ಅಯೋಧ್ಯೆ ರಾಮ ಮಂದಿರದ ಅಂಗಳವನ್ನು ಅಲಂಕರಿಸಲಿವೆ ರಾಮಾಯಣದ ಉಲ್ಲೇಖಿತ ತ್ರೇತಾಯುಗದ ಮರಗಳು!
ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದ್ದು, ಮಂದಿರದ ಸುತ್ತಮುತ್ತಲ ಪ್ರದೇಶವನ್ನು ಅಲಂಕರಿಸುವುದದಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಲನಕ್ಷೆ ಸಿದ್ಧಪಡಿಸಿದೆ.

ಅಯೋಧ್ಯೆ: ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದ್ದು, ಮಂದಿರದ ಸುತ್ತಮುತ್ತಲ ಪ್ರದೇಶವನ್ನು ಅಲಂಕರಿಸುವುದದಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಲನಕ್ಷೆ ಸಿದ್ಧಪಡಿಸಿದೆ.
ವಿವಿಧ ಗಿಡಗಳು ಹಾಗೂ ಮರಗಳನ್ನು ನೆಡುವುದಕ್ಕೆ ಟ್ರಸ್ಟ್ ಯೋಜನೆ ರೂಪಿಸಿದ್ದು, ರಾಮಾಯಣದಲ್ಲಿ ಉಲ್ಲೇಖಗೊಂಡಿದ್ದ ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ತ್ರೇತಾಯುಗದ ಮರಗಳ ಪ್ರಬೇಧದ ಮರಗಳನ್ನೇ ಮಂದಿರದ ಸಂಕೀರ್ಣದಲ್ಲಿ ನೆಡಲಾಗುತ್ತದೆ.
ಟ್ರಸ್ಟ್ ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚನೆಯಾಗಿದ್ದು 65 ಎಕರೆ ಭೂಮಿಯಲ್ಲಿ ಈ ಮರಗಳನ್ನು ಬೆಳೆಸಲಾಗುತ್ತದೆ.
ಪೀಪಲ್, ಬರ್ಗಾದ್ (ಆಲದ ಮರ) ದೇವದಾರು, ಸೀತಾ ಅಶೋಕ, ಪಾರಿಜಾತ, ಸಾಲ್, ಮಾವಿನ ಮರ, ನಾಗಕೇಸರ, ಶ್ರೀಗಂಧದ ಮರಗಳು ರಾಮಾಯಣದಲ್ಲಿ ವಿಶೇಷವಾಗಿ ಉಲ್ಲೇಖಗೊಂಡಿದೆ. ರಾಮಮಂದಿರದ ಪ್ರದೇಶದಲ್ಲಿ ನಕ್ಷತ್ರ ವಾಟಿಕಾ ಪ್ರಮುಖ ಆಕರ್ಷಣೆಯಾಗಿರಲಿದ್ದು, ಪ್ರತಿಯೊಂದು ಮರವೂ ಒಂದೊಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿರುವ ರಾಶಿಯನ್ನು ಪ್ರತಿನಿಧಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


