿಕೊಳ್ಳಲು ತಾನು ಸಿದ್ಧವಿರುವುದಾಗಿ ಫ್ರಾನ್ಸ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿದೆ.

ಭಾರತಕ್ಕಾಗಿ ಮತ್ತೆ ರಫೇಲ್ ಒಪ್ಪಂದಕ್ಕೆ ಸಿದ್ದ: ಡಸ್ಸಾಲ್ಟ್ ಏವಿಯೇಷನ್
ರಾಫೆಲ್
Published On :

ಪ್ಯಾರಿಸ್: ಭಾರತಕ್ಕಾಗಿ ಮತ್ತೊಮ್ಮೆ ರಫೇಲ್ ಒಪ್ಪಂದ ಮಾಡಿಕೊಳ್ಳಲು ತಾನು ಸಿದ್ಧವಿರುವುದಾಗಿ ಫ್ರಾನ್ಸ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿದೆ.

ಇಂದು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾದ ಬೆನ್ನಲ್ಲೇ ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್ ಟ್ರೇಪಿಯರ್ ಅವರು, ಭಾರತೀಯ ವಾಯುಪಡೆಯು ಮತ್ತಷ್ಟು ರಾಫೆಲ್  ವಿಮಾನಗಳನ್ನು ಖರೀದಿಸಲು ಬಯಸಿದರೆ, ನಾವು ಸಂತೋಷದಿಂದ ಭಾರತಕ್ಕಾಗಿ ವಿಮಾನ ತಯಾರಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಹೊಸ ಒಪ್ಪಂದ ಅಥವಾ ಹಳೆಯ ಒಪ್ಪಂದವನ್ನು ಪುನರಾವರ್ತನೆ ಮಾಡಲೂ ಕೂಡ ತಾವು ಸಿದ್ಧ ಎಂದು ಹೇಳಿದ್ದಾರೆ.

ಇಂದು ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ರಾಫೆಲ್ ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ಅಧಿಕೃತವಾಗಿ ಸೇರಿಸುವ ಕಾರ್ಯಕ್ರಮದಲ್ಲಿ ಡಸ್ಸಾಲ್ಟ್ ಏವಿಯೇಷನ್ ನ ಸಿಇಒ ಎರಿಕ್ ಟ್ರೇಪಿಯರ್ ಅವರು ಖುದ್ಧ ಭಾಗಿಯಾಗಿದ್ದರು. 

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.