ಮರಗಳು

ಸುರಂಗ ಯೋಜನೆ ಎಫೆಕ್ಟ್: ಲಾಲ್‌ಬಾಗ್‌ನ 276 ಮರಗಳಿಗೆ ಕುತ್ತು; ಸಸ್ಯಕಾಶಿಯ ಭದ್ರತಾ ಕೊಠಡಿಗೆ ಹಾನಿ?
ಹೆಬ್ಬಾಳ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಕೆಎಸ್‌ಆರ್‌ಪಿ ಜಂಕ್ಷನ್‌ವರೆಗಿನ ಸುರಂಗ ರಸ್ತೆಯು ಉದ್ಯಾನವನದ ಮರಗಳ ಹೊದಿಕೆ ಮತ್ತು ಕೆಲವು ರಚನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

Bengaluru Rains: ನಗರದಲ್ಲಿ 128 ಮರಗಳು ಧರಾಶಾಹಿ; ಹವಾಮಾನ ಇಲಾಖೆ orange alert!
ಬೆಂಗಳೂರಿನಲ್ಲಿ ಸಂಜೆ 4 ಗಂಟೆ ವೇಳೆಗೆ ಸತತ 1 ಗಂಟೆಗೂ ಅಧಿಕ ಸಮಯ ಸುರಿದ ಧಾರಾಕಾರ ಮಳೆಯ ಪರಿಣಾಮ ಒಟ್ಟು 128 ಮರಗಳು ಧರೆಗೆ ಉರುಳಿವೆ.

'ಬಿಪೊರ್ ಜೋಯ್' ಅಬ್ಬರ: ಗುಜರಾತ್ ನ ಭಾವನಗರ ಜಿಲ್ಲೆಯಲ್ಲಿ ತಂದೆ-ಮಗ ಸಾವು, ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು
ನಿನ್ನೆ ಗುರುವಾರ ಸಂಜೆ ಗುಜರಾತಿನ ಜಖೌ ಬಂದರಿನ ಬಳಿ ಬಿಪೊರ್‌ಜೋಯ್ ಚಂಡಮಾರುತ ತೀವ್ರ ಪ್ರಮಾಣದಲ್ಲಿ ಬೀಸಿ ಭೂಕುಸಿತವನ್ನು ಉಂಟುಮಾಡಿತು, ಗಂಟೆಗೆ 115-125 ಕಿಲೋಮೀಟರ್ ವೇಗದಲ್ಲಿ 140 ಕಿಲೋ ಮೀಟರ್ ಪ್ರದೇಶದವರೆಗೆ ಗಾಳಿ ಬೀಸಿದ್ದು ಭಾರಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋಗಾಗಿ ಎರಡು ವರ್ಷಗಳಲ್ಲಿ ಕಡಿದ ಮರಗಳೆಷ್ಟು ಗೊತ್ತಾ? ಇಲ್ಲಿದೆ ಬೆಚ್ಚಿಬೀಳಿಸುವ ವರದಿ..
2021 ರಿಂದ 2023ರ ನಡುವೆ ನಮ್ಮ ಮೆಟ್ರೋ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರದಿಯೊಂದು ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ.

ರಸ್ತೆ ಅಪಘಾತ ಪ್ರಕರಣದ ಅಪರಾಧಿಗೆ ದಿನಕ್ಕೆ 5 ಬಾರಿ ನಮಾಜ್, 2 ಗಿಡ ನೆಡುವುದೇ ಶಿಕ್ಷೆ: ಕೋರ್ಟ್ ಆದೇಶ
ರಸ್ತೆ ಅಪಘಾತ ಪ್ರಕರಣದಲ್ಲಿನ ಗಲಾಟೆ ಪ್ರಕರಣದ ಅಪರಾಧಿಯೊಬ್ಬನಿಗೆ ದಿನಕ್ಕೆ 5 ಬಾರಿ ನಮಾಜ್ ಮಾಡುವುದು ಹಾಗೂ 2 ಗಿಡಗಳನ್ನು ನೆಡುವುದೇ ಕೋರ್ಟ್ ನೀಡುತ್ತಿರುವ ಶಿಕ್ಷೆಯಾಗಿದೆ ಎಂದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಮಾಲೇಗಾಂವ್ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

ನಿಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೋಡ್‌ಗಳನ್ನು ಸ್ಕ್ಯಾನ್ ಮಾಡಿ!
ನಿಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೆ ಸಾಕು. ಮರಗಳ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಲು ಇಂತಹ ಕೋಡ್‌ಗಳ ಮೇಲೆ ರಾಜ್ಯ ಪರಿಸರ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.

ರಕ್ಷಾ ಬಂಧನ್: ಮರಗಳಿಗೆ ರಾಖಿ ಕಟ್ಟಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್!
ರಕ್ಷಾ ಬಂಧನ್ ಆಚರಣೆ ಅಂಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜೆಡಿಯು ಪಕ್ಷದ ಮುಖ್ಯಸ್ಥರು ಆಗಿರುವ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ.

ಬೆಂಗಳೂರು: ಕೊಡಲಿ ಬೀಳಲಿರುವ 6300 ಮರಗಳ ರಕ್ಷಣೆಗೆ ಕೈ ಜೋಡಿಸಿದ ಸ್ಥಳೀಯರು, ಪರಿಸರ ಪ್ರೇಮಿಗಳು
ಸಿಂಗನಾಯಕನಹಳ್ಳಿ ಕೆರೆ ಪುನರುಜ್ಜೀವನಗೊಳಿಸುವುದಕ್ಕಾಗಿ 6,316 ಮರಗಳಿಗೆ ಕೊಡಲಿ ಹಾಕಲು ಅರಣ್ಯ ಇಲಾಖೆ ಮುಂದಾಗಿದ್ದು, ಇದೀಗ ಅವುಗಳ ರಕ್ಷಣೆಗೆ ನಾಗರಿಕರು ಹಾಗೂ ಪರಿಸರ ಪ್ರೇಮಿಗಳು ಕೈ ಜೋಡಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರದ ಅಂಗಳವನ್ನು ಅಲಂಕರಿಸಲಿವೆ ರಾಮಾಯಣದ ಉಲ್ಲೇಖಿತ ತ್ರೇತಾಯುಗದ ಮರಗಳು!
ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದ್ದು, ಮಂದಿರದ ಸುತ್ತಮುತ್ತಲ ಪ್ರದೇಶವನ್ನು ಅಲಂಕರಿಸುವುದದಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಲನಕ್ಷೆ ಸಿದ್ಧಪಡಿಸಿದೆ.

