ಗುಂಡಿಟ್ಟು ಹತ್ಯೆ

ಕೆನಡಾ: ಉದ್ದೇಶಿತ ದಾಳಿ, ಗುಂಡಿಕ್ಕಿ ಪಂಜಾಬ್‌ನ ಇಬ್ಬರು ಯುವಕರ ಹತ್ಯೆ!
ಉತ್ತಮ ವೃತ್ತಿ ಹುಡುಕಾಟದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಕೆನಡಾಕ್ಕೆ ತೆರಳಿದ್ದರು. ಈ ಘಟನೆಯನ್ನು ಉದ್ದೇಶಿತ ದಾಳಿ ಎಂದು ಎಡ್ಮಂಟನ್ ಪೊಲೀಸ್ ಸೇವೆ (EPS) ಶಂಕಿಸಿದ್ದು, ತನಿಖೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ.
ಆಸ್ಪತ್ರೆಗೆ ನುಗ್ಗಿ ಗುಂಡಿಕ್ಕಿ ವಿಚಾರಣಾಧೀನ ಕೈದಿಯ ಹತ್ಯೆ: ಗ್ಯಾಂಗ್ ವೈಷಮ್ಯ ಶಂಕೆ; Video
ಹಗಲು ಹೊತ್ತಿನಲ್ಲಿಯೇ ಆಸ್ಪತ್ರೆಗೆ ನುಗ್ಗಿ ವಿಚಾರಣಾಧೀನ ಕೈದಿಯ ಹತ್ಯೆ ಮಾಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಹಾರ: ಗುಂಡಿಟ್ಟು ಉದ್ಯಮಿ, ಬಿಜೆಪಿ ನಾಯಕನ ಹತ್ಯೆ!
ಖೇಮ್ಕಾ ಮನೆಗೆ ತೆರಳುತ್ತಿದ್ದಾಗ ಗಾಂಧಿ ಮೈದಾನ ಪೊಲೀಸ್ ಠಾಣೆ ವ್ಯಾಪ್ತಿಯ ‘ಪನಾಚೆ’ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಹೋಟೆಲ್ ಪಕ್ಕದಲ್ಲೇ ಇರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಅವರು ವಾಸವಾಗಿದ್ದರು.

ಕಳ್ಳತನ ತಡೆಯಲು ಯತ್ನ: ಖದೀಮರ ಗುಂಡೇಟಿಗೆ 37 ವರ್ಷದ ಹಾಲಿವುಡ್ ನಟ ಜಾನಿ ವೆಕ್ಟರ್ ಬಲಿ!
ಹಾಲಿವುಡ್ ಸೋಪ್ ಒಪೆರಾ ನಟ ಜಾನಿ ವೆಕ್ಟರ್ ಅವರನ್ನು ಲಾಸ್ ಏಂಜಲೀಸ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜಾನಿ ವೆಕ್ಟರ್ 'ದಿ ವೆಸ್ಟ್‌ವರ್ಲ್ಡ್', 'ಸ್ಟೇಷನ್ 19', 'ಕ್ರಿಮಿನಲ್ ಮೈಂಡ್' ಮತ್ತು 'ಹಾಲಿವುಡ್ ಗರ್ಲ್' ನಂತಹ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದರು.

ಅಮೆರಿಕದಲ್ಲಿ ಭಾರತದ ಪಿಎಚ್ ಡಿ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ
ಅಮೆರಿಕದಲ್ಲಿ ಭಾರತದ ಮತ್ತೆ ವಿದ್ಯಾರ್ಥಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಒಹಿಯೋ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದ ದೆಹಲಿ ಮೂಲದ ಆದಿತ್ಯ ಅದ್ಲಾಖ ಅವರು ಕಾರಿನಲ್ಲಿ ಚಲಿಸುವಾಗಲೇ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಲಾಗಿದೆ.

ರಾಂಚಿಯಲ್ಲಿ ತಡರಾತ್ರಿ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿಕ್ಕಿ ಸಿಪಿಐ(ಎಂ) ಮುಖಂಡನ ಹತ್ಯೆ
ಜಾರ್ಖಂಡ್ ನ ರಾಂಚಿಯಲ್ಲಿ ಸ್ಥಳೀಯ ಸಿಪಿಐ(ಎಂ) ನಾಯಕ ಸುಭಾಷ್ ಮುಂಡಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪರಿಣಾಮ ಹಿಂಸಾಚಾರ ಭುಗಿಲೆದ್ದಿದೆ.

ರಾಮಗಢ ಉಪಚುನಾವಣೆಗೂ ಮುನ್ನ 35 ವರ್ಷದ ಕಾಂಗ್ರೆಸ್ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಉಪಚುನಾವಣೆಗೆ ಎರಡು ದಿನ ಮುಂಚಿತವಾಗಿ, ಜಾರ್ಖಂಡ್‌ನ ರಾಮಗಢದಲ್ಲಿ 35 ವರ್ಷದ ಕಾಂಗ್ರೆಸ್ ಮುಖಂಡನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಮಗಳೂರು: ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರಿಗೆ ಗುಂಡಿಕ್ಕಿ ಹತ್ಯೆ, ದಾಳಿಕೋರನ ಬಂಧನ
ಆಘಾತಕಾರಿ ಘಟನೆಯೊಂದರಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಂಡ್ಯದಲ್ಲಿ ಸೋಮವಾರ ಇಬ್ಬರು ವ್ಯಕ್ತಿಗಳು ಗುಂಡು ತಗುಲಿ ಸಾವಿಗೀಡಾಗಿದ್ದಾರೆ.

ಮೇಕೆಗಳು ಕಾಣೆಯಾದ ವಿಚಾರ: ತಮಿಳುನಾಡಿನಲ್ಲಿ ರೈತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿ
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೇಟ್ಟುಪಾಳ್ಯಂ ಬಳಿ ಭಾನುವಾರ ಮೇಕೆಗಳು ಕಾಣೆಯಾದ ವಿಚಾರದ ಬಗ್ಗೆ ನಡೆದ ಜಗಳದ ನಂತರ ಮುಂಜಾನೆ 58 ವರ್ಷದ ರೈತ ಚಿನ್ನಸಾಮಿ ಎಂಬುವವರಿಗೆ ಗುಂಡು ಹಾರಿಸಲಾಗಿದೆ.

