ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ- ಸಲ್ಮಾನ್ ಖುರ್ಷಿದ್
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ ಎಂದು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.ಸೋನಿಯಾ ಗಾಂಧಿ ಪ್ರಸ್ತುತ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಯಕತ್ವ ವಿಚಾರವನ್ನು ಬಗೆಹರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ ಎಂದು ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.ಸೋನಿಯಾ ಗಾಂಧಿ ಪ್ರಸ್ತುತ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು,ನಾಯಕತ್ವ ವಿಚಾರವನ್ನು ಬಗೆಹರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಕ್ರಿಯ ಹಾಗೂ ಪೂರ್ಣ ಅವಧಿಯ ಅಧ್ಯಕ್ಷರು ಸೇರಿದಂತೆ ಸಾಂಸ್ಥಿಕ ಬದಲಾವಣೆ ಬಯಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಗುಂಪು ತಮ್ಮನ್ನು ಸಂಪರ್ಕಿಸಿದ್ದರೂ ತಾವು ಮಾತ್ರ ಸಹಿ ಹಾಕುತ್ತಿರಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಗಾಂಧಿ ಕುಟುಂಬದ ಆಪ್ತರು ಆಗಿರುವ ಸಲ್ಮಾನ್ ಖುರ್ಷಿದ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪಕ್ಷದೊಳಗೆ ಬದಲಾವಣೆಯಾಗದಿದ್ದರೆ ಹಲವು ವರ್ಷ ಕಳೆದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದಿಲ್ಲ ಎಂದು ಗುಲಾಂ ನಬಿ ಆಜಾದ್
ಸೇರಿದಂತೆ 23 ಮುಖಂಡರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಪಕ್ಷದ ವೇದಿಕೆಯೊಳಗೆ ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.
ನನ್ನಂತವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕರಾಗಿದ್ದಾರೆ.ಆದ್ದರಿಂದ ಅಧ್ಯಕ್ಷರ ಆಯ್ಕೆಗೆ ಆತುರವೇನಿಲ್ಲ, ಅಧ್ಯಕ್ಷರು ಆಯ್ಕೆ ಯಾವಾಗ ಆಗಬೇಕೋ ಆಗ ಆಗಲಿದೆ. ಸ್ವರ್ಗವೇನೂ ಕೆಳಗೆ ಬರುವುದಿಲ್ಲ, ಇದಕ್ಕೆ ಆತುರ ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.
ನಮಗೆ ಅಲ್ಪಾವಧಿಯ ಅಧ್ಯಕ್ಷರು ಬೇಕಾಗಿಲ್ಲ, ಪೂರ್ಣ ಅವಧಿಯ ಅಧ್ಯಕ್ಷರು ಬೇಕು ಆದರೆ, ಪೂರ್ಣ ಅವಧಿಯ ಅಧ್ಯಕ್ಷರು ಹಂಗಾಮಿ
ಅಧ್ಯಕ್ಷರಾಗಿದ್ದು, ಸಾಮಾನ್ಯ ವ್ಯಕ್ತಿಗಳು ಹಂಗಾಮಿ ಅಧ್ಯಕ್ಷರಾಗಿ ಇರಲ್ಲ, ಸೋನಿಯಾ ಗಾಂಧಿ ಅನೇಕ ವರ್ಷಗಳ ಕಾಲ ಅಧ್ಯಕ್ಷರಾಗಿ
ಸೇವೆ ಸಲ್ಲಿಸಿದ್ದಾರೆ. ನಾವು ನಂಬಿಕೆ ಮಾತ್ರ ಇಡಬೇಕಾಗಿದೆ. ಸೋನಿಯಾ ಗಾಂಧಿ ಅವರು ಸೂಕ್ತ ಸಂದರ್ಭದಲ್ಲಿ ಈ ಸಂಬಂಧ
ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


