ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ
ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಕೆಲಸ ಮಾಡುವ ಚುನಾವಣಾ ಆಯುಕ್ತರಿಗೆ ಪ್ರಮುಖ ಹುದ್ದೆಗಳು, ಸಚಿವ ಸ್ಥಾನಗಳು ಮತ್ತು ಪದ್ಮ ಪ್ರಶಸ್ತಿಗಳಂತಹ ನಾಗರಿಕ ಗೌರವಗಳನ್ನು ನೀಡುವ ಮೂಲಕ ಕಾಂಗ್ರೆಸ್ ಚುನಾವಣಾ ಆಯೋಗದ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳನ್ನು ಲಂಚದ ರೂಪದಲ್ಲಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಕೆಲಸ ಮಾಡುವ ಚುನಾವಣಾ ಆಯುಕ್ತರಿಗೆ ಪ್ರಮುಖ ಹುದ್ದೆಗಳು, ಸಚಿವ ಸ್ಥಾನಗಳು ಮತ್ತು ಪದ್ಮ ಪ್ರಶಸ್ತಿಗಳಂತಹ ನಾಗರಿಕ ಗೌರವಗಳನ್ನು ನೀಡುವ ಮೂಲಕ ಕಾಂಗ್ರೆಸ್ ಚುನಾವಣಾ ಆಯೋಗದ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ದುರ್ಬಲಗೊಳಿಸಿತ್ತು ಎಂದ ಗೋಯಲ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ, ಕಾಂಗ್ರೆಸ್ ನೀಡಿದ ಕೆಲವು ಪ್ರಶ್ನೆಗಳ ಬಗ್ಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ಚುನಾವಣಾ ಆಯುಕ್ತರನ್ನು ಯಾವ ರೀತಿ ಬಳಸಿಕೊಂಡಿದೆ ಎನ್ನುವುದನ್ನು ಮರೆತಂತೆ ಕಾಣುತ್ತಿದೆ. ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸುವ, ಚುನಾವಣೆಗೆ ಸ್ಪರ್ಧಿಸದಂತೆ ಮಾಡುತ್ತಿದ್ದ ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷದಿಂದ ಟಿಕೆಟ್ ಅನ್ನು ಮತ್ತು ಪದ್ಮ ಪ್ರಶಸ್ತಿಗಳನ್ನು ಹಂಚುತ್ತಿದ್ದರೆಂದು ಗಂಭೀರ ಆರೋಪ ಹೊರೆಸಿದ್ದಾರೆ.
ಎಲ್.ಕೆ. ಅಡ್ವಾನಿ ವಿರುದ್ಧ ಟಿ.ಎನ್. ಸೆಶನ್ ಅವರನ್ನು ಇದೇ ಕಾಂಗ್ರೆಸ್ ಚೂಬಿಟ್ಟಿತ್ತು. ನಂತರ ಅವರನ್ನು ಗುಜರಾತ್ನ ಗವರ್ನರ್ನಾಗಿ ಮಾಡಲಾಗಿತ್ತು. ಎಂ.ಎಸ್.ಗಿಲ್ರಿಗೆ ಪದ್ಮ ವಿಭೂಷಣ ಪ್ರಶಸ್ತಿ ಮೂಲಕ ಗೌರವಿಸಲಾಗಿತ್ತು ಎಂದಿದ್ದಾರೆ. 2005 ರಲ್ಲಿ ನವೀನ್ ಚಾವ್ಲಾ ಅವರನ್ನು ಸೋನಿಯಾ ಗಾಂಧಿಯೇ ನೇಮಕ ಮಾಡಿದ್ದು, ಅವರ ನಿರ್ದೇಶನದಂತೆ ಅಂದಿನ ದಿನಗಳಲ್ಲಿ ಎಲ್ಲಾ ನಡೆಯುತ್ತಿತ್ತು. ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಏನು ಕ್ರಮ ಕೈಗೊಳ್ಳದ ಪರಿಸ್ಥಿತಿಯಲ್ಲಿದ್ದರೆಂದು ಗೋಯಲ್ ಆರೋಪಿಸಿದ್ದಾರೆ.
ನಂತರ, 2009 ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಎನ್. ಗೋಪಾಲಸ್ವಾಮಿ, ಹಿಂದಿನ ಆಯುಕ್ತ ನವೀನ್ ಚಾವ್ಲಾ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದಾಗಿ ಆರೋಪಿಸಿದ್ದರು. ಆಗ ಅಂದಿನ ಪ್ರಧಾನಿ ಏನು ಕ್ರಮ ತೆಗೆದುಕೊಂಡಿರಲಲ್ಲ. ಅವರ ಕಾಂಗ್ರೆಸ್ ಅಧಿನಾಯಕಿ ಹೇಳಿದಂತೆ ಕೇಳುತ್ತಿದ್ದರು ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



