ಗುಂಪು ಹತ್ಯೆ ಕುರಿತು ಮೋದಿಗೆ ಬಹಿರಂಗ ಪತ್ರ: ಅಪರ್ಣ, ರಾಮಚಂದ್ರ ಗುಹಾ ಸೇರಿ 49 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದ ಮಣಿರತ್ನಂ, ರಾಮಚಂದ್ರ ಗುಹಾ, ಅಪರ್ಣ ಸೇನ್ ಸೇರಿದಂತೆ 49 ಗಣ್ಯರ ವಿರುದ್ಧ ಮುಜಾಫರ್ ಪುರದಲ್ಲಿ ಶುಕ್ರವಾರ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಪಾಟ್ನ: ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದ ಮಣಿರತ್ನಂ, ರಾಮಚಂದ್ರ ಗುಹಾ, ಅಪರ್ಣ ಸೇನ್ ಸೇರಿದಂತೆ 49 ಗಣ್ಯರ ವಿರುದ್ಧ ಮುಜಾಫರ್ ಪುರದಲ್ಲಿ ಶುಕ್ರವಾರ ದೇಶದ್ರೋಹ ಪ್ರಕರಣ ದಾಖಲಾಗಿದೆ.
ವಕೀಲ ಸುಧೀರ್ ಕುಮಾರ್ ಓಜ್ಙಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಆದೇಶ ಹೊರಡಿಸಿದ 2 ತಿಂಗಳುಗಳ ಬಳಿಕ 49 ಗಣ್ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸದಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವ ಗಣ್ಯರ ಬಗ್ಗೆ ನಾನು ಸಲ್ಲಿಸಿರುವ ಅರ್ಜಿಯ ಕುರಿತು ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಆ.20ರಂದು ಆದೇಶ ಹೊರಡಿಸಿದ್ದರು. ಪತ್ರದಲ್ಲಿ 49 ಗಣ್ಯರ ಸಹಿಗಳನ್ನು ಅರ್ಜಿಯಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಇವರ ಮೇಲೆ ದೇಶದ ಘನತೆಗೆ ಧಕ್ಕೆ ತಂದಿರುವ ಹಾಗೂ ಏಕಾಂತ ಪ್ರವೃತ್ತಿಯನ್ನು ಬೆಂಬಲಿಸುವ ಜೊತೆಗೆ ಪ್ರಧಾನಿ ಮೋದಿಯವರು ಅದ್ಭುತ ಕಾರ್ಯಕ್ಷಮತೆ ದುರ್ಬಲಗೊಳಿಸಿದ್ದಾರೆಂದು ಆರೋಪಿಸಲಾಗಿದೆ ಎಂದು ಓಝ್ಹಾ ಹೇಳಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಚಿತ್ರ ನಿರ್ಮಾಪಕ ಮಣಿರತ್ನಂ, ನಟಿ ಸೌಮಿತ್ರಾ ಚಟರ್ಜಿ, ಶ್ಯಾಮ್ ಬೆನಗಲ್, ಅನುರಾಗ್ ಕಶ್ಯಪ್ ಹಾಗೂ ಶುಭಾ ಮುದ್ಗಲ್ ಸೇರಿದಂತೆ 49 ಗಣ್ಯ ವ್ಯಕ್ತಿಗಳು ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು, ಪತ್ರದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದರು.
ದೇಶದಾದ್ಯಂತ ದಲಿತರು, ಮುಸ್ಲಿಮರು ಹಾಗೂ ಅಲ್ಪ ಸಂಖ್ಯಾತರನ್ನು ಗುಂಪು ಹತ್ಯೆಯಲ್ಲಿ ಕೊಲ್ಲುವ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು. ಭಿನ್ನಾಭಿಪ್ರಾಯವಿಲ್ಲದೆ ಯಾವುದೇ ಪ್ರಜಾಪ್ರಭುತ್ವ ಇರುವುದಿಲ್ಲ. ಜೈ ಶ್ರೀರಾಮ್ ಎಂಬ ವಾಕ್ಯ ಪ್ರಚೋದನಕಾರಿ ಯುದ್ಧದ ಕೂಗಿನಂತೆ ಕೇಳಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


