ಬೇಡಿಕೆ ಆಲಿಸದ ನಿಮ್ಮ ಆಹ್ವಾನ ನನಗೆ ಬೇಡ: ಪ್ರಧಾನಿ ಮೋದಿ ಮಹಿಳಾ ದಿನಾಚರಣೆ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ
ಭಾರತದ ಪ್ರಧಾನಿ ಅವರ ನೋಡಲು, ಅವರ ಭೇಟಿಗಾಗಿ ಇಡೀ ದೇಶವೇ ಕಾಯುತ್ತಿರುತ್ತದೆ. ಆದರೆ ಕೇವಲ 8 ವರ್ಷದ ಬಾಲಕಿಯೊಬ್ಬಳು ಖುದ್ಧು ಪ್ರಧಾನಿ ಮೋದಿ ಅವರೇ ನೀಡಿರುವ ಆಹ್ವಾನವನ್ನು ತಿರಸ್ಕರಿಸಿ ಅಚ್ಚರಿ ಮೂಡಿಸಿದ್ದಾಳೆ.

ನವದೆಹಲಿ: ಭಾರತದ ಪ್ರಧಾನಿ ಅವರ ನೋಡಲು, ಅವರ ಭೇಟಿಗಾಗಿ ಇಡೀ ದೇಶವೇ ಕಾಯುತ್ತಿರುತ್ತದೆ. ಆದರೆ ಕೇವಲ 8 ವರ್ಷದ ಬಾಲಕಿಯೊಬ್ಬಳು ಖುದ್ಧು ಪ್ರಧಾನಿ ಮೋದಿ ಅವರೇ ನೀಡಿರುವ ಆಹ್ವಾನವನ್ನು ತಿರಸ್ಕರಿಸಿ ಅಚ್ಚರಿ ಮೂಡಿಸಿದ್ದಾಳೆ.
ಹೌದು.. ಮಣಿಪುರ ಮೂಲದ ಮಕ್ಕಳ ಪರಿಸರ ಕಾರ್ಯಕರ್ತೆ ಮತ್ತು ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್, ಪ್ರಧಾನಿ ನರೇಂದ್ರ ಮೋದಿ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಲಿಸಿಪ್ರಿಯಾ ಕಂಗುಜಮ್, 'ಮೋದಿಯವರೇ ನೀವು ಆರಂಭಿಸಿರುವ ಶೀ ಇನ್ಸ್ಪೈರ್ಸ್ ಯೂ ಅಭಿಯಾನದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಭೂಮಿ ರಕ್ಷಣೆ ಕುರಿತ ನನ್ನ ಕೂಗನ್ನು ಕೇಳಿಸಿಕೊಳ್ಳದ ಹೊರತು ನೀವು ನನ್ನ ಕೆಲಸಗಳನ್ನು ಸಂಭ್ರಮಿಸಬೇಡಿ. ನಿಮ್ಮ ಈ ಗೌರವವನ್ನು ನಾನು ನಿರಾಕರಿಸುತ್ತಿದ್ದೇನೆ. ನಿಮ್ಮ ಕಿವುಡ, ಮೂಕ, ಮತ್ತು ನೇತ್ರಹೀನ ಸಂಸದರಿಗೆ ನಮ್ಮ ಸಮಸ್ಯೆಗಳು ನಮ್ಮ ಕೂಗು ಕಾಣುವುದಿಲ್ಲ. ಸರ್ಕಾರದ ಆಡಳಿತ ಕೂಡ ಸಂಸದರಿಗಿಂತ ಹೆಚ್ಚು ಬಿನ್ನವಾಗಿ ಏನೂ ಇಲ್ಲ. ಇದು ಸಂಪೂರ್ಣ ವೈಫಲ್ಯ. ಕೊನೆ ಪಕ್ಷ ಈಗಲಾದರೂ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾಳೆ.
ಇನ್ನು ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದ ನಿರ್ವಹಿಸುವಂತೆ ಮತ್ತು ತಮ್ಮ ಶೀ ಇನ್ಸ್ಪೈರ್ಸ್ ಯೂ #SheInspiresUs ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಹಿಳಾ ಸಾಧಕಿಯರಿಗೆ ಆಹ್ವಾನ ನೀಡಿದ್ದರು.
ಪ್ರಧಾನಿ ಮೋದಿ, ತಮ್ಮ ಬದುಕು ಹಾಗೂ ಕೆಲಸದ ಮೂಲಕ ನಮ್ಮ ಬದುಕಿಗೆ ಸ್ಫೂರ್ತಿ ನೀಡಲು ಮಹಿಳೆಯರಿಗೆ ಈ ಮಹಿಳಾ ದಿನದಂದು ನನ್ನ ಸಾಮಾಜಿ ಜಾಲತಾಣದ ಖಾತೆಯನ್ನು ಬಿಟ್ಟುಕೊಡುತ್ತೇನೆ. ಇದು ಲಕ್ಷಾಂತರ ಜನರರಲ್ಲಿ ಸ್ಫೂರ್ತಿಯನ್ನು ಬೆಳೆಸುತ್ತದೆ. ನೀವು ಅಂತಹ ಮಹಿಳೆಯಾ? ಅಥವಾ ನಿಮಗೆ ಅಂತಹ ಮಹಿಳೆಯ ಬಗ್ಗೆ ಗೊತ್ತಿದೆಯಾ? ಅಂತಹ ಕಥೆಗಳನ್ನು ಶೀ ಇನ್ಸ್ಪೈರ್ಸ್ ಅಸ್ ಹ್ಯಾಷ್ಟ್ಯಾಗ್ನಲ್ಲಿ ಹಂಚಿಕೊಳ್ಳಿ ಎಂದು ತಿಳಿಸಿದ್ದರು.
ಪ್ರಧಾನಿ ಮೋದಿ ಅವರ ಟ್ವೀಟ್ ಹಿನ್ನೆಲೆಯಲ್ಲಿ ಭಾರತದ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಲಿಸಿಪ್ರಿಯಾ ಕಂಗುಜಮ್ ಅವರನ್ನು ಪರಿಚಯಿಸಲಾಗಿತ್ತು. ಬಳಿಕ ಮೋದಿ ಅವರು ಲಿಸಿಪ್ರಿಯಾ ಕಂಗುಜಮ್ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಬಾಲಕಿ ಅದನ್ನು ನಿರಾಕರಿಸಿದ್ದಾರೆ. ಹೀಗಾಗಿ ನಾಳೆ ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಭಾರತದ ಮೊದಲ ಪ್ಯಾರಟ್ರೂಪರ್ ತಂಡದ ಕ್ಯಾಪ್ಟನ್ ಆಗಿದ್ದ ರುಚಿ ಶರ್ಮಾ ನಿರ್ವಹಿಸಲಿದ್ದಾರೆ.
Dear @narendramodi Ji,
Please don’t celebrate me if you are not going to listen my voice.
Thank you for selecting me amongst the inspiring women of the country under your initiative #SheInspiresUs. After thinking many times, I decided to turns down this honour.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


