ದೇಶ

ಉತ್ತರ ಪ್ರದೇಶ: ಎಸ್‍ಪಿ ಪಕ್ಷದ ಮುಖಂಡ, ಪುತ್ರನಿಗೆ ಗುಂಡಿಟ್ಟು ಭೀಕರ ಹತ್ಯೆ, ವಿಡಿಯೋ!

ಉತ್ತರಪ್ರದೇಶದ ಸಾಂಭಾಲ್ ನಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಪುತ್ರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಈ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶ: ಎಸ್‍ಪಿ ಪಕ್ಷದ ಮುಖಂಡ, ಪುತ್ರನಿಗೆ ಗುಂಡಿಟ್ಟು ಭೀಕರ ಹತ್ಯೆ, ವಿಡಿಯೋ!
ಪ್ರತ್ಯಕ್ಷ ದೃಶ್ಯ
Published On :

ಸಾಂಭಾಲ್: ಉತ್ತರಪ್ರದೇಶದ ಸಾಂಭಾಲ್ ನಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಪುತ್ರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಈ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. 

ನರೇಗಾ ಯೋಜನೆಯಡಿಯಲ್ಲಿ ಇಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಇಬ್ಬರು ಹತ್ಯೆಯಾಗಿದ್ದಾರೆ. 

ಹಳ್ಳಿಯ ಗದ್ದೆ ಮೂಲಕ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ಪರಿಶೀಲಿಸಲು ಸಮಾಜವಾದಿ ಪಕ್ಷದ ನಾಯಕ ಛೋಟೆ ಲಾಲ್ ದಿವಾಕರ್ ಮತ್ತು ಆತನ ಪುತ್ರ ಸುನೀಲ್ ಬಂದಿದ್ದರು. ಈ ವೇಳೆ ಅದೇ ಗ್ರಾಮದವರ ಜತೆ ಜಗಳವಾಗಿದೆ. ಇಬ್ಬರು ಗ್ರಾಮಸ್ಥರ ಬಳಿ ಬಂದೂಕು ಇದ್ದಿದ್ದರಿಂದ ಮಾತಿನ ಚಕಮಿಕಿಯಲ್ಲಿ ದಿವಾಕರ್ ಹಾಗೂ ಸುನೀಲ್ ಮೇಲೆ ಗುಂಡು ಹಾರಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ. 

ಮೃತ ದಿವಾಕರ್ ಪತ್ನಿ ಶಮ್ಸೋಯ್ ಗ್ರಾಮದ ಮುಖ್ಯಸ್ಥೆಯಾಗಿದ್ದಾರೆ. ದಿವಾಕರ್ ಮತ್ತು ಸುನೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನು ಬಂಧಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.