ನಾಯಕತ್ವ

ನೀವೇಕೆ ಕೆಳಗಿಳಿಯುತ್ತಿಲ್ಲ ಎಂದು ಜನ ಕೇಳುವಂತಾಗದಿರಲಿ, ಸ್ಮೃತಿ ಮಂಧಾನಾ ದೀರ್ಘಕಾಲದಿಂದ ಕಾಯುತ್ತಿದ್ದಾರೆ; ಭಾರತದ ಮಾಜಿ ಆಟಗಾರ್ತಿ!
ನಾಯಕತ್ವದ ಸುಗಮ ಹಸ್ತಾಂತರ ಖಚಿತಪಡಿಸಿಕೊಳ್ಳಲು, 30 ವರ್ಷದ ಮಂಧಾನಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಯುವ ಆಟಗಾರ್ತಿಯೊಬ್ಬರನ್ನು ಉಪನಾಯಕಿಯನ್ನಾಗಿ ನೇಮಿಸಬೇಕು ಎಂದರು.

'ಬೇರೆ ಯಾರೂ ಬೇಕಾಗಿಲ್ಲ': 'ಆರಾಧ್ಯ ದೈವ' ವಿರಾಟ್ ಕೊಹ್ಲಿ ಬಗ್ಗೆ RCB ನಾಯಕ ರಜತ್ ಪಾಟೀದಾರ್ ಅಚ್ಚರಿಯ ಹೇಳಿಕೆ
ಪಾಟಿದಾರ್ ಅವರ ನಾಯಕತ್ವದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ RCB ಚೊಚ್ಚಲ 2025ರ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 2026ರ ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

'ಯಾವುದೇ ಕಾರಣಕ್ಕೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಒಪ್ಪಿಕೊಳ್ಳಬೇಡಿ, ಕೆಎಲ್ ರಾಹುಲ್‌ಗೆ ಬಿಟ್ಟುಕೊಡಿ': ರಿಷಬ್ ಪಂತ್‌ಗೆ ಮಾಜಿ ಆಟಗಾರ ಸಲಹೆ!
ಎಲ್‌ಎಸ್‌ಜಿ ತಂಡದ ನಾಯಕರಾಗಿ ಪಂತ್ ಅವರ ಎರಡು ಸೀಸನ್‌ಗಳು ನಿರೀಕ್ಷೆಯಂತೆ ಇರಲಿಲ್ಲ. ತಂಡವು 2025 ಮತ್ತು 2026ರಲ್ಲಿ ಕ್ರಮವಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಹಾಗೂ ಕೊನೆಯ ಸ್ಥಾನವನ್ನು ಪಡೆಯಿತು.

ಡಿ.ಕೆ ಶಿವಕುಮಾರ್ ಸಂಪುಟದಲ್ಲಿ 34ನೇ ಸಚಿವರು ಯಾರಾಗುತ್ತಾರೆ?: ಕಾಂಗ್ರೆಸ್ ನಾಯಕತ್ವಕ್ಕೇ ಕಗ್ಗಂಟು
ಆದರೆ, ಆ ಶಿಫಾರಸಿನ ಹೊರತಾಗಿಯೂ ಅಂತಿಮವಾಗಿ ಚರ್ಚೆಗೆ ಬಂದ ಹೆಸರು ಬದಲಾಗಿದ್ದು, ವಾಸ್ತವವಾಗಿ ಏನಾಯಿತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

'Delayed, not denied': ಇಷ್ಟು ವರ್ಷ ಪಟ್ಟ ಪರಿಶ್ರಮ, ಬದ್ಧತೆಗೆ ದೊರೆತ ಪ್ರತಿಫಲ- ನಿಯೋಜಿತ ಸಿಎಂ ಡಿ.ಕೆ ಶಿವಕುಮಾರ್
ತನ್ನ ರಾಜಕೀಯ ಜೀವನ ವೈಯಕ್ತಿಕ ಮಹತ್ವಕಾಂಕ್ಷೆಗಿಂತಲೂ ಕಠಿಣ ಪರಿಶ್ರಮದ ಮೇಲೆ ರೂಪುಗೊಂಡಿದೆ. ಈ ಹಂತ ತಲುಪುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ವದ್ದಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
'ಅದಕ್ಕಾಗಿಯೇ ನಾನು ಅಲ್ಲಿಂದ ಹೊರಬಂದೆ': ಟೆಸ್ಟ್ ನಾಯಕತ್ವದಿಂದ ನಿರ್ಗಮಿಸಿದ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
ಭಾರತದ ನಾಯಕತ್ವದಿಂದ ಕೆಳಗಿಳಿದ ನಂತರ ತಾನು ಸಂಕಷ್ಟ ಎದುರಿಸಿದೆ. ಆದರೆ, ಕ್ರಿಕೆಟ್ ಆಡುವ ಆನಂದವನ್ನು ಮತ್ತೆ ಕಂಡುಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋರ್ ಅವರಿಗೆ ಅಪಾರ ಧನ್ಯವಾದಗಳು ಎಂದರು.
'ಆ ಆಲೋಚನೆಯೇ ನನಗೆ ಬಂದಿಲ್ಲ, ರುತುರಾಜ್ ತುಂಬಾ ಒಳ್ಳೆಯವರು': CSK ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ
ಸಿಎಸ್‌ಕೆಗೆ ಆಗಮಿಸಿದಾಗಿನಿಂದ, ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಕೆಳಗಿಳಿಸಿ ಸಂಜು ಸ್ಯಾಮ್ಸನ್ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬ ಬಗ್ಗೆ ನಿರಂತರ ಊಹಾಪೋಹಗಳು ಕೇಳಿಬರುತ್ತಿವೆ.
'ಈಗ MI ತಂಡದಂತೆ ಭಾಸವಾಯಿತು, ಸೂರ್ಯಕುಮಾರ್ ಯಾದವ್ ನಾಯಕತ್ವ ಉತ್ತಮವಾಗಿತ್ತು': ದೀಪಕ್ ಚಾಹರ್ ಸಹೋದರಿ ಪೋಸ್ಟ್ ವೈರಲ್
ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಸೋತ ನಂತರ, ಐದು ಬಾರಿಯ ಚಾಂಪಿಯನ್ ಮುಂಬೈ ತಂಡಕ್ಕೆ ಈ ಗೆಲುವು ಪ್ರಮುಖ ಉತ್ತೇಜನ ನೀಡಿತು ಮತ್ತು ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿತು.
PSLನಲ್ಲಿ ಅದ್ಭುತ ಪ್ರದರ್ಶನ: ಪಾಕಿಸ್ತಾನ ನಾಯಕನಾಗಿ ಮರಳುತ್ತಾರಾ ಬಾಬರ್ ಅಜಂ?; ಸ್ಟಾರ್ ಆಟಗಾರ ಹೇಳುವುದೇನು?
ಬಾಬರ್ ಪಿಎಸ್ಎಲ್ 11ನೇ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪೇಶಾವರ್ ಝಲ್ಮಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದು, ಎರಡು ಶತಕಗಳು ಸೇರಿದಂತೆ ಗಣನೀಯ ರನ್‌ಗಳನ್ನು ಗಳಿಸಿದ್ದಾರೆ.

